ಮಕ್ಕಾದಲ್ಲಿ ಯಶಸ್ಸಿಯಾಗಿ ನಡೆದ ರಕ್ತದಾನ ಶಿಬಿರ


TOC ಮಕ್ಕಾ:ಇಂಡಿಯನ್ ಸೋಶಿಯಲ್ ಫೋರಮ್ ಮಕ್ಕಾ, ಮಕ್ಕಾ ಇಂಡಿಯನ್ಸ್ ಫೋರಮ್  ಹಾಗು ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಜಂಟಿ ಆಶ್ರಯದಲ್ಲಿ
ಕಿಂಗ್ ಅಬ್ದುಲ್ಲಾ ಮೆಡಿಕಲ್ ಸಿಟಿ ಹಾಸ್ಪಿಟಲ್ ಮಕ್ಕತುಲ್ ಮುಖರ್ರಮದಲ್ಲಿ 04/12/2019 ರಂದು ನಡೆದ “ರಕ್ತದಾನ ಶಿಬಿರವು” ಯಶಸ್ವಿಯಾಗಿ ನೆರವೇರಿತು.

ಸುಮಾರು ಮೂವತ್ತಕ್ಕಿಂತಲೂ ದಾನಿಗಳು ರಕ್ತನಾದ ಮಾಡುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.ಪವಿತ್ರ ಭೂಮಿ ಮಕ್ಕಾದಲ್ಲಿ ಪ್ರಪ್ರಥಮ ಬಾರಿಗೆ ಇಂಡಿಯನ್ ಸೋಶಿಯಲ್ ಫೋರಮ್ ಹಾಗು ಬ್ಲಡ್ ಡೋನರ್ಸ್ ಮಂಗಳೂರು ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಪ್ರಶಂಸೆಗೆ ಪಾತ್ರವಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಡಿಯನ್ ಸೋಶಿಯಲ್ ಫಾರಂ ಮಕ್ಕಾ ಘಟಕದಅಧ್ಯಕ್ಷ ಶಾಕಿರ್ ಹಕ್ ನೆಲ್ಯಾಡಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಇಂಡಿಯಾ ಫ್ರೆಟರ್ನಿಟಿ ಫೋರಮ್ ಕಾರ್ಯದರ್ಶಿ ಅಬ್ದುಲ್ ಮಜೀದ್ ವಿಟ್ಲಾ, ಫಝಲ್ ಮೈಸೂರು ಕಾರ್ಯದರ್ಶಿ ಮಕ್ಕಾ ಇಂಡಿಯನ್ಸ್,ಹಾಗು ,ರಹೀಮ್ ಕುಂಜತ್ತೂರ್ ಬ್ಲಡ್ ಡೋನರ್ಸ್ ಕಾರ್ಯನಿರ್ವಾಹಕ ಭಾಗವಹಿಸಿದ್ದರು.ಕಿಂಗ್ ಅಬ್ದುಲ್ಲಾ ಮೆಡಿಕಲ್ ಸಿಟಿ ಹಾಸ್ಪಿಟಲ್ ವತಿಯಿಂದ
ರಕ್ತದಾನ ಶಿಬಿರ ಆಯೋಜಿಸಿದ ಈ ಮೂರು ಸಂಘಟನೆಗಳಿಗೆ ಪ್ರಶಂಸ ಪತ್ರ ನೀಡಿ ಗೌರವಿಸಿದರು.
Previous Post
Next Post

0 Post a Comment: