ಸುಳ್ಯ ಸಮೀಪ ಬಸ್ - ಕಾರು ಅಪಘಾತ : ಇಬ್ಬರು ಮೃತ್ಯು , ನಾಲ್ವರಿಗೆ ಗಂಭೀರ ಗಾಯ


ಸುಳ್ಯ (TOC ನ್ಯೂಸ್): ಕೇರಳ ರಸ್ತೆ ಸಾರಿಗೆ ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಅಡ್ಕಾರು ಬಳಿ ಶುಕ್ರವಾರ ಸಂಜೆ ನಡೆದಿದೆ.

 ಮೃತಪಟ್ಟವರನ್ನು ಕೆದಿಲ ನಿವಾಸಿ ಸಾದಿಕ್ ಮತ್ತು ಕಬಕ ನಿವಾಸಿ ಮಜೀದ್ ಎಂದು ಗುರುತಿಸಲಾಗಿದೆ. ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಬಂಧಿಕರ ಮನೆಗೆ ತೆರಳಿ ಹಿಂದಿರುಗುವ ವೇಳೆ ಕೇರಳ ಬಸ್ ಮತ್ತು ಇವರ ಇನ್ನೋವಾ ಕಾರು ನಡುವೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.





Previous Post
Next Post

0 Post a Comment: