TOC ಕುಶಾಲನಗರ : ಕುಶಾಲನಗರ ಸಮೀಪದ ಕೂಡ್ಲೂರು ರಾಜ್ಯ ಹೆದ್ದಾರಿ ಬಳಿ ಇರುವ ಮಾವಿನ ತೋಪಿನ ಬಳಿ ಕುಶಾಲನಗರ ಕಡೆಗೆ ಬರುತ್ತಿದ್ದ (ಕೆಎ 12 ಬಿ 0048) ಟಾಟಾ ಇಂಡಿಕಾ ಕಾರು ಮತ್ತು (ಕೆಎ 12 ಎಸ್ 0063) ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು , ಸ್ಕೂಟರ್ ಸವಾರ ಅಜೇಯ್ (22) ರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿದ್ದರಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ಅಜೇಯ್ ಕುಶಾಲನಗರದ ಖಾಸಗಿ ಲಾಡ್ಜ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಸ್ಕೂಟರ್ ಮಾಲೀಕ ತಮಿಳುನಾಡುವಿಗೆ ಹಬ್ಬಕ್ಕೆಂದು ತೆರಳಿದ್ದಾರೆ. ಅಜೇಯ್ ತನ್ನ ಕೆಲಸದ ನಿಮಿತ್ತ ಕೂಡಿಗೆ ತೆರಳುತ್ತಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದೆ ಮೃತನು ಒಬ್ಬ ಅಣ್ಣ ಮತ್ತು ತಾಯಿಯನ್ನು ಅಗಲಿದ್ದಾರೆ. ವಿಷಯ ತಿಳದ ಕೂಡಲೇ ಡಿವೈಎಸ್ ಪಿ ಶೈಲೇಂದ್ರ ರವರ ನೇತೃತ್ವದಲ್ಲಿ ವೃತ್ತನಿರೀಕ್ಷರಾದ ಮಹೇಶ್ ಸಂಚಾರಿ ಠಾಣೆಯ ಎ ಎಸ್ ಐ ಕುಶಾಲಪ್ಪ ಸ್ಥಳ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

0 Post a Comment: