ಮಂಗಳೂರು (TOC ನ್ಯೂಸ್): ಟ್ಯಾಂಕರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಅಡ್ಯಾರ್ ಕಟ್ಟೆ ಸಮೀಪ ಮಂಗಳವಾರ ನಡೆದಿದೆ.
ಉಳ್ಳಾಲ ಅಳೇಕಲ ನಿವಾಸಿ ಹಾತಿಮ್ (25) ಮೃತ ಬೈಕ್ ಸವಾರ ಎಂದು ತಿಳಿದುಬಂದಿದೆ.
ಅಡ್ಯಾರ್ ಕಣ್ಣೂರಿನಲ್ಲಿ ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಬೇಕಿದ್ದ ತರಕಾರಿ ಅಂಗಡಿಗೆ ಪೈಂಟ್ ತರಲೆಂದು ಫರಂಗಿಪೇಟೆ ಕಡೆ ಸವಾರ ಹಾತಿಮ್ ಹೊರಟಿದ್ದ. ಈ ವೇಳೆ ಬೈಕ್ ಗೆ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

0 Post a Comment: