ಕಂದಾಯ ಇಲಾಖೆ ಒಕ್ಕಲೆಬ್ಬಿಸಿದ್ದ ವಿರಾಜಪೇಟೆಯ ಬಾಳುಗೋಡು ಗ್ರಾಮದ ನಿರಾಶ್ರಿತ ಕುಟುಂಬಗಳನ್ನು ಭೇಟಿ ಮಾಡಿದ SDPI ಕೊಡಗು ನಿಯೋಗ
Categories:
ಕೊಡಗು
Publish Date:
January 16, 2020
ವಿರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದಲ್ಲಿ 65 ನಿರಾಶ್ರಿತ ಕುಟುಂಬವನ್ನು ಒಕ್ಕಲೆಬ್ಬಿಸಿದ ಕಂದಾಯ ಇಲಾಖೆ ಗ್ರಾಮಕ್ಕೆ ಭೇಟಿ ನೀಡಿ ಹೋರಾಟದೊಂದಿಗೆ ಕೈ ಜೋಡಿಸಲು ಭರವಸೆ ನೀಡಿದ ಎಸ್.ಡಿ.ಪಿ.ಐ. ಕೊಡಗು ಜಿಲ್ಲಾ ನಿಯೋಗ...
ವಿರಾಜಪೇಟೆ (www.timesofcoorg.in): ವಿರಾಜಪೇಟೆ ತಾಲ್ಲೂಕಿನ ಬಾಳುಗೋಡು ಗ್ರಾಮದಲ್ಲಿ ಗುಡಿಸಲು ಕಟ್ಟಿ ವಾಸಮಾಡುತಿದ್ದ 65 ಬಡ ಕುಟುಂಬವನ್ನು ಕಂದಾಯ ಇಲಾಖೆಯು ಒಕ್ಕಲೆಬ್ಬಿಸಿ ನೆಲಸಮಮಾಡಿದ್ದು..
ಆ ಸ್ಥಳವೂ ಕಸ ವಿಲೇವಾರಿಗೆ ಎಂದು ಗುರುತಿಸಲಾಗಿದೆ ಇದರಿಂದ ನೂರಾರು ಬಡಕುಟುಂಬಗಳು ತಮ್ಮ ನಿವಾಸ , ಆಸ್ತಿ , ಪಾಸ್ತಿಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದು ಇದನ್ನರಿತ ಎಸ್.ಡಿ.ಪಿ.ಐ. ಕೊಡಗು ಜಿಲ್ಲಾ ನೇತೃತ್ವದ ನಿಯೋಗವೂ ಬೇಟಿ ನೀಡಿ ಬಡ ಕುಟುಂಬಗಳಿಗೆ ಸಾಂತ್ವನ ನೀಡೂದರ ಜೊತೆಗೆ ಮುಂದಿನ ದಿನಗಳಲ್ಲಿ ಮೂಲಭೂತ ಅಗತ್ಯತೆಗಳ ಬಗ್ಗೆ ಚರ್ಚಿಸಿ ಸೇವಾ ಕಾರ್ಯದಲ್ಲಿ ತಮ್ಮೊಂದಿಗೆ ಎಸ್.ಡಿ.ಪಿ.ಐ. ಪಕ್ಷವುಇ ಸದಾ ಕಾಲ ಇರುತ್ತದೆ ಎಂದು ಭರವಸೆ ನೀಡಿದರು...
ಈ ಸಂದರ್ಭದಲ್ಲಿ ಆ ನಿರಾಶ್ರಿತರಿಗೆ ಬೇಕಾದ ಅಗತ್ಯ ವಸ್ತುಗಳನ್ನು ವಿತರಿಸಿದರು.
ನಿರಾಶ್ರಿತ ಕುಟುಂಬದೊಂದಿಗೆ ಚರ್ಚೆ ನಡೆಸಿದ SDPI ಜಿಲ್ಲಾಧ್ಯಕ್ಷರಾದ ಟಿ.ಎಚ್ ಅಬೂಬಕರ್ ಹೋರಾಟಕ್ಕೆ ಎಸ್.ಡಿ.ಪಿ.ಐ ಪಕ್ಷವು ಅಗತ್ಯ ನೆರವು ನೀಡುವುದಾಗಿ ತಿಳಿಸಿದರು ಹಾಗೂ ದಿಡ್ಡಳ್ಳಿ ಮಾದರಿಯ ಡೊಡ್ಡ ಮಟ್ಟದ ಹೋರಾಟವನ್ನು ನಡೆಸಲು ಮುಂದಾಗುವುದಾಗಿ ತಿಳಿಸಿದರು....
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಟಿ.ಎಚ್. ಅಬೂಬಕ್ಕರ್, ಎಸ್.ಡಿ.ಪಿ.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್. ಕಾರ್ಯದರ್ಶಿ ಕಬೀರ್, ಜಿಲ್ಲಾ ಸಮಿತಿ ಸದಸ್ಯರಾದ ಸೌಕತ್ ಅಲಿ,ವಿರಾಜಪೇಟೆ ಮುಖಂಡರಾದ ಸಾಬಿತ್ ಉಪಸ್ಥಿತರಿದ್ದರು...


0 Post a Comment: