ಇತಿಹಾಸ ಮತ್ತು ಪರಂಪರೆ ಕುರಿತ ಉಪನ್ಯಾಸ ಹಾಗೂ ನಾಣ್ಯ ಮತ್ತು ಅಂಚೆ ಚೀಟಿಗಳ ಪ್ರದರ್ಶನ

      ಮಡಿಕೇರಿ TOC:-ಇತಿಹಾಸ ಬಿಟ್ಟು ಪರಂಪರೆಯಿಲ್ಲ, ಪರಂಪರೆ ಬಿಟ್ಟು ಇತಿಹಾಸವೆಂಬುದಿಲ್ಲ ಅದನ್ನು ಉಳಿಸಿ-ಬೆಳೆಸುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಶಕ್ತಿ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ ಅವರು ತಿಳಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಇತಿಹಾಸ ವಿಭಾಗ ವತಿಯಿಂದ ಐ.ಕ್ಯು.ಎ.ಸಿ ಸಹಯೋಗದೊಂದಿಗೆ ನಡೆದ ಇತಿಹಾಸ ಮತ್ತು ಪರಂಪರೆ ಕುರಿತ ಉಪನ್ಯಾಸ ಹಾಗೂ ನಾಣ್ಯ ಮತ್ತು ಅಂಚೆ ಚೀಟಿಗಳ  ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 
ಭಾರತ ದೇಶವನ್ನು ನೂರಾರು ರಾಜರು, ಚಕ್ರವರ್ತಿಗಳು ಆಳಿದ್ದಾರೆ. ದೇಶದ ಆಳ್ವಿಕೆಗಾಗಿ ಸಾಕಷ್ಟು ಪೈಪೆÇೀಟಿಗಳು ಸಹ ನಡೆದಿವೆ. ಇತಿಹಾಸದ ಪುಟಗಳನ್ನು ನೋಡಿದಾಗ ಶಾಂತಿಗಿಂತ ಸಂಗ್ರಾಮ, ಯುದ್ಧದ ವಿಚಾರಗಳೇ ಹೆಚ್ಚಿವೆ. ಆದರೆ ಆಧುನಿಕ ಸಮಾಜದಲ್ಲಿ ವಿಚಾರಗಳನ್ನು ಅರಿತಂತೆ ಶಾಂತಿ ಸೌಹಾರ್ದತೆಗೆ ಹೆಚ್ಚು ಒತ್ತು ನೀಡಲಾಗಿದೆ. ಮಾನವೀಯತೆಯ ನೋಟಗಳು ಇಂದು ನಮ್ಮ ಸಮಾಜದಲ್ಲಿದೆ ಎಂದರು.
ಭಾರತ ದೇಶ ಶಾಂತಿ ಪ್ರಿಯವಾದ ದೇಶ. ಅಹಿಂಸಾ ತತ್ವವನ್ನು ವಿಶ್ವಕ್ಕೆ ಸಾರಿದ ಇತಿಹಾಸವುಳ್ಳ ದೇಶವಾಗಿದೆ. ಈ ದೇಶದ ಶಾಂತಿ ಕದಡುವ ಕೆಲಸವನ್ನು ಯಾರು ಮಾಡಬಾರದು. ಈ ನಾಡಿನ ಪರಂಪರೆ ನಾವು ಮರೆಯಬಾರದು. ವಿದ್ಯೆ ಪಡೆಯುವುದು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. 
ಜೀವನದಲ್ಲಿ ಸದುದ್ದೇಶ, ಸದ್ವಿಚಾರಗಳನ್ನು ಹೊಂದಿರಬೇಕು.  ಜೀವನದಲ್ಲಿ ಏನಾದರು ಸಾಧನೆ ಮಾಡಲು ಸತತ ಪರಿಶ್ರಮ ಬೇಕು. ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ರಚನಾತ್ಮಕ ಚಿಂತನೆಗಳಿರಬೇಕು. ದೇಶದ, ಜಿಲ್ಲೆಯ ಸಂಸ್ಕøತಿ ಪರಂಪರೆ ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ವಿದ್ಯಾರ್ಥಿ ಸಮೂಹಕ್ಕೆ ಕಿವಿಮಾತು ಹೇಳಿದರು.
ಬಳಿಕ ಮಾತನಾಡಿದ ಬೆಂಗಳೂರಿನ ಆರ್.ಬಿ.ಎ.ಎನ್.ಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ವಿ.ಅವಿನಾಶ್ ಅವರು, ಇತ್ತೀಚಿನ ದಿನಗಳಲ್ಲಿ ಮಾನವಿಕ ವಿಷಯಗಳ ಅಧ್ಯಯನದ ಬಗ್ಗೆ ಸಾಕಷ್ಟು ಜನರಲ್ಲಿ ನಿರ್ಲಕ್ಷ್ಯ ಭಾವವಿದೆ. ಆದರೆ ಮಾನವಿಕ ವಿಷಯಗಳು ಉತ್ತಮ ಸಮಾಜದ ನಿರ್ಮಾಣಕ್ಕೆ ಅತೀ ಅವಶ್ಯಕ ಎಂದರು. 
ಸಮಾಜಕ್ಕೆ ಸಂದೇಶ ನೀಡಲು ಇತಿಹಾಸ ಅಗತ್ಯ. ಬ್ರಿಟಿಷರು ಅವರ ಆಳ್ವಿಕೆಯ ಕಾಲದಲ್ಲಿ ಭಾರತಕ್ಕೆ ತನ್ನದೇ ಆದಂತಹ ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆ ಇದೆ. ಇತಿಹಾಸ ಅಧ್ಯಯನದಿಂದ ಪುರಾತನ ಪ್ರಾಚೀನ ಸಂಸ್ಕೃತಿಯ ವೈಭವವನ್ನು ಅರಿಯಲು ಸಾಧ್ಯವಿದೆ. ಇತಿಹಾಸ ಎಂಬುದು ಒಂದು ದೇಶದ ಪ್ರಜ್ಞೆ ಇದ್ದಂತೆ. ಈ ನಿಟ್ಟಿನಲ್ಲಿ ಇತಿಹಾಸ ಅಧ್ಯಯನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಇರಬಾರದು ಎಂದು ನುಡಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಜಗತ್ ತಿಮ್ಮಯ್ಯ ಅವರು ಮಾತನಾಡಿ, ಇತಿಹಾಸ ವಿಭಾಗ ಇಂದು ಅತ್ಯಂತ ಉಪಯುಕ್ತ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಷಯ ಎಂದರು.

       ವಿಜ್ಞಾನ ಸಂಶೋಧನೆಗೆ ಮಾತ್ರವೇ ಸೀಮಿತವಾಗಿರುತ್ತದೆ. ಆದರೆ ಹಿಂದೆ ನಡೆದ ಅದೆμÉ್ಟೂೀ ಐತಿಹಾಸಿಕ ಘಟನೆಗಳ ಮೇಲೆ ಇತಿಹಾಸ ಬೆಳಕು ಚೆಲ್ಲುತ್ತದೆ ಎಂದು ತಿಳಿಸಿದರು.  
ನಾಣ್ಯ ಸಂಗ್ರಹಕಾರರಾದ ಅಜಯ್ ನಾರಾಯಣ್ ರಾವ್ ಮಾತನಾಡಿ, ನಾಣ್ಯಗಳು ಹಲವಾರು ರಾಜರ ಬಗ್ಗೆ ನಮಗೆ ಮಾಹಿತಿ ನೀಡುತ್ತದೆ. ತಾಮ್ರ ಸೇರಿದಂತೆ ಇನ್ನಿತರ ಲೋಹಗಳ ಬಗ್ಗೆ ತಿಳಿಯಲು ಈ ನಾಣ್ಯ ಮತ್ತು ಅಂಚೆ  ಸಂಗ್ರಹ ಪ್ರದರ್ಶನ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಇತಿಹಾಸ ವಿಭಾಗದಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. 
ಸಮಾರಂಭದಲ್ಲಿ ಅಂಚೆ ಚೀಟಿ ಸಂಗ್ರಹಕಾರರಾದ ಶ್ರೀನಿವಾಸ್ ಟಿ.ಪಿ, ಪ್ರಾಧ್ಯಾಪಕರಾದ ಡಾ. ಮಹದೇವಯ್ಯ, ಅತಿಥಿ ಉಪನ್ಯಾಸಕರಾದ ಡಾ. ಸುಜಾತ, ಕಲಾವಿದರಾದ ದೀಪಕ್ ನಾರಯಣ್ ರಾವ್ ಸೇರಿದಂತೆ ಇತರರು ಇದ್ದರು. 
ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಮೇಜರ್ ರಾಘವ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ವಿದ್ಯಾರ್ಥಿ ಪ್ರತೀಕ್ಷ ಪ್ರಾರ್ಥಿಸಿದರು. ಶಿಫಾನ ಮತ್ತು ರಶೀಕ ಸ್ವಾತಂತ್ರ್ಯ ಹೋರಾಟದ ಹಾಡನ್ನು ಹಾಡಿದರು. ಆಶಿಯ ಬೇಗಂ ಕಾರ್ಯಕ್ರಮ ನಿರೂಪಿಸಿದರು.
Previous Post
Next Post

0 Post a Comment: