ಕೊಂಡಂಗೇರಿ ನಿರಾಶ್ರಿತರಿಗೆ ಮನೆ ನಿರ್ಮಿಸಲು ಒಂದುವರೆ ಎಕರೆ ಜಾಗ ದಾನ ನೀಡಿದ ಕೊಂಡಂಗೇರಿ ಎಚ್.ಎಂ ಅಬ್ದುಲ್ಲಾ ಹಾಜಿ...(ಉಮ್ಮಣಿ ಹಾಜಿ)


ಟೈಮ್ ಆಫ್ ಕೂರ್ಗ್ ಸಂದರ್ಶನ: 
ಪ್ರಚಾರ ಎಂದರೆ ನನಗೆ ಭಯ ಉಮ್ಮಣ್ಣಿ ಹಾಜಿ

 ಮಡಿಕೇರಿ: ಕೊಡಗಿನ ಜನತೆ ಮತೊಮ್ಮೆ ಮಳೆಯೂ ಕಣ್ಣೀರು ತಂದಿದೆ. ಪ್ರಸ್ತಕ ವರ್ಷ ಆಗಸ್ಟ್04 ರವರೆಗೆ ಮುಂಗಾರು ವಾಡಿಕೆಯಂತೆ ಬಾರದೆ ಜನರ ಮಳೆ ಇಲ್ಲ ಎಂಬ ಆತಂಕ‌‌ ಮನೆ ಮಾಡಿತು. ಆಗಸ್ಟ್ 04 ನಂತರ ಸುರಿದ ಆಶ್ಲೇಷ ಮಳೆಯೂ ಕೇವಲ‌ ಒಂದೇ ಒಂದು ವಾರದಲ್ಲಿ ಕೊಡಗಿನ ಜನತೆಯ ಇಡೀ ಚಿತ್ರಣವೇ ಬುಡಮೇಲು ಮಾಡಿತು. ಮಹಾ ಮಳೆ ಅಪ್ಪಳಿಸಿ ಹಲವು ಜನರ ಮನೆಗಳಿಗೆ ನೀರು ನುಗ್ಗಿ ಮನೆಗಳು ನೆಲಸಮವಾಗಿದೆ. ಇನ್ನೂ ಕೆಲವರ ಮನೆಗಳ ಚಿತ್ರಣವೇ ಇಲ್ಲದಂತಾಗಿದೆ. ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರ ಕೇಂದ್ರದಲ್ಲಿ‌ ಆಶ್ರಯ ಪಡೆದಿದ್ದಾರೆ. ಜಿಲ್ಲೆ ಹಾಗೂ ರಾಜ್ಯದ ಹಲವು ಸಂಘ ಸಂಸ್ಥೆಗಳು ಜಿಲ್ಲೆಯ ಸಂತ್ರಸ್ತರಿಗೆ ಆಹಾರ ಧಾನ್ಯ ,ತಮ್ಮಿಂದಾಗುವ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಮಹಾ ಮಳೆಗೆ ಉತ್ತರ ಕೊಡಗಿನ ಹಲವು ಜನರ, ತೋಟ ಮಣ್ಣು ಕುಸಿತಕ್ಕೆ ಬಲಿಯಾಗಿತ್ತು. ಮನೆ ಕಳೆದುಕೊಂಡವರಿಗೆ ಹಲವು ಸಂಘ ಸಂಸ್ಥೆಗಳು ಉಚಿತ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದದ್ದು ಜಿಲ್ಲೆಯ ಜನತೆ ಸದಾ ನೆನಪಿಸುತ್ತಿದ್ದಾರೆ. ಅಲ್ಲದೇ ಕಳೆದ ವರ್ಷ ಜಿಲ್ಲಾ% ಪಂಚಾಯತ್ ಸದಸ್ಯರೊಬ್ಬರು ತಮ್ಮ ತೋಟದ ಒಂದು ಎಕರೆ ಜಾಗವನ್ನು ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು ದಾನ ನೀಡಿದರು. ಕೊಂಡಂಗೇರಿ ಇತಿಹಾಸದಲ್ಲಿ ಕಂಡು, ಕೇಳರಿಯದ ಪ್ರವಾಹಕ್ಕೆ ತುತ್ತಾಗಿದೆ. ನೂರಾರು ಮನೆಗಳು ನೀರಿನಲ್ಲಿ ಮುಳುಗಿ‌ ನೆಲಸಮವಾಗಿದೆ. ಕೆಲವು ಮನೆಗಳು ಪ್ರವಾಹಕ್ಕೆ ಸಿಲುಕಿ ಮಾಯವಾಗಿದೆ. ಸಾವಿರಾರು ಕುಟುಂಬಗಳು ಬೀದಿ ಪಾಲಾಗಿದೆ. ಇಲ್ಲಿನ‌ ಶಾಲೆ ಹಾಗೂ ಮಸೀದಿಯಲ್ಲಿನ ನಿರಾಶ್ರಿತರ ಕೇಂದ್ರದಲ್ಲಿ ಮನೆ ಕಳೆದುಕೊಂಡು ಮುಂದಿನ ದಾರಿ ಯಾವುದಯ್ಯಾ ಎನ್ನುತ್ತಿದ್ದಾರೆ‌. f ಕೊಂಡಂಗೇರಿಯಲ್ಲಿ ಪ್ರವಾಹಕ್ಕೆ ಸಿಲುಕಿ ಮನೆಗಳನ್ನು ಕಳೆದುಕೊಂಡವರಿಗೆ ಮನೆ ನಿರ್ಮಿಸಲು ಇಲ್ಲಿನ ಸ್ಥಳೀಯ ನಿವಾಸಿಯಾದ ಹೆಚ್.ಎಂ ಅಬ್ದುಲ್ಲಾ ಹಾಜಿ(ಉಮ್ಮಣಿ ಹಾಜಿ) ಎಂಬುವವರು ತಮ್ಮ ಕಾಫಿ ತೋಟದಲ್ಲಿ ಒಂದುವರೆ ಎಕರೆ ಜಾಗವನ್ನು ಕೊಂಡಂಗೇರಿಯಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು ದಾನ ನೀಡಿದ್ದಾರೆ. ಹೆಚ್.ಎಂ ಅಬ್ದುಲ್ಲಾ ಹಾಜಿ(ಉಮ್ಮಣಿ ಹಾಜಿ) ಅವರು ಇಲ್ಲಿ‌ನ ಸ್ಥಳೀಯ ಜಮಾಹತ್ ಆಡಳಿತ ಮಂಡಳಿಯವರೊಂದಿಗೆ ಇಂದು ಚರ್ಚೆ ಮಾಡಿ ಜಾಗ ದಾನ ನೀಡಿರುವುದನ್ನು ಘೋಷಣೆ ಮಾಡಿದ್ದಾರೆ. ಶಕ್ತಿಯೊಂದಿಗೆ ಮಾತನಾಡಿದ ಜಾಗ ದಾನಿ ಹೆಚ್.ಎಂ ಅಬ್ದುಲ್ಲಾ ಹಾಜಿ(ಉಮ್ಮಣಿ ಹಾಜಿ) ಕೊಡಗಿನಲ್ಲಿ ಕಳೆದ ವರ್ಷ ಸುರಿದ ಮಹಾ ಮಳೆ ಈ ವರ್ಷವೂ ಸುರಿದಿದೆ. ಕೊಂಡಂಗೇರಿಯಲ್ಲಿ ಮಳೆಗೆ ಹಲವು ಮನೆಗಳು ಮುಳುಗಡೆಯಾಗಿದೆ. ಕೆಲವೊಂದು ಮನೆಗಳು ವಾಸಕ್ಕೆ ಯೋಗ್ಯವಲ್ಲದ ರೀತಿಯಲ್ಲಿದೆ. ನಮ್ಮೂರಿನಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದ ಜನರಿಗೆ ಮನೆ ನಿರ್ಮಿಸಲು ನನ್ನ ತೋಟದಲ್ಲಿ ಒಂದುವರೆ ಎಕರೆ ಕಾಫಿ ತೋಟವನ್ನು ದಾನ ನೀಡಿದ್ದೇನೆ. ಈ ವಿಷಯದ ಕುರಿತು ಈಗಾಗಲೇ ಜಮಾಹತ್ ನೊಂದಿಗೆ ಚರ್ಚಿಸಲಾಗಿದೆ ಎಂದರು. ಮುಂದೆ ಯಾರಿಗೂ ಬಾರದಿರಲಿ‌ ಇಂತಹ ಪರಿಸ್ಥಿತಿ:. ನನಗೆ ಮಾಹಿತಿ ತಿಳಿದ ಪ್ರಕಾರ ಕೊಂಡಂಗೇರಿಯಲ್ಲಿ ೧೯೫೫ರ ನಂತರ ಪ್ರವಾಹಕ್ಕೆ ಸಿಲುಕಿ ಮನೆಗಳನ್ನು ಕಳೆದುಕೊಂಡಿದೆ. ಅಂದು ಇಷ್ಟೊಂದು ಮಟ್ಟಿಗೆ ಅನಾಹುತ ಸಂಭವಿಸಿರಲಿಲ್ಲ. ಮನೆ ಕಳೆದುಕೊಂಡವರು ಕಷ್ಟ ಪಟ್ಟು ಕೂಲಿ ಕೆಲಸ ಮಾಡಿ‌ ಮನೆ ಕಟ್ಟಿದ್ದರು. ಇಂದು ನೀರು ಮುಳಗಡೆಯಾಗಿ‌ ನಾಶವಾಗಿದೆ. ಮುಂದೆ ಯಾರಿಗೂ ಇಂತಹ ಭಯಾನಕ ಪರಿಸ್ಥಿತಿ ಬಾರದಿರಲಿ‌ ಎಂದು ಪ್ರಾರ್ಥನೆ ಮಾಡುತ್ತೇನೆ. ಅಲ್ಲದೇ ಈ ಜಾಗವನ್ನು ನನ್ನ ಕುಟುಂಬದಿಂದ ಮರಣಹೊಂದಿದವರ ಹೆಸರಲ್ಲಿ ಜಾಗ ದಾನ ನೀಡಿದ್ದೇನೆ, ಎಲ್ಲರೂ ನನ್ನ ಕುಟುಂಬದವರಿಗೆ ಬೇಕಾಗಿ ಪ್ರಾರ್ಥನೆ ಮಾಡಬೇಕಾಗಿ ಕೇಳಿಕೊಂಡರು. ಪ್ರಚಾರದ ಎಂದರೆ ನನಗೆ ಭಯ: ಕೊಂಡಂಗೇರಿ ಸಂತ್ರಸ್ತರಿಗೆ ಮನೆ ನಿರ್ಮಿಸಲು ನನ್ನ ಒಂದುವರೆ ಎಕರೆ ತೋಟವನ್ನು ಎರಡು ದಿನಗಳ ಹಿಂದೆಯೇ ಜಮಾಹತ್ ಅವರಿಗೆ ಹಸ್ತಾಂತರಿಸಿದ್ದೆ. ನಾನು ಪತ್ರಿಕೆ ಮಾಧ್ಯಮಗಳಲ್ಲಿ ಈ ವಿಷಯ ಪ್ರಚಾರ ಹಾಗೂ ನನ್ನ ಭಾವಚಿತ್ರ ಬರಬಾರದು ಎಂದಿದ್ದೆ.f ಕೊಡಗು ಜಿಲ್ಲೆಯ ಬೇತ್ರಿ, ನೆಲ್ಲಿಹುದಿಕೇರಿ , ಗುಯ್ಯ,f ನೆಲ್ಲಿಹುದಿಕೇರಿ ಹಾಗೂ ವಿವಿಧೆಡಯಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿ ಕೊಡಲು ದಾನಿಗಳು ಮುಂದೆ ಬರಬೇಕು ಎಂದರು. ಉತ್ತಮ ಫಸಲು ಬಿಡುವ ಕಾಫಿ ತೋಟ: ಹೆಚ್.ಎಂ ಅಬ್ದುಲ್ಲ( ಉಮ್ಮಣಿ ಹಾಜಿ) ಅವರು ತಮ್ಮ ವಾರ್ಷಿಕ ಉತ್ತಮ ಫಸಲು ಬಿಡುವ ಕಾಫಿ ತೋಟವನ್ನು ಸಂತ್ರಸ್ತರಿಗೆ ದಾನ ನೀಡಿರುವ ಕಾರ್ಯವನ್ನು ಇಲ್ಲಿನ ಸ್ಥಳೀಯ ಜಮಾಹತ್ ಶ್ಲಾಘಿಸಿದರು. *ಬಾಕ್ಸ್* ಉಮ್ಮಣಿ‌ ಹಾಜಿ ಎಂದೇ ಪ್ರಖ್ಯಾತರು ಕೊಂಡಂಗೇರಿಯ ಹೆಚ್.ಎಂ ಅಬ್ದುಲ್ಲಾ ಹಾಜಿ ಅವರು ಉಮ್ಮಣಿ ಹಾಜಿ‌ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಕೊಂಡಂಗೇರಿ ಎಸ್.ವೈ.ಎಸ್ ಬ್ರಾಂಚ್ ಅಧ್ಯಕ್ಷರಾಗಿದ್ದರೆ..
Previous Post
Next Post

0 Post a Comment: