ಅನ್ವಾರುಲ್ ಹುದಾದಲ್ಲಿ 73-ನೇ ಸ್ವಾತಂತ್ರ್ಯೋತ್ಸವ ಆಚರಣೆ


ವರದಿ: ತೌಸೀಫ್ ಅಹ್ಮದ್ 
 ಅಮ್ಮತ್ತಿ: ಕೊಡಗು ಜಿಲ್ಲೆಯ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಅನ್ವಾರುಲ್ ಹುದಾ ದಲ್ಲಿ 73 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಲಿಯಾಕತ್ ಅಲಿಯವರು ಧ್ವಜಾರೋಹಣಗೈದರು. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆಯವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಚಂದ್ರ ಕುಮಾರ್ ಸರ್ ಸಂದೇಶ ಭಾಷಣ ಮಾಡಿದರು. ಮುಖ್ಯ ಭಾಷಣದಲ್ಲಿ ಮಾತನಾಡಿದ ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಅವರು "ಪ್ರವಾಹ ಹಾಗೂ ಬೂಕಸಿತದಿಂದ ನಿರಾಶ್ರಿತರಾಗಿರುವಂತಹವರ ಕಣ್ಣೀರೊರೆಸುವಂತಹ ರೀತಿಯಲ್ಲಿನ ಸೇವಾಮನೋಭಾವವನ್ನು ಬೆಳೆಸಿಕೊಂಡು ಈ ದಿನವನ್ನು ಅರ್ಥಪೂರ್ಣವಾದ ರೀತಿಯಲ್ಲಿ ನಾವು ಆಚರಿಸಬೇಕು ಅದೇರೀತಿ ರಾಷ್ಟ್ರಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವಂತಹ ಅವರ ಕುರಿತು ಹೆಚ್ಚು ಹೆಚ್ಚು ಕಲಿಯುವಂತಹ ಮನೋಭಾವವನ್ನು ರೂಡಿಸಬೇಕು" ಎಂದರು. ಸಂಸ್ಥೆಯ ಉಪನ್ಯಾಸಕರಾದ ಶಕೀರ್ ಮಾಷ್ಟರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಸಂಶುದ್ದೀನ್ ವಿರಾಜಪೇಟೆ, ಫೈಝಲ್ ಚೇರಂಬಾಣೆ, ಹುಸೈನ್ ಹಾಜಿ, ತಫ್ಸೀರ್ ಸೋಮವಾರಪೇಟೆ ಉಪಸ್ಥಿತರಿದ್ದರು. ಅಬ್ದುಲ್ ಜಲೀಲ್ ಅಮೀನಿ ಸ್ವಾಗತಿಸಿ ವಂದಿಸಿದರು.

Previous Post
Next Post

0 Post a Comment: