ಸಿದ್ದಾಪುರ: ಆಟೋ ಸಂಚಾರ ಸ್ಥಗಿತಗೊಳಿಸುವ ಮೂಲಕ ಸಂತ್ರಸ್ತರ‌ ಅಹೋರಾತ್ರಿ ಹೋರಾಟಕ್ಕೆ ಬೆಂಬಲ ನೀಡಿದ ಆಟೋ ಚಾಲಕರು.

ಸಿದ್ದಾಪುರ (ಕೊಡಗು), ಫೆ.15: ಗುಹ್ಯ ಹಾಗೂ ಕರಡಿಗೋಡು ವ್ಯಾಪ್ತಿಯ ಪ್ರವಾಹ ಸಂತ್ರಸ್ತರು ಸೂರಿಗಾಗಿ ನಡೆಸುತ್ತಿರುವ ಆಹೋರಾತ್ರಿ ಹೋರಾಟಕ್ಕೆ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯ ಆಟೋ ಚಾಲಕರ ಸಂಘ ಬೆಂಬಲ ನೀಡಿದ್ದು, ಶನಿವಾರ ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಆಟೋ ಚಾಲನೆ ಸ್ಥಗಿತಗೊಳಿಸುವ ಮೂಲಕ ಬೆಂಬಲ ನೀಡಿದರು.
ಈ ಬಗ್ಗೆ ಮಾತನಾಡಿದ ಆಟೋಚಾಲಕರ ಹಾಗೂ ಮಾಲಿಕರ ಸಂಘದ ಅಧ್ಯಕ್ಷ ಎಂ.ಆರ್ ಸಲೀಂ, ಸಂತ್ರಸ್ತರು ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ 7 ತಿಂಗಳ ಕಳೆದಿದ್ದು, ಮತ್ತೊಂದು ಮಳೆಗಾಲ ಸಮೀಪಿಸುತ್ತಿದೆ. ಆದರೆ ಸಂತ್ರಸ್ತರಿಗೆ ಈವರೆಗೂ ಸಾಶ್ವತ ಸೂರು ಒದಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಶೀಘ್ರದಲ್ಲಿ ನಿವೇಶನ ನೀಡಬೇಕೆಂದು ಒತ್ತಾಯಿಸಿದ್ದಾರೆ.
Previous Post
Next Post

0 Post a Comment: