ಇತಿಹಾಸ ಪ್ರಸಿದ್ಧ ಕೊಳಕೇರಿ ಮಖಾಂ ಉರೂಸ್ ಗೆ ಜನವರಿ 31ರಂದು ಚಾಲನೆ

ನಾಪೋಕ್ಲು ( TOC NEWS NAPOKLU ) : ಕೊಡಗಿನ ಚರಿತ್ರೆ ಪ್ರಸಿದ್ಧ ಝಿಯಾರತ್ ಕೇಂದ್ರವಾದ ಕೊಳಕೇರಿ ಮಖಾಂ ಉರೂಸ್ ಜನವರಿ 31 ರಿಂದ ಫೆಬ್ರವರಿ 04ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಪ್ರವಾದಿ ಕುಟುಂಬದ ಕಣ್ಮಣಿ ಗಳಾದ ಸೈಯದ್ ಫೈಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್,  ಸೈಯದ್ ಜಅಫರ್ ಸ್ವಾದಿಖ್ ತಂಙಳ್ ಕುಂಬೋಳ್, ಖ್ಯಾತ ಪ್ರಭಾಷಣಕಾರರಾದ ಜಲೀಲ್ ಇರ್ಫಾನಿ ಮಲಪ್ಪುರಂ, ಹಮೀದ್ ಫೈಝಿ ಕಿಲ್ಲೂರ್, ರಫೀಖ್ ಸಖಾಫಿ ದೇಲಂಪಾಡಿ, ಅಬೂಬಕರ್ ಫೈಝಿ ಕುಂಬಡಾಜೆ , ಕೊಡಗು ನಾಯಿಬ್ ಖಾಝಿಗಳಾದ ಮಹ್ಮೂದ್ ಮುಸ್ಲಿಯಾರ್ ಎಡಪ್ಪಾಲಂ ಇನ್ನಿತರ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ. ಉರೂಸ್ ಪ್ರಯುಕ್ತ ಫೆಬ್ರವರಿ ೦3ಕ್ಕೆ ಅನ್ನದಾನ ಏರ್ಪಡಿಸಲಾಗಿದೆ.
Previous Post
Next Post

0 Post a Comment: