ಅಮ್ಮತ್ತಿ:- ಎಸ್ಸೆಸ್ಸೆಫ್ ವಿರಾಜಪೇಟೆ ಡಿವಿಷನ್ ನೂತನ ಅಧ್ಯಕ್ಷರಾಗಿ ಯೂಸುಫ್ ಝೈನಿ ಆಯ್ಕೆಯಾದರು. ನೆಲ್ಲಿಹುದಿಕೇರಿಯ ದಾರುನ್ನಜಾತ್ ಎಜುಕೇಶನಲ್ ಅಕಾಡೆಮಿಯಲ್ಲಿ ಡಿವಿಷನ್ ಅದ್ಯಕ್ಷರಾದ ಜ಼ುಬೈರ್ ಸಅದಿ ಅವರ ನೇತೃತ್ವದಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆಮಾಡಿಲಾಯಿತು.
ಡಿವಿಷನ್ ನ ಪ್ರಧಾನ ಕಾರ್ಯದರ್ಶಿಯಾಗಿ ನಿಜ಼ಾಮುದ್ದೀನ್ ಕಂಡಕ್ಕರೆ , ಉಪಾದ್ಯಕ್ಷರಾಗಿ ಹಾರಿಸ್ ಸಖಾಫಿ ಮಟ್ಟಂ ಹಾಗು ರಜಾಕ್ ಸಹದಿ ನಲ್ವತೆಕರೆ , ಸಹಕಾರ್ಯದರ್ಶಿಗಳಾಗಿ ಜುನೈದ್ ಕಾಟ್ರಕೊಲ್ಲಿ , ಅಸ್ಕರ್ ಝೈನಿ ಮಾಲ್ದಾರೇ ,ಶಾಹಿದ್ ಗುಂಡಿಗೆರೆ , ಕೋಶಾಧಿಕಾರಿಯಾಗಿ ಜಲಾಲುದ್ದೀನ್ ಮುಸ್ಲಿಯಾರ್ ,
ಕ್ಯಾಂಪಸ್ ಕಾರ್ಯದರ್ಶಿಯಾಗಿ ನಿಝಾಮುದ್ದೀನ್ ಮಟ್ಟಂ ಹಾಗು ಇನ್ನಿತರನ್ನು ಆಯ್ಕೆಮಾಡಲಾಯಿತು.
ವಾರ್ಷಿಕ ಮಹಾ ಸಭೆಯನ್ನು ವೀಕ್ಷಿಸಲು ಜಿಲ್ಲಾ ಸಮಿತಿಯ ಪ್ರಮುಖರಾದ ಮುಬಷಿರ್ ಅಹ್ಸನಿ ಹಾಗು ಮುಜೀಬ್ ಕೊಂಡಂಗೇರಿ ಆಗಮಿಸಿದ್ದರು.
ಈ ಸಂಧರ್ಭ ಎಸ್ಸೆಸ್ಸೆಫ್ ಜಿಲ್ಲಾ ನೇತಾರರಾದ ನಿಜ಼ಾರ್ ಸಖಾಫಿ ಕಡಂಗ , ಶಕೀರ್ ಮಾಸ್ಟರ್ , ಜಿಲ್ಲಾ ಕಾರ್ಯದರ್ಶಿ ಮುಸ್ತಫ , ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯರಾದ ರಫೀಕ್ ನೆಲ್ಲಿಹುದಿಕೇರಿ ಹಾಗು ಇನ್ನಿತರರು ಉಪಸ್ಥಿತರಿದ್ದರು.

0 Post a Comment: