ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ NRC CAA & NPR ವಿರೋಧಿಸಿ ನಾಳೆ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ...
Categories:
ಕೊಡಗು
Publish Date:
يناير 09, 2020
ಮಡಿಕೇರಿ (TOC ನ್ಯೂಸ್) : ಕೇಂದ್ರದ ಬಿಜೆಪಿ ಸರ್ಕಾರ ಭಾರತದ ಸಂವಿಧಾನದ ಮೂಲ ಆಶಯಗಳಿಗೆ ವಿರುಧ್ಧವಾಗಿ ,ಭಾರತದ ಐಕ್ಯತೆಗೆ ಮಾರಕವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಪೌರತ್ವ ನೊಂದಣಿ (NRC CAA & NPR ) ಕಾಯ್ದೆಗಳನ್ನು ಜಾರಿಗೆ ತಂದಿದೆ ಇದನ್ನು ವಿರೋದಿಸಿ ಕೊಡಗು ಜಿಲ್ಲೆಯಲ್ಲಿ ಬಿಜೆಪಿಯೇತರ ಪಕ್ಷಗಳ ,ಸಂಘ ಸಂಸ್ಥೆಗಳು, ಸಮಾನ ಮನಸ್ಕರ ಕನ್ನೊಳಗೊಂಡತಹ ಪ್ರಗತಿಪರ ಒಕ್ಕೂಟದ ವತಿಯಿಂದ ನಾಳೆ ದಿನಾಂಕ 11--1-2020 ಶನಿವಾರದಂದು ಬೆಳಿಗ್ಗೆ 10-3 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.ನಮ್ಮ ಧ್ವನಿ ಸಂಚಾಲಕರಾದ ಶ್ರೀ ಮಹೇಂದ್ರ ಕುಮಾರ್, ಮಾಜಿ ಐಎಎಸ್ ಅಧಿಕಾರಿ ಶ್ರೀ ಶಶಿಕಾಂತ್ ಸೆಂಥಿಲ್ ಬರಹಗಾರರು ಚಿಂತಕರು ಸಾಹಿತಿಗಳಾದ ಶ್ರೀ ದೇವನೂರು ಮಹಾದೇವ ಇವರುಗಳು ಸಭೆಯಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಪ್ರಗತಿಪರ ಜನಾಂದೋಲನ ಸಮಿತಿ ಕೊಡಗು ಜಿಲ್ಲೆ ತಿಳಿಸಿದೆ.

0 Post a Comment: