ಮಡಿಕೇರಿ TOC:-ಕೊರೊನಾ ವೈರಸ್ ಸಂಬಂಧಿಸಿದಂತೆ ಎಲ್‍ಇಡಿ ವಾಹನದ ಮೂಲಕ ಜಾಗೃತಿ ಕಾರ್ಯಕ್ರಮವು ಗುರುವಾರ ಮುರ್ನಾಡು, ನಾಪೋಕ್ಲು, ಚೇರಂಬಾಣೆ ಭಾಗಮಂಡಲದಲ್ಲಿ ನಡೆಯಿತು.
ಫೆಬ್ರವರಿ 7 ರಂದು ವಿರಾಜಪೇಟೆ, ಗೋಣಿಗೊಪ್ಪ, ತಿತಿಮತಿ ಮತ್ತಿತರ ಕಡೆಗಳಲ್ಲಿ ಪ್ರದರ್ಶನ ನಡೆಯಲಿದೆ. ಫೆಬ್ರವರಿ, 8 ರಂದು ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ, ಶನಿವಾರಸಂತೆ, ಸೋಮವಾರಪೇಟೆ ಮತ್ತಿತರ ಕಡೆಗಳಲ್ಲಿ ಪ್ರದರ್ಶನ ನಡೆಯಲಿದೆ.
ಗುರುವಾರ ಮೂರ್ನಾಡು ಗ್ರಾಮದಲ್ಲಿ ನಡೆದ ಆರೋಗ್ಯ ಮಾಹಿತಿ ಶಿಕ್ಷಣ ಕಾರ್ಯಕ್ರಮ ಸಂದರ್ಭದಲ್ಲಿ ಮೂರ್ನಾಡು ಗ್ರಾ.ಪಂ. ಅಧ್ಯಕ್ಷರಾದ ಜಮುನ, ಉಪಾಧ್ಯಕ್ಷರಾದ ಪವಿತ್ರ, ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ಇತರರು ಇದ್ದರು
0 Post a Comment: