ವರದಿ: ಶಿಬಿಲಿ ಕಲ್ಕಂದೂರು
ಸೋಮವಾರಪೇಟೆ ( TOC ನ್ಯೂಸ್) : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (SSF) ಸೋಮವಾರಪೇಟೆ ಡಿವಿಷನ್ ಸಮಿತಿಯ ಹಾಗೂ QTEAM ವತಿಯಿಂದ ನಾಳೆ ಡಿವಿಷನ್ ಗೊಳಪಟ್ಟ ಸೆಕ್ಟರ್ ಕೇಂದ್ರಗಳಲ್ಲಿ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 8:00 ಗಂಟೆಗೆ ಹೊಸತೋಟದಲ್ಲಿ SSF ಕೊಡಗು ಜಿಲ್ಲಾಧ್ಯಕ್ಷರಾದ ಅಝೀಝ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಂತರ ಮಾದಪುರದಲ್ಲಿ 9:00 ಗಂಟೆಗೆ, ಸುಂಟಿಕೊಪ್ಪದಲ್ಲಿ 10:00 ಗಂಟೆಗೆ, ಕುಶಾಲನಗರದಲ್ಲಿ 11:15ಗಂಟೆಗೆ, ಕೂಡಿಗೆಯಲ್ಲಿ 12:30 ಗಂಟೆಗೆ, ಶನಿವಾರಸಂತೆಯಲ್ಲಿ 2:00 ಗಂಟೆಗೆ, ಕೊಡ್ಲಿಪೇಟೆಯಲ್ಲಿ 3:00 ಗಂಟೆಗೆ ಹಾಗೂ ಸೋಮವಾರಪೇಟೆಯಲ್ಲಿ 4:45ಗಂಟೆಗೆ ಕಾರ್ಯಕ್ರಮ ನಡೆಯಲಿದೆ.ಗಾಂಧೀಜಿಯ ಕನಸು ನನಸಾಗಲಿ ಎಂಬ ಧೇಯ್ಯದಲ್ಲಿ ಹಲವು ಕಡೆಗಳಲ್ಲಿನ ಕಾರ್ಯಕ್ರಮಗಳಲ್ಲಿ SSF ಸೋಮವಾರಪೇಟೆ ಡಿವಿಷನ್ ಅಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ಭಾಷಣ ಮಾಡಲಿದ್ದಾರೆ.ನಾಳೆ SSF ಸೋಮವಾರಪೇಟೆ ಡಿವಿಷನ್ ವತಿಯಿಂದ ಪ್ರಮುಖ ಕೇಂದ್ರಗಳಲ್ಲಿ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಕಾರ್ಯಕ್ರಮ
Categories:
ಕೊಡಗು
Publish Date:
October 01, 2019


0 Post a Comment: