ಸೂಪರ್ ಫೈವ್ ಕಾಲ್ಚೆಂಡು ಪಂದ್ಯಾಟ: ಸಿ.ಸಿ.ಎಫ್.ಸಿ ಪ್ರಥಮ , ಸಿಟಿ ಸ್ಪೋರ್ಟ್ಸ್ ದ್ವಿತೀಯ 


ಚೆಟ್ಟಳ್ಳಿ: ಇಲ್ಲಿನ ಬ್ಲೂ ಟೈಗರ್ಸ್ ಚೆಟ್ಟಳ್ಳಿ ಫುಟ್ಬಾಲ್ ಕ್ಲಬ್ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಏಕದಿನ ಸೂಪರ್ ಫೈವ್ ಕಾಲ್ಚೆಂಡು ಪಂದ್ಯಾಟದಲ್ಲಿ ಸಿ.ಸಿ.ಎಫ್.ಸಿ ಕಾಫಿಬೋರ್ಡ್ ತಂಡವು ಸಿಟಿ ಸ್ಪೋರ್ಟ್ಸ್ ಮಡಿಕೇರಿ ತಂಡವನ್ನು ಫೈನಲ್ ನಲ್ಲಿ ಮಣಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಸಿಟಿ‌ ಸ್ಪೋರ್ಟ್ಸ್ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಇದಕ್ಕೂ ಮುನ್ನ ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಆತಿಥೇಯ ತಂಡವಾದ ಬ್ಲೂ ಟೈಗರ್ಸ್ ಹಾಗೂ ಸಿ.ಸಿ.ಎಫ್.ಸಿ ಕಾಫಿಬೋರ್ಡ್ ತಂಡಗಳ ನಡುವೆ ನಡೆಯಿತು. ಸಿ.ಸಿ.ಎಫ್.ಸಿ ತಂಡವು ೫-೦ ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯವು ಸಿಟಿ ಸ್ಪೋರ್ಟ್ಸ್ ಮಡಿಕೇರಿ ಹಾಗೂ ಬ್ಲೂ ಟೈಗರ್ಸ್ ಬಿ ತಂಡಗಳ ನಡುವೆ ನಡೆಯಿತು. ಜಿದ್ದಾಜಿದ್ದಿನ ಸೆಮಿಫೈನಲ್ ಪಂದ್ಯಾಟದ ಕೊನೇ ಸಮಯದಲ್ಲಿ ಸಿ‌ಟಿ‌ ಸ್ಪೋರ್ಟ್ಸ್ ತಂಡದ ನೌಷಾದ್ ಅವರ ಅಮೋಘ ಪಾಸಿನ ನೆರವಿನಿಂದ ತಂಡ ನಾಯಕ ಇಬ್ರಾಹಿಂ ಗೋಲು ಗಳಿಸಿದರು. ಸಿ.ಟಿ‌ ಸ್ಪೋರ್ಟ್ಸ್ ಮಡಿಕೇರಿ ತಂಡವು ೧-೦ ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಪಂದ್ಯಾಟ ಅತೀ ಹೆಚ್ಚು‌ ಸ್ಕೋರರ್ ಪ್ರಶಸ್ತಿಯನ್ನು ಸಿ.ಸಿ.ಎಫ್ .ಸಿ ತಂಡದ ನಾಯಕ ಸುರೇಶ್ ಪಡೆದುಕೊಂಡರು. ಪ್ರಥಮ ಸ್ಥಾನ ಪಡೆದ ಸುರೇಶ್ ನಾಯಕತ್ವದ ತಂಡದಲ್ಲಿ ಹರ್ಷಿತ್,‌ಆಶಿಕ್, ದೀಕ್ಷಿತ್, ಫಯಾಸ್, ಸುದೀಶ್, ವಿನೋದ್ ಇದ್ದರು. ದ್ವಿತೀಯ ಸ್ಥಾನ ಪಡೆದ ಸಿ.ಟಿ.ಸ್ಪೋರ್ಟ್ಸ್ ಇಬ್ರಾಹಿಂ ನಾಯಕತ್ವದ ತಂಡದಲ್ಲಿ ದಿನೇಶ್, ಆಲಿ, ಇಸ್ಮಾಯಿಲ್ ಕಂಡಕರೆ ,ರಶೀದ್ ,ಫಾರೂಖ್, ಜಂಶೀದ್, ಹಾಗೂ ನೌಷಾದ್ ಇದ್ದರು. ಪಂದ್ಯಾಟದಲ್ಲಿ ಒಟ್ಟು ೧೫ ತಂಡಗಳು ಭಾಗ ವಹಿಸಿದ್ದವು. ವಿನೋದ್, ರಹೀಮ್ ,ಪ್ರೀತಮ್ ,ಆಲಿ, ವಿರೂಪಾಕ್ಷ ,ಇಸ್ಮಾಯಿಲ್ ಕಂಡಕರೆ ಹಾಗೂ ಜಂಶಾದ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಗುತ್ತಿಗೆದಾರರಾದ ಅಂಬುದಾಸ್ , ಬ್ಲೂ ಟೈಗರ್ಸ್ ತಂಡದ ಅಧ್ಯಕ್ಷರಾದ ರಫೀಕ್, ದಾನಿಗಳಾದ ಬಶೀರ್, ಸಿಟಿ ಸ್ಪೋರ್ಟ್ಸ್ ಮಾಲೀಕ‌ ಫಾರೂಖ್ ಇದ್ದರು.
Previous Post
Next Post

0 Post a Comment: