ಶಾಸಕ ಅಪ್ಪಚ್ಚು ರಂಜನ್ ಅವರ ಮನೆ ಮುಂದೆ ಇದ್ದ ಶ್ರೀಗಂಧ ಮರ ಅಪಹರಣ... 


ಮಡಿಕೇರಿ (TOC ನ್ಯೂಸ್) :ಮಡಿಕೇರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಅವರ ಮನೆಯ ಉದ್ಯಾನವನದಲ್ಲಿ ಬೆಳೆಯಲಾಗಿದ್ದ 1ಲಕ್ಷಕ್ಕೂ ಅಧಿಕ ಬೆಳೆಬಾಳುವ ಶ್ರೀಗಂಧದ ಮರವನ್ನು ಅಪಹರಣ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಸಮೀಪದ ಕುಂಬೂರಿನ ಮನೆಯಲ್ಲಿ ಯಾರು ಇಲ್ಲದ ವೇಳೆ ಮರವನ್ನು ಕಡಿದು ಅಪಹರಿಸಲಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಸೋಮವಾರಪೇಟೆ ತಾಲ್ಲೂಕು ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Previous Post
Next Post

0 Post a Comment: