TOC ಮಡಿಕೇರಿ:ಚೆಟ್ಟಳ್ಳಿ ಶ್ರೀ ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಮಹೋತ್ಸವ ಹಾಗೂ ಮಂಡಲ ಪೂಜೆ ಇದೇ ಡಿಸೆಂಬರ್ 29ನೇ ಭಾನುವಾರ ನಡೆಯಲಿದೆ ಎಂದು ಅಯ್ಯಪ್ಪ ದೇವಸ್ಥಾನ ಸಮಿತಿ ಪ್ರಮುಖರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ ಪ್ರಾತಃಕಾಲ 06ರಿಂದ 08ರವರೆಗೆ ಗಣಪತಿ ಹವನ,10ಗಂಟೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12:30ಕ್ಕೆ ಪೂಜೆ, ಮಂಗಳಾರತಿ,ಪ್ರಸಾದ ವಿತರಣೆ,ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 04ಗಂಟೆಯಿಂದ ಚೆಟ್ಟಳ್ಳಿ ಶ್ರೀ ವಿನಾಯಕ ದೇವಾಸ್ಥಾನದಿಂದ ಅಯ್ಯಪ್ಪ ದೇವಾಸ್ಥಾನದವರೆಗೆ ದೇವರ ಅಲಂಕೃತ ಮಂಟಪದೊಂದಿಗೆ ಪಾಲಕೊಂಬು ಅದ್ದೂರಿ ಮೆರವಣಿಗೆ ನಡೆಯಲಿದೆ.
ಸಂಜೆ 08 ಗಂಟೆಗೆ ದೀಪಾರಾಧನೆ,ರಂಗಪೂಜೆ, ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಸತ್ಯನಾರಾಯಣ ಪೂಜೆ ಮಾಡಲಿಚ್ಛಿಸುವ ಭಕ್ತಾದಿಗಳು ರೂ 301 ಗಳನ್ನು ಪಾವತಿಸಿ ಸಮಿತಿಯ ಕಾರ್ಯದರ್ಶಿ ಅಥವಾ ಖಜಾಂಜಿಯವರಲ್ಲಿ ನೀಡಿ ರಶೀದಿ ಪಡೆದುಕೊಳ್ಳಬಹುದು ಎಂದು ಅಯ್ಯಪ್ಪ ದೇವಸ್ಥಾನ ಸಮಿತಿ ಪ್ರಮುಖರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 Post a Comment: