ಟೈಮ್ಸ್ ಆಫ್ ಕೂರ್ಗ್
ನವ ದೆಹಲಿ ; ಕಳೆದ ತಿಂಗಳು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಜನಸಮೂಹದಿಂದ ಥಳಿತಕ್ಕೊಳಗಾಗಿ ಸಾವನ್ನಪ್ಪಿದ ದಲಿತ ವ್ಯಕ್ತಿ ಹರೀಶ್ ಜಾತವ್ ಸಾವಿಗೆ ನ್ಯಾಯ ದೊರಕಿಲ್ಲ ಎಂದು ನಿರಾಶೆಗೆ ಒಳಗಾದ ಆತನ ತಂದೆ ರಟ್ಟಿರಾಮ್ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ಜುಲೈ 16ರ ರಾತ್ರಿ 7 ಗಂಟೆ ಸುಮಾರಿಗೆ 28 ವರ್ಷದ ಯುವಕ ಹರೀಶ್ ಜಾತವ್ ಅಲ್ವಾರ್ ಜಿಲ್ಲೆಯ ಬಿವಾಡಿ-ಚೋಪನ್ಕಿ ರಸ್ತೆಯಲ್ಲಿ ಬೈಕಿನಲ್ಲಿ ತೆರಳುತ್ತಿದ್ದಾಗ ಅಚಾನಕ್ಕಾಗಿ ಅಪರಿಚಿತ ಮಹಿಳೆಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ್ದಾನೆ. ಇದರಿಂದ ಕ್ರೋಧಗೊಂಡ ಸ್ಥಳೀಯರು ಆತನನನ್ನು ಹಿಗ್ಗಾಮುಗ್ಗ ಥಳಿಸಿದ್ದರು, ಥಳಿತದಿಂದ ತೀವ್ರ ರಕ್ತಸ್ರಾವಕ್ಕೆ ಒಳಗಾಗಿ ರಸ್ತೆ ಬದಿ ಬಿದ್ದಿದ್ದ ಆತನನ್ನು ನಂತರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಘಟನೆ ನಡೆದು ಎರಡು ದಿನಗಳ ಬಳಿಕ ಹರೀಶ್ ಮೃತಪಟ್ಟಿದ್ದ.

0 Post a Comment: