ಜೆ.ಕೆ.ರಾಮುವಿಗೆ ರಾಜ್ಯ ಜಾನಪದ ಪ್ರಶಸ್ತಿ ಪ್ರಧಾನ

    ಮಡಿಕೇರಿ TOC:-ಕೊಡಗು ಜಿಲ್ಲೆಯ  ಹಿರಿಯ ಜಾನಪದ ಕಲಾವಿದ ಚೊಟ್ಟೆಪಾರೆ ಹಾಡಿಯ ಜೆ.ಕೆ.ರಾಮು ಅವರಿಗೆ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ರಾಮನಗರದ ಜಾನಪದ ಲೋಕದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜಾನಪದ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ರಾಮನಗರದಲ್ಲಿರುವ  ಜಾನಪದ ಲೋಕದಲ್ಲಿ ಆಯೋಜಿತ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಪ್ರವಾಸಿ ಜಾನಪದ ಲೋಕೋತ್ಸವದಲ್ಲಿ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಬಳಿಯ ಚೊಟ್ಟೆಪಾರೆ ಹಾಡಿ ನಿವಾಸಿ ಜೇನುಕುರುಬರ ರಾಮುವಿಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ  ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಅನ್ನದಾನೇಶ್ವರನಾಥ ಸ್ವಾಮೀಜಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ, ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಟಿ.ತಿಮ್ಮೇಗೌಡ ಪ್ರಶಸ್ತಿ ಪ್ರಧಾನ ಮಾಡಿದರು.
ಈ ಸಂದರ್ಭ ಮಾತನಾಡಿದ  ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಜಾನಪದಕ್ಕೆ ಮನಸ್ಸು ಬೆಸೆಯುವ ಶಕ್ತಿಯಿದೆ. ಇಂಥ ಶಕ್ತಿಯುತವಾದ ಜಾನಪದನ್ನು ಮುಂದಿನ ಪೀಳಿಗೆಗೂ ಸಂರಕ್ಷಿಸುವ ಕಾರ್ಯವಾಗಬೇಕೆಂದು ಆಶಿಸಿದರು. ಅಣುವನ್ನು ವಿಭಜಿಸುವ ಸೂತ್ರ ಕಂಡು ಹುಡುಕಿದ ಮಾನವ ಮನಸ್ಸುಗಳನ್ನು ಕೂಡಿಸುವ ಕಲೆಯನ್ನು ಕಲಿಯಲೇ ಇಲ್ಲ. ಕೂಡಿಸುವಿಕೆಯಲ್ಲಿ ಇರುವ ಶಕ್ತಿ ಕಳೆಯುವಿಕೆಯಲ್ಲಿ ಇಲ್ಲ ಎಂದೂ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.
ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಜಾನಪದ ಲೋಕ ರಾಮನಗರದ ಅಮೂಲ್ಯ ಆಸ್ತಿಯಾಗಿದ್ದು ನಾಡಿನ ಹೆಮ್ಮೆಯಾಗಿದೆ. ಜಾನಪದ ಲೋಕದ ಭವಿಷ್ಯದ ಯೋಜನೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. 
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ಸಂಸ್ಕøತಿಗೆ ತಾಯಿ ಬೇರಿನಂತೆ ಜಾನಪದವಿದೆ. ನಾಡಿನ  ಜಾನಪದವನ್ನು ಸಂರಕ್ಷಿಸಬೇಕು ಎಂಬ ನಿಟ್ಟಿನಲ್ಲಿ 25 ವರ್ಷಗಳ ಹಿಂದೆ 1994 ರ ಮಾರ್ಚ್ 12 ರಂದು ರಾಮನಗರದಲ್ಲಿ ನಾಡೋಜ ನಾಗೇಗೌಡರು ಜಾನಪದ ಲೋಕವನ್ನು ಪ್ರಾರಂಭಿಸಿದರು. ಜಾನಪದ ಲೋಕ ರಾಜ್ಯದ ಪ್ರತೀ ಜಿಲ್ಲೆಗಳ ಜಾನಪದ ಕಲೆಯನ್ನು ಅನಾವರಣಗೊಳಿಸುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಸಂದರ್ಶಕರು ಜಾನಪದ ಲೋಕಕ್ಕೆ ಪ್ರತಿನಿತ್ಯ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಜನತೆಯಲ್ಲಿ  ಜಾನಪದದ ಮಹತ್ವವನ್ನು ತಿಳಿಸಲಾಗುತ್ತಿದೆ. ಜಾನಪದ ಲೋಕ 25 ವಷ9ಗಳ ಸಾರ್ಥಕ ವರ್ಷಾಚರಣೆಯ ಸಂದರ್ಭ ಸರ್ಕಾರದ ಆರ್ಥಿಕ ನೆರವನ್ನೂ ಪಡೆದು ಸಶಕ್ತವಾಗಿ ಸ್ವಾವಲಂಭಿ ಸಂಸ್ಥೆಯಾಗಿ ಮುನ್ನಡಿಯಿಟ್ಟಿದೆ ಎಂದು ಮಾಹಿತಿ ನೀಡಿದರು. 
ಜೆ.ಕೆ.ರಾಮು ಸೇರಿದಂತೆ ರಾಜ್ಯದ ವಿವಿದೆಡೆಗಳ 32 ಜಾನಪದ ಕಲಾವಿದರಿಗೆ ಜಾನಪದ ಪರಿಷತ್‍ನಿಂದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು. ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. 
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜಾನಪದ ಪರಿಷತ್‍ನ ಟ್ರಸ್ಟಿಗಳಾದ ಪೆÇ್ರ,ಹಿ.ಶಿ.ರಾಮಚಂದ್ರಗೌಡ, ಜಯಪ್ರಕಾಶ್ ಗೌಡ, ಆದಿತ್ಯ ನಂಜರಾಜ್, ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್, ಖಚಾಂಚಿ ಎಸ್.ಎಸ್.ಸಂಪತ್ ಕುಮಾರ್, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ಸೋಮವಾರಪೇಟೆ ತಾಲೂಕು ಅಧ್ಯಕ್ಷ ಚಂದ್ರಮೋಹನ್, ಮೂರ್ನಾಡು ಘಟಕದ ಪದಾಧಿಕಾರಿ ಹರೀಶ್ ಕಿಗ್ಗಾಲು, ಜಿಲ್ಲಾ ನಿರ್ದೇಶಕರುಗಳಾದ  ಹಾ.ತಿ.ಜಯಪ್ರಕಾಶ್,  ಎಂ.ಸಿ. ರವಿಕುಮಾರ್ , ಅಕ್ಷಯ್ , ರಂಜಿತ್ ಕಿಗ್ಗಾಲು ಹಾಜರಿದ್ದರು.
Previous Post
Next Post

0 Post a Comment: