ಜೈನ್ ಅಂತರಾಷ್ಟ್ರೀಯ ಸಂಸ್ಥೆಯ ವತಿಯಿಂದ ಸಂತ್ರಸ್ತ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಪಠ್ಯ ಪುಸ್ತಕ ವಿತರಣೆ


ವರದಿ : ತೌಸಿಫ್ ಅಹ್ಮದ್ ಅಮ್ಮತ್ತಿ
ಅಮ್ಮತ್ತಿ: ಕೊಡಗಿನಲ್ಲಿ ಮಹಾಮಳೆಗೆ ತುತ್ತಾಗಿ ನಿರಾಶ್ರಿತರ ಕೇಂದ್ರಗಳಲ್ಲಿರುವ ವಿದ್ಯಾರ್ಥಿಗಳಿಗೆ ಜೈನ್ ಅಂತರಾಷ್ಟ್ರೀಯ ಸಂಸ್ಥೆಯ ವತಿಯಿಂದ ಬ್ಯಾಗ್ , ಪಠ್ಯ ಪುಸ್ತಕ ಸೇರಿದಂತೆ ಆವಶ್ಯಕ ಪಠ್ಯ ಸಾಮಾಗ್ರಿಗಳನ್ನು ವಿತರಿಸಲಾಯಿತು. ಕೊಂಡಂಗೇರಿ ಹಾಗು ಬೇತ್ರಿ ಗ್ರಾಮದ ನಿರಾಶ್ರಿತ ವಿದ್ಯಾರ್ಥಿಗಳಿಗೆ ಬ್ಯಾಗ್ , ಚಾಪೆ , ಪೆನ್ , ಪೆನ್ಸಿಲ್ , ಪುಸ್ತಕ ಸೇರಿದಂತೆ ಪಠ್ಯೋಪಕರಣಗಳನ್ನು ವಿತರಿಸಲಾಯಿತು. ಈ ಸಂಧರ್ಭ ಜೈನ್ ಅಂತರಾಷ್ಟ್ರೀಯ ಸಂಸ್ಥೆಯ ಮುಖ್ಯಸ್ಥರಾದ ಪ್ರವೀಣ್ ಜೈನ್ , ನೇತಾಜಿ ಶಾಲೆ ಅಮ್ಮತ್ತಿ ಯ ಪ್ರಾಂಶುಪಾಲರಾದ ಝರೀನಾ ಖಾನಂ , ಕಾರ್ಯದರ್ಶಿ ಅರ್ಶದ್ ಸಿ.ಎ. ಮತ್ತು ಇತರರು ಉಪಸ್ಥಿತರಿದ್ದರು.

Previous Post
Next Post

0 Post a Comment: