ವರದಿ : ತೌಸಿಫ್ ಅಹ್ಮದ್ ಅಮ್ಮತ್ತಿ
ಅಮ್ಮತ್ತಿ: ಅಮ್ಮತ್ತಿಯ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಗುಡ್‌ಶೆಫರ್ಡ್ ಶಾಲೆಯಲ್ಲಿ ಸರಳ ರೀತಿಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಿಸಲಾಯಿತು. ಶಾಲೆಯ ವಿದ್ಯಾರ್ಥಿ ನಾಯಕಿ ಮರೀನ ಕಾರ್ಯಕ್ರಮದ ನಿರೂಪಣೆಯನ್ನು ನೆರೆವೇರಿಸಿದಳು. ಸಂಸ್ಥೆಯ ಪ್ರಾಂಶುಪಾಲರಾದ ಸಿಸ್ಟರ್ ಮರಿಯಾ ತೆರೇಸಾ ಅವರು ಧ್ವಜಾರೋಹಣ ಮಾಡಿದರು. ನಂತರ ಮಾತನಾಡಿದ ಅವರು ಸ್ವಾತಂತ್ರ್ಯ ವೆಂದರೆ ನಮಗೆ ಅನಿಸುವಂತೆ ನಡೆಯುವುದಲ್ಲ , ನಮ್ಮ ನಡೆಗೆಯನ್ನು ಒಳಿತಿನೆಡೆಗೆ ಇಡುವುದಾಗಿದೆ ಎಂದರು. ವಿದ್ಯಾರ್ಥಿನಿ ರೋನ ದೇಶಭಕ್ತಿ ಗೀತೆ ಹಾಡಿ ಗಮನ ಸೆಳೆದಳು. ಕಾರ್ಯಕ್ರಮದಲ್ಲಿ ಸಿಸ್ಟರ್ ಲೀಮ , ವಿದ್ಯಾರ್ಥಿ ಹಾಗು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಅಮ್ಮತ್ತಿಯ ನೇತಾಜಿ ಶಾಲೆಯ ಪ್ರಾಂಶುಪಾಲರಾದ ಜ಼ರೀನ ಖಾನಂ ಅವರು ಧ್ವಜಾರೋಹಣ ಮಾಡಿದರು. ಸಿಹಿ ಹಂಚುವ ಮೂಲಕ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನವನ್ನು ಕೊಂಡಾಡಿದರು.ಈ ಸಂಧರ್ಭ ಶಾಲೆಯ ದೈಹಿಕ ಶಿಕ್ಷಕರಾದ ಆಶಿಕ್ ಹಾಗು ಇನ್ನಿತರ ಶಿಕ್ಷಕರು ಉಪಸ್ಥಿತರಿದ್ದರು. ಅಮ್ಮತ್ತಿ ಪ್ರೌಢ ಶಾಲೆಯಲ್ಲಿ ಸುಂದರವಾದ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ವಿದ್ಯಾರ್ಥಿಗಳ ಪಥಸಂಚಲನ ಎಲ್ಲಾರ ಗಮನ ಸೆಳೆಯಿತು. ಪ್ರಾಂಶುಪಾಲರಾದ ಸದಾನಂದ ಅವರು ಧ್ವಜಾರೋಹಣ ಮಾಡಿ ಸಂದೇಶ ಭಾಷಣ ಮಾಡಿದರು.






0 Post a Comment: