ಮಡಿಕೇರಿ :-ಶಿರಂಗಾಲದ ಸರ್ಕಾರಿ ಪದವಿ ಪೂರ್ವ ಕಾಲೇಜು, ಪದವಿ ಪೂರ್ವ ಶಿಕ್ಷಣ ಇಲಾಖೆ ಒದಗಿಸಿರುವ ದಿನಚರಿ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಡೈರಿಗಳನ್ನು ವಿತರಿಸಿ ಮಾತನಾಡಿದ ಕೊಡಗು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆಂಚಪ್ಪ ಖಾಸಗಿ ಕಾಲೇಜುಗಳಲ್ಲಿ ಮಾತ್ರ ವಿದ್ಯಾರ್ಥಿಗಳಿಗೆ ದಿನಚರಿ ಒದಗಿಸುವ ವ್ಯವಸ್ಥೆಯಿತ್ತು ಸರ್ಕಾರಿ ಕಾಲೇಜುಗಳಲ್ಲಿ ಈ ಸೌಲಭ್ಯವಿರಲಿಲ್ಲ ಇದನ್ನು ಮನಗಂಡ ಹಿಂದಿನ ನಿರ್ದೇಶಕರಾಗಿದ್ದ ಸಿ.ಶೀಖಾ ಅವರು ವಿದ್ಯಾರ್ಥಿಗಳಿಗೆ ದಿನಚರಿಯನ್ನು ಉಚಿತವಾಗಿ ನೀಡುವ ವ್ಯವಸ್ಥೆ ಜಾರಿಗೊಳಿಸಿದರು. ರಾಜ್ಯದ 1200 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ದಿನಚರಿಯನ್ನು ವಿತರಿಸಲಾಗಿದೆ. ಕೊಡಗು ಜಿಲ್ಲೆಯ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ದಿನಚರಿ ತಲುಪಿಸಲಾಗಿದೆ. ಅಧಿಕೃತವಾಗಿ ಶಿರಂಗಾಲ ಕಾಲೇಜಿನಲ್ಲಿ ದಿನಚರಿ ವಿತರಣೆ ಮಾಡಲಾಗುತ್ತಿದೆ ಎಂದರು. ದಿನಚರಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಲಭ್ಯವಿರುವ ಸವಲತ್ತುಗಳ ಪೂರ್ಣ ವಿವರವಿದೆ. ಕಾಲೇಜಿನಲ್ಲಿ ಆಗುವ ಕಾರ್ಯಕ್ರಮಗಳ ಶೈಕ್ಷಣಿಕ ಮಾಹಿತಿ ನಮೂದಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಕಣಿವೆ ಭಾರದ್ವಾಜ್ ಕೆ. ಆನಂದತೀರ್ಥ ದಿನಚರಿಯ ಮಹತ್ವವನ್ನು ತಿಳಿಸಿ ನಾನೂ ಸಹ 35 ವರ್ಷಗಳಿಂದ ದಿನಚರಿ ಬರೆಯುತ್ತಿದ್ದೇನೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಹಂಡ್ರಂಗಿ ನಾಗರಾಜ್ ವಹಿಸಿದ್ದರು. ವೇದಿಕೆಯಲ್ಲಿ ಉಪನ್ಯಾಸಕರಾದ ಭವಾನಿ, ವೆಂಕಟೇಶ್, ಆದರ್ಶ್, ಹೇಮಲತ, ವೀಣಾ, ಸುಚಿತ್ರ ಮೊದಲಾದವರಿದ್ದರು. ವಿದ್ಯಾರ್ಥಿಗಳಾದ ಟಿ.ಯು.ಪುನೀತ್ ಕುಮಾರ್ ಸ್ವಾಗತಿಸಿದರು. ಬಿ.ಎನ್ ಆನಂದ್ ವಂದಿಸಿದರು. ಎಸ್‍ಪಿ ಸಿಂಚನ ನಿರೂಪಿಸಿದರು. ಕುಮಾರಿ ಅಕ್ಷತಾ ಮೇಘನಾ ಪ್ರಾರ್ಥಿಸಿದರು. ದಿನಚರಿ ವಿತರಣಾ ಕಾರ್ಯಕ್ರದ ಜೊತೆಗೆ ಚುನಾವಣಾ ಸಾಕ್ಷರತಾ ಕ್ಲಬ್‍ನ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳಿಗೆ ದಿನಚರಿ ವಿತರಣೆ
Categories:
ಕೊಡಗು
Publish Date:
August 19, 2019

0 Post a Comment: