ಮೈಸೂರ ದಸರಾ ವೈಭವ | ✍ ಸಿದ್ದೀಖ್ ಶನಿವಾರಸಂತೆ


✍.ಸಿದ್ದೀಕ್ ಶನಿವಾರಸಂತೆ,ಕೊಡಗು

ಬಂತು ಬಂತು ನಾಡ ಹಬ್ಬ
ಮೈಸೂರ ದಸರಾ ಹಬ್ಬ

ವೇಷ ಭೂಷಣವ ಧರಿಸಿ
ಕುಣಿದರು ಊರು ತುಂಬಾ
ಬಣ್ಣ ಬಣ್ಣದ ದೀಪಗಳಿಂದ
ಕಂಗೊಳಿಸಿತು ಬೀದಿ ತುಂಬಾ

ಆನೆಯ ಮೇಲೆ ಇರಿಸಿದರು
ಚಿನ್ನದ ಅಂಬಾರಿ
ಲಕ್ಷ ಜನರೊಂದಿಗೆ ಸಾಗುವುದು
ಜಂಬೂ ಸವಾರಿ

ಬಂತು ಬಂತು ನಾಡ ಹಬ್ಬ
ಮೈಸೂರ ದಸರಾ ಹಬ್ಬ
ವಿದೇಶಿಗರ ಕಣ್ತುಂಬಿಕೊಳ್ಳುವ ಹಬ್ಬ
ಮೈಸೂರ ದಸರಾ ಹಬ್ಬ

ವಿವಿಧ ಕಸರತ್ತುಗಳ ಚಮತ್ಕಾರ
ನೋಡಿ ಕಣ್ತುಂಬಿಕೊಳ್ಳಬೇಕು ಈದಿನ
ಬಾನಂಗಳದಲಿ ಲೇಸರ್ ಲೈಟುಗಳ
ಬಣ್ಣ ಬಣ್ಣದ ಬೆಳಕಿನಾಟದ ಸುದಿನ

ಚಿನ್ನದ ಅಂಬಾರಿಯ ಮೇಲೆ
ಮಹರಾಜರ ಸವಾರಿ
ಮೆರವಣಿಗೆಯ ಮೂಲಕ ಸಾಗಿತು
ಬನ್ನಿಮಂಟಪಕ್ಕೆ ಸವಾರಿ

ಬಂತು ಬಂತು ನಾಡ ಹಬ್ಬ
ಮೈಸೂರ ದಸರಾ ಹಬ್ಬ
ಇದೆ ನೋಡಿ ನಮ್ಮೂರ ಹಬ್ಬ
ಮೈಸೂರ ದಸರಾ ಹಬ್ಬ


Previous Post
Next Post

0 Post a Comment: