ಸಹಾಯಧನ ಪಡೆಯಲು ಮನವಿ


  TOC ಮಡಿಕೇರಿ:-ಕಾಫಿ ಮಂಡಳಿಯು ಮಧ್ಯಮ ಅವಧಿಯ ಕಾಫಿ ಅಭಿವೃದ್ಧಿ ಯೋಜನೆಯಡಿ ಕಾಫಿ ತೋಟದ ಉತ್ಪಾದಕತೆಯ ಸುಧಾರಣೆಗೆ ಜಲ ಸಂವರ್ಧನೆ ಯೋಜನೆಯಡಿ ನೀರು ಸಂಗ್ರಹಣಾ ಕೆರೆ, ರಿಂಗ್ ಬಾವಿ, ಸ್ಪ್ರಿಂಕ್ಲರ್/ಹನಿ ನೀರಾವರಿಗೆ, 10 ಹೆಕ್ಟೇರ್ ವರೆಗಿನ ಹಿಡುವಳಿ ಹೊಂದಿರುವ ಅರ್ಹ ಸಾಮಾನ್ಯ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಸಣ್ಣ ಕಾಫಿ ಬೆಳೆಗಾರರಿಗೆ, ಯುನಿಟ್ ವೆಚ್ಚದ ಅಥವಾ ಕಾಫಿ ತೋಟದ ವಿಸ್ತೀರ್ಣಕ್ಕನುಗುಣವಾಗಿ, ಕ್ರಮವಾಗಿ ಶೇ.40 ಮತ್ತು ಶೇ.50 ರಷ್ಟು ಸಹಾಯಧನವನ್ನು ನೀಡಲಾಗುತ್ತಿದ್ದು, ಈ ಯೋಜನೆಯು 2020ರ ಮಾರ್ಚ್ 31 ಕ್ಕೆ ಕೊನೆಗೊಳ್ಳುತ್ತದೆ.
ಆದ್ದರಿಂದ ಆಸಕ್ತ ಕಾಫಿ ಬೆಳೆಗಾರರು ಈ ಯೋಜನೆಯಡಿಯಲ್ಲಿ ದೊರೆಯುವ ಸಹಾಯಧನವನ್ನು ಪಡೆಯಲಿಚ್ಚಿಸುವವರು, ಮೊದಲು ಕಾಫಿ ಮಂಡಳಿಯ ಕಚೇರಿಯಲ್ಲಿ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ, ಮಂಡಳಿಯ ಕಾರ್ಯ ನಿರ್ವಹಣಾ ಪದ್ಧತಿಯ ರೂಪರೇಷಗಳಿಗೆ ಅನುಗುಣವಾಗಿ ಪೂರ್ವಾನುಮತಿ ಪಡೆಯುವುದರ ಮುಖಾಂತರ ಕಾರ್ಯಗಳನ್ನು ಕೈಗೊಂಡು ಸರ್ಕಾರವು ಮಂಡಳಿಗೆ ಸಹಾಯಧನದಡಿ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕಾಗಿ ತಿಳಿಸಿದೆ. ಸಮರ್ಪಕವಾಗಿ ಅನುದಾನವನ್ನು ಉಪಯೋಗಿಸದಿದ್ದಲ್ಲಿ, ಸರ್ಕಾರವು ಮುಂಬರುವ ಯೋಜನೆಗಳಲ್ಲಿ ಅನುದಾನವನ್ನು ಕಡಿತಗೊಳಿಸುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ, ಕಾಫಿ ಬೆಳೆಗಾರರು ಇದರ ಸದುಪಯೋಗ ಪಡೆಯಬೇಕಾಗಿ ಕೋರಿದೆ.
ಯೋಜನೆಗಳ ಬಗೆಗಿನ ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ವಿರಾಜಪೇಟೆ ಕಾಫಿ ಮಂಡಳಿಯ ಉಪ ನಿರ್ದೇಶಕರು(ವಿಸ್ತರಣೆ) ತಿಳಿಸಿದ್ದಾರೆ.
Previous Post
Next Post

0 Post a Comment: