ಕೊಡಗು ಎಸ್.ವೈ.ಎಸ್ ವತಿಯಿಂದ ಕೊಡಗು ನೆರೆ ಸಂತ್ರಸ್ತರಿಗೆ "ಐಟಿ ಸೆಲ್ ಪೋಗ್ರಾಂ" 


ಟೈಮ್ಸ್ ಆಫ್ ಕೂರ್ಗ್ 
ಚೆಟ್ಟಳ್ಳಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರಲಯದಲ್ಲಿ ಹಲವಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ತಮಗೆ ಬೇಕಾದ ಹಲವು ದಾಖಲೆಗಳಾದ ಆಧಾರ್ ಕಾರ್ಡ್ ,ಮಾರ್ಕ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ರೇಷನ್ ಕಾರ್ಡ್ ,ಹೆಲ್ತ್ ಕಾರ್ಡ್, ಆರ್. ಸಿ ಬುಕ್, ಇನ್ಶೂರೆನ್ಸ್ ಕಾಪಿ, ಆದಾಯ ಸರ್ಟಿಫಿಕೇಟ್ ,ಜಾತಿ ಧೃಡೀಕರಣ ಪತ್ರ, ಗ್ಯಾಸ್ ಬುಕ್ , ಪಾನ್ ಕಾರ್ಡ್, ಆರ್. ಟಿ.ಸಿ ಪಾಸ್‌ಪೋರ್ಟ್ ಇತ್ಯಾದಿ ನೀರಿನಲ್ಲಿ ಮುಳುಗಿ ನಷ್ಟವಾಗಿದೆ.ಇವುಗಳನ್ನು ಸರಿಪಡಿಸಿ ಕೊಡುವ "ಸೆಲ್ ಪೋಗ್ರಾಂ" ಎಂಬ ವಿನೂತ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಎಸ್.ವೈ.ಎಸ್ ಹಮ್ಮಿಕೊಂಡಿದ್ದೇವೆ ಎಂದು ಜಿಲ್ಲಾ ಎಸ್.ವೈ.ಎಸ್ ಅಧ್ಯಕ್ಷ ಹಫೀಲ್ ಸಹದಿ ತಿಳಿಸಿದ್ದಾರೆ. ಶನಿವಾರ ಹಾಗೂ ಭಾನುವಾರ ದಾರುನ್ನಜಾತ್ ಸುನ್ನಿ ಸೆಂಟರ್ ನೆಲ್ಲಿಹುದಿಕೇರಿ, ದಿನಾಂಕ ೧೯ ಹಾಗೂ ೨೦ ರಂದು ಕೊಡಗು ಸುನ್ನಿ ವೆಲ್ಪೇರ್ ಕಛೇರಿ ನಾಪೋಕ್ಲು, ಹಾಗೂ ದಿನಾಂಕ ೨೧,ಹಾಗೂ ೨೨ ರಂದು ಕೊಂಡಂಗೇರಿ ಎಸ್.ವೈ.ಎಸ್ ಕಛೇರಿಯಲ್ಲಿ ನಡೆಯಲಿದೆ ಎಂದು ಹಫೀಲ್ ಸಹದಿ‌ ತಿಳಿಸಿದ್ದಾರೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಕೇಳಿ ಕೇಳಿಕೊಂಡಿದ್ದಾರೆ.
Previous Post
Next Post

0 Post a Comment: