ದೇವಿಂದರ್ ಸಿಂಗ್ ನನ್ನು 15 ದಿನಗಳ ಕಾಲ ಎನ್ಐಎ ತನಿಖೆಗೆ ಆದೇಶಿಸಿದ ನ್ಯಾಯಾಲಯ
Categories:
ರಾಷ್ಟ್ರೀಯ ಸುದ್ದಿ
Publish Date:
January 23, 2020
ನವದೆಹಲಿ (www.timesofcoorg.in): ಹಿಜ್ಬುಲ್ ಮುಜಾಹಿದ್ದೀನ್ ಉಗ್ರರನ್ನು ಮತ್ತು ಇತರ ಮೂವರನ್ನ ಖಾಸಗಿ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಆರೋಪದಡಿ ಬಂಧಿಸಲಾಗಿರುವ ಡಿಎಸ್ಪಿ ಡೇವಿಂದರ್ ಸಿಂಗ್ ಅವರನ್ನು ಎನ್ಐಎ ನ್ಯಾಯಾಲಯವು ಜನವರಿ 23 ರ ಗುರುವಾರರಂದು ತನಿಖಾ ಸಂಸ್ಥೆಯ 15 ದಿನಗಳ ತನಿಖೆಗೆ ಕಳುಹಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಆರೋಪಿಗಳನ್ನು ಈ ಹಿಂದೆ ಜಮ್ಮುವಿನ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು.
ಏತನ್ಮಧ್ಯೆ, ಸಿಂಗ್ ಜೊತೆಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ಸಹೋದರ ಸೈಯದ್ ಇರ್ಫಾನ್ ನನ್ನು ಎನ್ಐಎ ಗುರುವಾರ ಬಂಧಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಜನವರಿ 11 ರಂದು ಸಿಂಗ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ಸೇರಿದಂತೆ ನಾಲ್ಕು ಜನರನ್ನು ಕರೆದೊಯ್ಯುವ ಖಾಸಗಿ ವಾಹನವನ್ನು ಪೊಲೀಸರು ತಡೆದು ಬಂಧಿಸಿದ್ದರು. ಮೂಲ : ದ.ಕ್ವಿಂಟ್

0 Post a Comment: