ಮಡಿಕೇರಿ,: ವಿರ್ದ್ಯಾರ್ಥಿಗಳು ಬಣ್ಣದ ಬದುಕಿಗೆ ಆಸೆ ಪಡದೆ, ಯಾವುದಾದರೂ ಉದ್ಯೋಗ ಪಡೆಯುವತ್ತ ಗುರಿ ಸಾಧಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಸಲಹೆ ಮಾಡಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಸಕ್ತ ಸಾಲಿನ ಪಠ್ಯೇತರ ಮತ್ತು ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯುವಜನರಿಗೆ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಮಾದರಿಯಾಗಬೇಕು. ಅಬ್ದುಲ್ ಕಲಾಂ ಅವರು ದಿನಪತ್ರಿಕೆಯನ್ನು ಮನೆ ಮನೆ ಹಂಚಿ ವಿದ್ಯಾಭ್ಯಾಸ ಮಾಡಿ ವಿಜ್ಞಾನಿಯಾದರು. ಅವರಂತೆ ಗುರಿ ಸಾಧಿಸಲು ಸತತ ಪ್ರಯತ್ನ ಪಡಬೇಕು ಎಂದು ಸುನಿಲ್ ಸುಬ್ರಮಣಿ ಅವರು ತಿಳಿಸಿದರು. ಗುರಿ ಇದ್ದಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ. ಗುರುಗಳ ಸಹಕಾರ ಇದ್ದಲ್ಲಿ ಗುರಿಯನ್ನು ತಲುಪಲು ಸಾಧ್ಯ. ಆದ್ದರಿಂದ ಗುರು ಹಿರಿಯರಿಗೆ ಗೌರವ ನೀಡಬೇಕು. ತಪ್ಪನ್ನು ಸರಿಪಡಿಸಿಕೊಂಡು ಹೋಗುವಂತಾಗಬೇಕು ಎಂದು ಅವರು ಸಲಹೆ ಮಾಡಿದರು. ಹಿಂದೆ ಚಪ್ಪಲಿ ಇಲ್ಲದೆ ಹತ್ತಾರು ಕಿ.ಮೀ.ನಡೆದುಕೊಂಡು ಶಾಲೆಗೆ ಹೋಗುತ್ತಿದ್ದರು. ಆದರೆ ಆಧುನಿಕ ಜಗತ್ತಿನಲ್ಲಿ ಬಸ್ಸು ಸೌಕರ್ಯ ಇತರ ಸೌಲಭ್ಯಗಳು ಇವೆ. ಅದನ್ನು ಬಳಸಿಕೊಂಡು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು. ಜೊತೆಗೆ ಕ್ರೀಡೆ, ಸಂಗೀತ, ಸಾಹಿತ್ಯ ಹೀಗೆ ಇತರ ಚಟುವಟಿಕೆಗಳಲ್ಲೂ ಸಹ ತೊಡಗಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವಂತಾಗಬೇಕು ಎಂದು ಸುನಿಲ್ ಸುಬ್ರಮಣಿ ಅವರು ನುಡಿದರು. ವಿದ್ಯಾರ್ಥಿಗಳು ದಿನಪತ್ರಿಕೆಯನ್ನು ಓದಬೇಕು. ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳಬೇಕು. ಸಮಾಜದ ಆಗುಹೋಗುಗಳ ಬಗ್ಗೆ ಜ್ಞಾನವಿರಬೇಕು ಎಂದರು. ಪ್ರಕೃತಿ ವಿಕೋಪದಿಂದ ಕಳೆದ ಬಾರಿ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕು, ಈ ಬಾರಿ ವಿರಾಜಪೇಟೆ ತಾಲ್ಲೂಕಿನಲ್ಲಿ ಸಂಕಷ್ಟ ಎದುರಿಸುವಂತಾಯಿತು. ಆದರೂ ದೃತಿಗೆಡದೆ ಬದುಕು ನಡೆಸಲಾಗುತ್ತಿದೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವೈ.ಚಿತ್ರಾ, ಪ್ರಾಧ್ಯಾಪಕರಾದ ಶಶಿಧರ, ಅವರು ಮಾತನಾಡಿದರು. ಕುಸುಮ ಇತರರು ಇದ್ದರು. ಪ್ರಾಧ್ಯಾಪಕರಾದ ಡಾ.ಕೆ.ಸಿ.ದಯಾನಂದ ಅವರು ಸ್ವಾಗತಿಸಿದರು. ಚಂದ್ರಕಲಾ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿ ಶಿವ ಪ್ರಾರ್ಥಿಸಿದರು. ಪ್ರಾಧ್ಯಾಪಕರಾದ ರಾಘವೇಂದ್ರ ವಂದಿಸಿದರು.
ಉದ್ಯೋಗ ಪಡೆಯುವತ್ತ ಗುರಿ ಸಾಧಿಸಿ: ಸುನಿಲ್ ಸುಬ್ರಮಣಿ
Categories:
Featured
ಕೊಡಗು
Publish Date:
August 23, 2019

0 Post a Comment: