ಸೋಮವಾರಪೇಟೆ ಬೆಂಗಳೂರು ಮಾರ್ಗದ ರಾಜಹಂಸ ನೂತನ ಬಸ್ ಗೆ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಸೋಮವಾರ ಚಾಲನೆ ನೀಡಿದರು. ಕಳೆದ ಹಲವಾರು ವರ್ಷಗಳಿಂದ ಮಡಿಕೇರಿ ಸೋಮವಾರಪೇಟೆ ಮೂಲಕ ಮದ್ಯಾಹ್ನ 1.00ಕ್ಕೆ ಬೆಂಗಳೂರಿಗೆ ತೆರಳುತಿದ್ದ ರಾಜಹಂಸ ಬಸ್ಸ್ ಅತ್ಯಂತ ಹಳೆಯದಾಗಿದ್ದು ಪ್ರಯಾಣಿಕರು ತೊಂದರೆ ಆಗುತ್ತಿರುವ ಬಗ್ಗೆ ಶಾಸಕರಿಗೆ ದೂರಿಕೊಂಡ ಹಿನ್ನಲೆ. ಶಾಸಕರು ಸಾರಿಗೆ ಸಚಿವರನ್ನು ಸಂಪರ್ಕಿಸಿ ಈ ಮಾರ್ಗಕ್ಕೆ ಹೊಸ ಬಸ್ ನೀಡಬೇಕೆಂದು ಮನವಿ ಮಾಡಿದ್ದರು ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೂತನ ಬಸ್ ಒದಗಿಸಿದ್ದಾರೆ. ಈ ಸಂಧರ್ಭ ಮಾತನಾಡಿದ ಅವರು ಸೋಮವಾರಪೇಟೆಯಿಂದ ಚಲಿಸುವ ಹಲವು ಬಸ್ ಹಳೆಯದಾಗಿರುವುದು ಕಂಡುಬಂದಿದೆ. ಈ ಬಗ್ಗೆ ಸಾರಿಗೆ ಸಚಿವರ ಗಮನ ಸೆಳೆಯಲಾಗಿದೆ. ಈಗಾಗಲೆ 2 ಹೊಸ ಬಸ್ಗಳನ್ನು ಕೊಟಿದ್ದಾರೆ ಎಂದರು. ಈ ಸಂಧರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜೆ ಮೇದಪ್ಪ, ನಗರ ಬಿ.ಜೆ.ಪಿ ಅಧ್ಯಕ್ಷ ಸೋಮೇಶ್, ಪ.ಪಂ ಸದಸ್ಯರಾದ ಚಂದ್ರು, ಮಹೇಶ್, ಪ್ರಮುಖರುಗಳಾದ ಶರತ್, ಅಭಿಶೇಕ್ ಗೋವಿಂದಪ್ಪ, ಮಧು, ಜೀವನ್, ಆನಂದ್ ಇದ್ದರು.
ನೂತನ್ ಬಸ್ ಗೆ ಶಾಸಕ ಎಂ.ಪಿ.ಎ ಚಾಲನೆ
Categories:
ಕೊಡಗು
Publish Date:
فبراير 04, 2020
0 Post a Comment: