ಬೆಂಗಳೂರು: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಮೂಲಕ ಫೋನ್ ಕರೆಗಳು ಹೋಗಿದ್ದವು ಎಂಬ ಮಾಹಿತಿಯ ಪ್ರಕಾರ ಅಲರ್ಟ್ ಆದ ಪೊಲೀಸರು ತಾಲೂಕಿನಾದ್ಯಂತ ತೀವ್ರ ತಪಾಸಣೆ ನಡೆಸಿ ಕೇರಳದಲ್ಲಿ ಮೌಲ್ವಿ ವೃತ್ತಿಯನ್ನು ನಿರ್ವಹಿಸುತ್ತಿದ್ದ ರವೂಫ್ ಎಂಬವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆಗಾಗಿ ಎನ್‍ಐಎ ಒಪ್ಪಿಸಿದ್ದಾರೆ ಎಂಬ ಹಸಿ ಹಸಿ ಸುಳ್ಳನ್ನು ಬಿತ್ತರಿಸಿದ ಕರ್ನಾಟಕದ ನ್ಯೂಸ್ ಚಾನಲ್ ಗಳು ತಾವೇನೋ ಸಾಧನೆ ಮಾಡಿದೆವು ಎಂದು ಬೀಗಿದವು. ಆದರೆ ವಾಸ್ತವದಲ್ಲಿ ರವೂಫ್ ಎಂಬವರು ಇತ್ತೀಚೆಗೆ ನಿಧನ ಹೊಂದಿದ ಮಂಜನಾಡಿ ಉಸ್ತಾದರ ಶಿಷ್ಯ, ಅಪ್ಪಟ ಸೌಮ್ಯವಾದಿ ಎಂಬ ಕಾರಣಕ್ಕಾಗಿ ಉಸ್ತಾದರ ವಿಶ್ವಾಸಗಳಿಸಿ ಅವರ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಂತಹ ಮುಗ್ಧ ಯುವ ಧಾರ್ಮಿಕ ಪಂಡಿತನ ಮೇಲೆ ಪೂರ್ವಾಗ್ರಹ ಪೀಡಿತ ಮಾದ್ಯಮಗಳು "ಉಗ್ರ ಪಟ್ಟ" ಕಟ್ಟಿರುವುದನ್ನು ನೋಡಿದರೆ ಜಾಗತಿಕ ಮಟ್ಟದಲ್ಲಿದ್ದ "ಇಸ್ಲಾಮೀ ಫೋಭಿಯಾ" ಭಾರತದ ಮಾಧ್ಯಮ ಲೋಕಕ್ಕೂ ಕಾಲಿಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಾಧ್ಯಮಗಳು ನಡೆಸುವ ಈ ಮಹಾತಪ್ಪುಗಳಿಗೆ ಪದೇ ಪದೇ ಅದೆಷ್ಟೋ ಮುಗ್ಧರು ಬಲಿಯಾಗುತ್ತಿದ್ದಾರೆ.ಆದರೆ ಮಾಧ್ಯಮಗಳು ಮಾತ್ರ ತನ್ನ ಚಾಳಿಯನ್ನು ಮುಂದುವರಿಸುತ್ತಲೇ ಇದೆ. ಪೊಲೀಸ್ ಅಧೀಕ್ಷಕರೇನೋ ಈ ಘಟನೆಯನ್ನು ಅಲ್ಲಗಳೆಯುವ ಮೂಲಕ ತನ್ನ ಕೈಯನ್ನು ತೊಳೆದುಕೊಂಡರು. ಆದರೆ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ತನ್ನ ಬಗ್ಗೆ ತಪ್ಪು ಕಲ್ಪನೆಗಳು ರವಾನೆಯಾಗಿ ಮುಖಭಂಗಕ್ಕೊಳಗಾದ ರವೂಫ್ ರವರ ಘನತೆಯನ್ನು ಮರಳಿಸುವವರು ಯಾರು ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಕನಿಷ್ಠ ಪಕ್ಷ ಮಾಧ್ಯಮಗಳು ಒಂದು ಕ್ಷಮಾಪನೆ ಅಥವಾ ಸ್ಪಷ್ಟೀಕರಣ ನೀಡುತ್ತಿಲ್ಲ !! ಆದ್ದರಿಂದ ಮಾಧ್ಯಮಗಳ ಈ ಸರ್ವಾಧಿಕಾರಿ ನಿಲುವುಗಳನ್ನು ಕೊನೆಗೊಳಿಸವ ಸಲುವಾಗಿ ಪೊಲೀಸ್ ಇಲಾಖೆಯು ಕುಡುಕರು, ಸಂಶಯಾಸ್ಪದ ವ್ಯಕ್ತಿಗಳು ಮತ್ತು ಪ್ರತಿಭಟನಾ ನಿರತರ ಮೇಲೆ ಸ್ವಯಂ ಪ್ರೇರಿತ ಕೇಸುಗಳು ದಾಖಲಿಸುವುದನ್ನು ಬಿಟ್ಟು ಇಂತಹ ಮಾಧ್ಯಮಗಳ ಮೇಲೆ ಕೇಸುಗಳನ್ನು ದಾಖಲಿಸಿ ತನ್ನ ಕರ್ತವ್ಯ ಪ್ರಜ್ಞೆಯನ್ನು ಮೆರೆಯಬೇಕಾಗಿದೆ. ಹಾಗೂ ಸಂಬಂಧಪಟ್ಟ ಇಲಾಖೆಯು ಇಂತಹ ಮಾಧ್ಯಮಗಳ ಪರವಾನಿಗೆಯನ್ನೇ ರದ್ದು ಪಡಿಸುವ ತೀರ್ಮಾನವನ್ನು ಕೈ ಗೊಳ್ಳಬೇಕೆಂದು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಒತ್ತಾಯಿಸಿದ್ದಾರೆ.
ಮೌಲ್ವಿ ರವೂಫ್ ರವರ ಮೇಲೆ ಸುಳ್ಳಾರೋಪ ಮಾಡಿರುವ ಎಲ್ಲಾ ಮಾಧ್ಯಮಗಳ ಮೇಲೆ ಪೊಲೀಸರು ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಲಿ: ರಿಯಾಝ್ ಫರಂಗಿಪೇಟೆ
Categories:
Featured
ಕೊಡಗು
ರಾಜ್ಯ ಸುದ್ದಿ
Publish Date:
August 20, 2019
ಬೆಂಗಳೂರು: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಮೂಲಕ ಫೋನ್ ಕರೆಗಳು ಹೋಗಿದ್ದವು ಎಂಬ ಮಾಹಿತಿಯ ಪ್ರಕಾರ ಅಲರ್ಟ್ ಆದ ಪೊಲೀಸರು ತಾಲೂಕಿನಾದ್ಯಂತ ತೀವ್ರ ತಪಾಸಣೆ ನಡೆಸಿ ಕೇರಳದಲ್ಲಿ ಮೌಲ್ವಿ ವೃತ್ತಿಯನ್ನು ನಿರ್ವಹಿಸುತ್ತಿದ್ದ ರವೂಫ್ ಎಂಬವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆಗಾಗಿ ಎನ್‍ಐಎ ಒಪ್ಪಿಸಿದ್ದಾರೆ ಎಂಬ ಹಸಿ ಹಸಿ ಸುಳ್ಳನ್ನು ಬಿತ್ತರಿಸಿದ ಕರ್ನಾಟಕದ ನ್ಯೂಸ್ ಚಾನಲ್ ಗಳು ತಾವೇನೋ ಸಾಧನೆ ಮಾಡಿದೆವು ಎಂದು ಬೀಗಿದವು. ಆದರೆ ವಾಸ್ತವದಲ್ಲಿ ರವೂಫ್ ಎಂಬವರು ಇತ್ತೀಚೆಗೆ ನಿಧನ ಹೊಂದಿದ ಮಂಜನಾಡಿ ಉಸ್ತಾದರ ಶಿಷ್ಯ, ಅಪ್ಪಟ ಸೌಮ್ಯವಾದಿ ಎಂಬ ಕಾರಣಕ್ಕಾಗಿ ಉಸ್ತಾದರ ವಿಶ್ವಾಸಗಳಿಸಿ ಅವರ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಂತಹ ಮುಗ್ಧ ಯುವ ಧಾರ್ಮಿಕ ಪಂಡಿತನ ಮೇಲೆ ಪೂರ್ವಾಗ್ರಹ ಪೀಡಿತ ಮಾದ್ಯಮಗಳು "ಉಗ್ರ ಪಟ್ಟ" ಕಟ್ಟಿರುವುದನ್ನು ನೋಡಿದರೆ ಜಾಗತಿಕ ಮಟ್ಟದಲ್ಲಿದ್ದ "ಇಸ್ಲಾಮೀ ಫೋಭಿಯಾ" ಭಾರತದ ಮಾಧ್ಯಮ ಲೋಕಕ್ಕೂ ಕಾಲಿಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಾಧ್ಯಮಗಳು ನಡೆಸುವ ಈ ಮಹಾತಪ್ಪುಗಳಿಗೆ ಪದೇ ಪದೇ ಅದೆಷ್ಟೋ ಮುಗ್ಧರು ಬಲಿಯಾಗುತ್ತಿದ್ದಾರೆ.ಆದರೆ ಮಾಧ್ಯಮಗಳು ಮಾತ್ರ ತನ್ನ ಚಾಳಿಯನ್ನು ಮುಂದುವರಿಸುತ್ತಲೇ ಇದೆ. ಪೊಲೀಸ್ ಅಧೀಕ್ಷಕರೇನೋ ಈ ಘಟನೆಯನ್ನು ಅಲ್ಲಗಳೆಯುವ ಮೂಲಕ ತನ್ನ ಕೈಯನ್ನು ತೊಳೆದುಕೊಂಡರು. ಆದರೆ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ತನ್ನ ಬಗ್ಗೆ ತಪ್ಪು ಕಲ್ಪನೆಗಳು ರವಾನೆಯಾಗಿ ಮುಖಭಂಗಕ್ಕೊಳಗಾದ ರವೂಫ್ ರವರ ಘನತೆಯನ್ನು ಮರಳಿಸುವವರು ಯಾರು ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಕನಿಷ್ಠ ಪಕ್ಷ ಮಾಧ್ಯಮಗಳು ಒಂದು ಕ್ಷಮಾಪನೆ ಅಥವಾ ಸ್ಪಷ್ಟೀಕರಣ ನೀಡುತ್ತಿಲ್ಲ !! ಆದ್ದರಿಂದ ಮಾಧ್ಯಮಗಳ ಈ ಸರ್ವಾಧಿಕಾರಿ ನಿಲುವುಗಳನ್ನು ಕೊನೆಗೊಳಿಸವ ಸಲುವಾಗಿ ಪೊಲೀಸ್ ಇಲಾಖೆಯು ಕುಡುಕರು, ಸಂಶಯಾಸ್ಪದ ವ್ಯಕ್ತಿಗಳು ಮತ್ತು ಪ್ರತಿಭಟನಾ ನಿರತರ ಮೇಲೆ ಸ್ವಯಂ ಪ್ರೇರಿತ ಕೇಸುಗಳು ದಾಖಲಿಸುವುದನ್ನು ಬಿಟ್ಟು ಇಂತಹ ಮಾಧ್ಯಮಗಳ ಮೇಲೆ ಕೇಸುಗಳನ್ನು ದಾಖಲಿಸಿ ತನ್ನ ಕರ್ತವ್ಯ ಪ್ರಜ್ಞೆಯನ್ನು ಮೆರೆಯಬೇಕಾಗಿದೆ. ಹಾಗೂ ಸಂಬಂಧಪಟ್ಟ ಇಲಾಖೆಯು ಇಂತಹ ಮಾಧ್ಯಮಗಳ ಪರವಾನಿಗೆಯನ್ನೇ ರದ್ದು ಪಡಿಸುವ ತೀರ್ಮಾನವನ್ನು ಕೈ ಗೊಳ್ಳಬೇಕೆಂದು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಒತ್ತಾಯಿಸಿದ್ದಾರೆ.

0 Post a Comment: