ಸತ್ಯಾಗ್ರಹಕ್ಕೆ ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಘಟಕ ಬೆಂಬಲ
Categories:
ಕೊಡಗು
Publish Date:
January 29, 2020
ಮಡಿಕೇರಿ (TOC NEWS MADIKERI ) : ಕೇಂದ್ರ ಸರ್ಕಾರದ ಜನವಿರೋಧಿ ಕಾಯ್ದೆಗಳಾದ NRC CAA ವಿರೋಧಿಸಿ ಪ್ರಗತಿಪರ ಜನಾಂದೋಲನ ವೇದಿಕೆ ಕೊಡಗು ಜಿಲ್ಲೆ ವತಿಯಿಂದ ೩ ದಿವಸಗಳಿಂದ ನಡೆಯುತ್ತಿರುವ ನಿರಂತರ ಉಪವಾಸ ಸತ್ಯಾಗ್ರಹ ಕ್ಕೆ ಬೆಂಬಲಿಸಿ ಇಂದು ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.
ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಮಹ್ಮೂದ್ ಮುಸ್ಲಿಯಾರ್ ಎಡಪ್ಪಾಲಂ ಮಾತನಾಡಿ " ದೇಶಪ್ರೇಮವು ಇಸ್ಲಾಮ್ ನ ಒಂದು ಭಾಗವಾಗಿದೆ. NRC CAA ಕಾನೂನುಗಳು ಈ ನೆಲದಲ್ಲಿ ಹುಟ್ಟಿ ಬೆಳೆದವರನ್ನೇ ಈ ನೆಲದವನೇ ಎಂದು ಪ್ರಶ್ನಿಸುವ ಕರಾಳ ಕಾಯ್ದೆಯಾಗಿದೆ " ಎಂದರು.
ಜಮಾತ್ ಪ್ರಧಾನ ಕಾರ್ಯದರ್ಶಿಯಾದ ಮುಹಮ್ಮದ್ ಹಾಜಿ ಕುಂಜಿಲ " ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ವಿ.ಪಿ ಶಶಿಧರ್ ರವರ ನೇತೃತ್ವದಲ್ಲಿ ನಡೆಯುವ ಈ ಜನಾಂದೋಲನ ಕಾರ್ಯಕ್ರಮಕ್ಕೆ ಪೂರ್ಣ ಬೆಂಬಲವಿದೆ" ಎಂದು ಹೇಳಿದರು.
ಜಮಾಅತ್ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಹಫೀಳ್ ಸಅದಿ ಕೊಳಕೇರಿ ಮಾತನಾಡಿ " NRC CAA NPR ಬರೀ ಮುಸ್ಲಿಂರಿಗೆ ಸಂಬಂಧಪಟ್ಟ ವಿಷಯವಲ್ಲ. ಇದರಿಂದಾಗಿ ಇಡೀ ದೇಶದ ನಾಗರಿಕರು ಸಂಕಷ್ಟ ಕ್ಕೋಳಗಾಗಲಿದ್ದಾರೆ. ಮಾತ್ರವಲ್ಲ ಇದೊಂದು ಸಂವಿಧಾನ ವಿರೋಧಿ ಕಾಯ್ದೆಗಳಾಗಿವೆ " ಎಂದರು.
ಮುಸ್ಲಿಂ ಜಮಾಅತ್ ಲೀಗಲ್ ಅಡ್ವೈಸರಿ ಅಡ್ವೊಕೇಟ್ ಕೆ.ಎಂ ಕುಂಞಬ್ದುಲ್ಲಾ ಮಾತನಾಡಿ " ಸಂವಿಧಾನವನ್ನು ಉಳಿಸುವುದು ಇಡೀ ರಾಷ್ಟ್ರದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ವಾಗಿದೆ . ಆದ್ದರಿಂದಲೇ ಈವೊಂದು ಸಂವಿಧಾನ ವಿರೋಧಿ ಕಾಯ್ದೆಗಳ ವಿರುದ್ಧ ಇಂದು ಇಡೀ ರಾಷ್ಟ್ರವೇ ಎಚ್ಚೆತ್ತುಕೊಂಡು ಬೀದಿಗಿಳಿದಿದ್ದಾರೆ.
ಕಾರ್ಯಕ್ರಮದಲ್ಲಿ ಕೂರ್ಗ್ ಜಂಞಯ್ಯತುಲ್ ಉಲಮಾ ಕಾರ್ಯದರ್ಶಿ ಅಶ್ರಫ್ ಅಹ್ಸನಿ ವಿರಾಜಪೇಟೆ, ಮುಸ್ಲಿಂ ಜಮಾಅತ್ ಉಪಾಧ್ಯಕ್ಷರಾದ ಯೂಸುಫ್ ಕೊಂಡಂಗೇರಿ,ಹಾಗೂ ಇನ್ನಿತರ ಸದಸ್ಯರು ಹಾಗೂ ಪ್ರಗತಿಪರ ಜನಾಂದೋಲನ ವೇದಿಕೆಯ ಸಂಚಾಲಕರಾದ ವಿ.ಪಿ ಶಶಿಧರ್ , ಹಲವು ಸಂಘಟನೆಗಳ ನೇತಾರರು ಭಾಗವಹಿಸಿದ್ದರು.
( ಟೈಮ್ಸ್ ಆಫ್ ಕೂರ್ಗ್ ವೆಬ್ ನ್ಯೂಸ್ ಸುದ್ದಿ ಪ್ರಕಟಿಸಲು ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ )
+919148584135 (WhatsApp)
timesofcoorg@gmail.com



0 Post a Comment: