ಸತ್ಯಾಗ್ರಹಕ್ಕೆ ಎಸ್ಸೆಸ್ಸೆಫ್ ಜಿಲ್ಲಾ ಸಮಿತಿಯ ಬೆಂಬಲ
Categories:
ಕೊಡಗು
Publish Date:
يناير 28, 2020
ಮಡಿಕೇರಿ (TOC ನ್ಯೂಸ್) : ಪ್ರಗತಿಪರ ಜನಾಂದೋಲನ ವೇದಿಕೆ ನಡೆಸುತ್ತಿರುವ NRC, CAA, NPR ವಿರುದ್ಧ ಉಪವಾಸ ಸತ್ಯಾಗ್ರಹಕ್ಕೆ ಎಸ್,ಎಸ್,ಎಫ್ ಕೊಡಗು ಜಿಲ್ಲೆಯ ಬೆಂಬಲ ಸೂಚಿಸಿ ಜಿಲ್ಲಾ ನಾಯಕರು ಸತ್ಯಾಗ್ರಹದಲ್ಲಿ ಪಾಲ್ಗೊಂಡರು.
ಸತ್ಯಾಗ್ರಹಕ್ಕೆ ನಾಯಕತ್ವ ನೀಡುತ್ತಿರುವ ವಿ.ಪಿ.ಶಶೀದರ್ ಹಾಗೂ ಇನ್ನಿತರ ಸಾಮಾಜಿಕ ಹೋರಾಟಗಾರರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ SSF ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆರವರು ಮಾತನಾಡಿ ಸಂವಿಧಾನದ ವಿರುದ್ಧದ ಯಾವುದೇ ಅನ್ಯಾಯಗಳನ್ನು ಪ್ರತಿಭಟಿಸುವ ಕಾರ್ಯಗಳಿಗೆ ಸಂಪೂರ್ಣ ಬೆಂಬಲ SSF ನೀಡಲಿದೆ.
ನಿರುದ್ಯೋಗ, ಬೆಲೆಯೇರಿಕೆಯಂತಹ ಆಡಳಿತಾತ್ಮಕ ಕುಂಠಿತಗಳನ್ನು ಮರೆಮಾಚಿ ಸಮಾಜವನ್ನು ಒಡೆದು ಆಳುವ ಮನೋಭಾವವನ್ನು ಆಡಳಿತ ನಡೆಸುವವರಲ್ಲಿ ಮೂಡಿದಂತಾಗಿದೆ ಅದರ ವಿರುದ್ಧ ನೈಜ ಭಾರತೀಯರು ಈಗ ಒಂದಾಗಿದ್ದಾರೆ ಎಂದರು.
SSF ರಾಜ್ಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಮಾತನಾಡಿ NRC CAA ಕಾಯ್ದೆಗಳು ಭಾರತದ ನೈಜ ಆಶಯಕ್ಕೆ ನೀಡುವ ಕೊಡಲಿಯೇಟಾಗಿದ್ದು ಸರ್ವರೂ ಅದರ ವಿರುದ್ದ ಧ್ವನಿ ಎತ್ತಬೇಕು ಎಂದರು.
ಜಿಲ್ಲಾ ಉಪಾಧ್ಯಕ್ಷರಾದ ಶಾಫಿ ಸಅದಿ ಮಾತನಾಡಿ ಉಪವಾಸ ಸತ್ಯಾಗ್ರಹದ ನಾಯಕರನ್ನು ಶ್ಲಾಘಿಸಿದರು,ಸಂವಿಧಾನ ವಿರುದ್ಧವಾಗಿ ಬರುವ ಎಲ್ಲಾ ವಿಚಾರಗಳಲ್ಲಿ ಭಾರತೀಯರೆಂಬ ನಿಟ್ಟಿನಲ್ಲಿ ಒಗ್ಗಾಟಗಬೇಕೆಂದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾ ನಾಯಕರು ಹಾಗೂ ಹಲವು ಸಾಮಾಜಿಕ ಹೋರಾಟಗಾರರು ಉಪಸ್ಥಿತರಿದ್ದರು.

0 Post a Comment: