ಸಂಶಯಾಸ್ಪದ ರೀತಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ

      ಕುಶಾಲನಗರ : ಕೂಡುಮಂಗಳೂರು ಗ್ರಾಮದಲ್ಲಿ ಇರುವ ಬರ್ಡ್ ಆಪ್ ಪ್ಯಾರಡೈಸ್ ಹೋಂ ಸ್ಟೇ ಯಲ್ಲಿ  ಸುಮಾರು ಐದು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ  ಹುದಿಕೇರಿ  ನಿವಾಸಿ  ಸಂಜು (22) ಎಂಬಾತ ಮನನೊಂದು  ನೇಣು ಬಿಗಿದು ಕೊಂಡು ಆತ್ಮಹತ್ಯೆ  ಮಾಡಿಕೊಂಡ ಘಟನೆ ವರದಿಯಾಗಿದೆ . ಘಟನೆಯ ವಿವರ  ತಾನು ಪ್ರೀತಿಸುತ್ತಿದ್ದ ಯುವತಿ  ಜೊತೆಯಲ್ಲಿ ದೂರವಾಣಿ ಮೂಲಕ  ಮಾತಾಡುವ ಸಂದರ್ಭದಲ್ಲಿ    ಯವತಿ  ನೀನು   ಮದ್ಯ ಸೇವಿಸಿರುವೆ ಎಂದು ವಾದ ಮಾಡಿದ ಹಿನ್ನೆಲೆಯಲ್ಲಿ ಯುವಕ ಸಂಜು  ಆಕೆಯ ವೇಲ್ ತೆಗೆದುಕೊಂಡು ಬಂದು  ತಾನು ಕೆಲಸ ನಿರ್ವಹಿಸುತ್ತಿದ್ದ  ಹೋಂ ಸ್ಟೇ ಕಾಫೀ ತೋಟದಲ್ಲಿದ್ದ ಮರ ಹೊಂದಕ್ಕೆ  ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ  .ನೇಣು ಬಿಗಿದು ಕೊಂಡಿದ್ದನ್ನು ಅಲ್ಲಿನ ವ್ಯವಸ್ಥಾಪಕರು ನೋಡಿ ಈತನ ಕುಟುಂಬದವರಿಗೆ ತಿಳಿಸಿ ನಂತರ ಗ್ರಾಮಾಂತರ ಪೋಲಿಸ್ ಠಾಣೆಗೆ ತಿಳಿಸಿದರು   .ಸ್ಥಳಕ್ಕೆ ಆಗಮಿಸಿದ  ಪಿ ಎಸ್ ಐ ನಂದೀಶ್ ಮತ್ತು ಸಿಬ್ಬಂದಿಯರು ಸ್ಥಳ ಪರೀಶಿಲಿಸಿ   ಮೃತ ದೇಹವನ್ನು ಕುಶಾಲನಗರದ ಆರೋಗ್ಯ ಕೇಂದ್ರದ ಶವಾಗಾರಕ್ಕೆ  ರವಾನಿಸಿ  ಮುಂದಿನ ಕ್ರಮವನ್ನು ಕೈಗೊಳ್ಳಲಾಯಿತು .
Previous Post
Next Post

0 Post a Comment: