ಅಜ್ಜಾವರದ ಬಡ ಕುಟುಂಬದ ವಸತಿ ನಿರ್ಮಾಣದಲ್ಲಿ ಬಾಗಿಯಾದ ಎಸ್ಸೆಸ್ಸೆಫ್


ಟೈಮ್ಸ್ ಆಫ್ ಕೂರ್ಗ್/ ದಕ್ಷಿಣ ಕನ್ನಡ 
ಸುಳ್ಯ: ಅಜ್ಜಾವರದ ಬಡ ಕುಟುಂಬದ ಮನೆಯ ಕೆಲಸವೊಂದು ಸುಳ್ಯ ತಹಶೀಲ್ದಾರ್ ರವರ ನೇತೃತ್ವದಲ್ಲಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುತ್ತಿದ್ದು, ಶನಿವಾರ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಹಾಗೂ ಎಸ್.ವೈ.ಎಸ್ ಟೀಂ ಇಸಾಬ ಸದಸ್ಯರು ಶ್ರಮದಾನ ನಡೆಸಿದ್ದರು, ಇಂದು ಕೂಡ ಕಾಂಗ್ರೀಟ್ ಹಾಗೂ ಇತರ ಕೆಲಸಗಳಿಗೆ ಎಸ್ಸೆಸ್ಸೆಫ್ ಹಾಗೂ ಟೀಂ ಇಸಾಬ ಸದಸ್ಯರು ಶ್ರಮದಾನ ನಡೆಸಿದ್ದು, ಸುಳ್ಯ ತಹಶೀಲ್ದಾರ್ ರವರ ಸಹಿತವಿರುವ ಎಲ್ಲರಿಂದಲೂ ಪ್ರಶಂಸೆಗೆ ಕಾರಣವಾಯಿತು. ಇದಲ್ಲದೇ ಮುಂದಿನ ದಿನಗಳಲ್ಲಿಯೂ ಅಗತ್ಯ ಬಂದರೆ ಬೇಕಾದ ಎಲ್ಲಾ ಶ್ರಮದಾನವನ್ನೂ ತಾವು ಮಾಡುವುದಾಗಿ ತಂಡದ ಅಮೀರ್ ಸಿದ್ದೀಖ್ ಗೂನಡ್ಕ ರವರು ತಿಳಿಸಿದರು. ಈ ಶ್ರಮದಾನದಲ್ಲಿ ಸಿದ್ದೀಖ್ ಗೂನಡ್ಕ ಹಾಗೂ ರಫೀಕ್ ನಾವೂರು ರವರ ನೇತೃತ್ವದಲ್ಲಿ ನೌಷಾದ್ ಕೆರೆಮೂಲೆ, ಸಿದ್ದೀಖ್ ಕಟ್ಟೆಕ್ಕಾರ್, ಅಂದುಂಞ ಗೋರಡ್ಕ, ಅಬ್ಬಾಸ್ ಎ.ಬಿ., ಶರೀಫ್ ಜಯನಗರ, ರಹೀಂ ಪೈಚಾರು, ಕಅಬ್ ಅಜ್ಜಾವರ, ಮಾಲಿಕ್ ಕುಂಬಕ್ಕೋಡು ರವರು ಪಾಲ್ಗೊಂಡಿದ್ದರು.
Previous Post
Next Post

0 Post a Comment: