ಮಡಿಕೇರಿ TOC:-ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯು 2018ರ ಡಿಸೆಂಬರ್, 01 ರಿಂದ ಪ್ರಾರಂಭವಾಗಿದೆ. ದೇಶದ ಎಲ್ಲಾ ರೈತ ಕುಟುಂಬಗಳಿಗೆ ಆದಾಯ ಬೆಂಬಲ ನೀಡುವ ಉದ್ದೇಶದಿಂದ ಕೃಷಿ ಭೂಮಿಯನ್ನು ಹೊಂದಿರುವ ರೈತರಿಗೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಯೋಜನೆಯೇ ಪಿಎಂ ಕಿಸಾನ್ ಸಮ್ಮಾನ ನಿಧಿ.
ಈ ಯೋಜನೆಯಲ್ಲಿ ಪ್ರತಿ ವರ್ಷ ಆರು ಸಾವಿರ ರೂ.ಗಳನ್ನು ಮೂರು ಸಮಾನ ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.
ಸಿಎಸ್ಸಿಗಳಲ್ಲಿ (ಕಾಮನ್ ಸರ್ವಿಸ್ ಸೆಂಟರ್ಗಳ್ಲಲಿ) ರೈತರು ನೋಂದಾವಣೆ ಮಾಡಿಕೊಳ್ಳಬಹುದು. ಹಾಗೆಯೇ ಪಿಎಂ ಕಿಸಾನ್ ಡಾಟಾ ಬೇಸ್ನಲ್ಲಿರೋ ಮಾಹಿತಿಯನ್ನು ಆಧಾರ ಡಾಟಾ ಬೇಸ್ನಲ್ಲಿರೋ ರೀತಿಯಲ್ಲಿ ತಿದ್ದುಪಡಿ ಮಾಡಲು ಅವಕಾಶವಿದೆ. ಅದೇ ಡೇಟಾಬೇಸ್ನಲ್ಲಿ ಹಣಪಾವತಿಯ ಮಾಹಿತಿ ಕೂಡಾ ಪಡೆಯಬಹುದು.
(ಈ ಯೋಜನೆಯಡಿ 2 ಹೆಕ್ಟೇರ್ಗಿಂತ ಹೆಚ್ಚಿನ ಸಾಗುವಳಿ ಭೂಮಿ ಹೊಂದಿರುವ ರೈತ ಕುಟುಂಬ, ಮಾಜಿ ಅಥವಾ ಹಾಲಿ ಸಾಂವಿಧಾನಿಕ ಹುದ್ದೆ ಹೊಂದಿದ್ದವರು, ಮಾಜಿ ಅಥವಾ ಹಾಲಿ ಸಚಿವರು, ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ನಿವೃತ್ತ ಅಥವಾ ಹಾಲಿ ಸೇವೆಯಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರರು ಹಾಗೂ ಸ್ಥಳೀಯ ಸಂಸ್ಥೆಗಳ ಖಾಯಂ ನೌಕರರು(ಡಿ ಗ್ರೂಪ್ ಹೊರತು ಪಡಿಸಿ), ಕಳೆದ ಸಾಲಿನಲ್ಲಿ ಆದಾಯ ತೆರಿಗೆ ಪಾವತಿ ಮಾಡಿದವರು ಹಾಗೂ ಇನ್ನಿತರರು ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ).
ಈವರೆಗೆ 9.22 ಕೋಟಿ ಕುಟುಂಬಗಳು ಈ ಯೋಜನೆಯಲ್ಲಿ ಹೆಸರು ನೋಂದಾಯಿಸಿದ್ದು, ದೇಶಾದ್ಯಂತ 6.76 ಕೋಟಿ ರೈತರು ಕಿಸಾನ್ ಕ್ರೆಡಿಟ್ ಕಾರ್ಡನ್ನು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಪಡೆದುಕೊಂಡಿದ್ದಾರೆ. ದೇಶಾದ್ಯಂತ 2.47 ಕೋಟಿ ರೈತರು ಈವರೆಗೆ ಕಿಸಾನ ಕ್ರೆಡಿಟ್ ಕಾರ್ಡ್ನ ಲಾಭ ಪಡೆದುಕೊಂಡಿಲ್ಲ.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ರಾಜ್ಯ ಬ್ಯಾಂಕುಗಳ ಸಲಹಾ ಸಮಿತಿ ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯಲ್ಲಿ ಹೆಸರು ನೋಂದಾಯಿಸಲ್ಪಟ್ಟು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯದೆ ಇದ್ದವರು 2020ರ ಫೆಬ್ರವರಿ, 24 ರೊಳಗೆ ಖಾತೆ ಹೊಂದಿರುವ ಬ್ಯಾಂಕುಗಳ ಶಾಖೆಗಳನ್ನು ಸಂಪರ್ಕಿಸಿ ರೈತರು ಈ ಯೋಜನೆಯ ಲಾಭ ಪಡೆಯಬಹುದು.
ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ಪಿಎಂ ಕಿಸಾನ್ ಫಲಾನುಭವಿಗಳಿಗೆ ನಿಯಮಾನುಸಾರ ಆದ್ಯತೆ ಮೇರೆಗೆ ಬೆಳೆಸಾಲ(ಕೆಸಿಸಿ) ವಿತರಿಸಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಫೆಬ್ರವರಿ, 24 ರವರೆಗೆ ಪೂರ್ಣಗೊಳಿಸಲು ಸೂಚಿಸಿದೆ.
ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್, ಗ್ರಾಮೀಣ ಬ್ಯಾಂಕುಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಂದ 2019ರ ಡಿಸೆಂಬರ್, 31 ರವರೆಗೆ 91,311 ರೈತರ ಬೆಳೆ ಸಾಲ ಚಾಲ್ತಿಯಲ್ಲಿದೆ. ಇಲ್ಲಿಯವರೆಗೆ 44,174 ರೈತರು ಮಾತ್ರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಉಳಿದ ರೈತರು ಇದರ ಪ್ರಯೋಜನ ಪಡೆಯಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ.
ಸಭೆಯಲ್ಲಿ ನಬಾರ್ಡ್ನ ಡಿಡಿಎಂ. ಶ್ರೀನಿವಾಸ ಹಾಗೂ ಜಿಲ್ಲಾ ಅಗ್ರಣಿ ಬ್ಯಾಂಕ್ನ ಮುಖ್ಯಸ್ಥರಾದ ಆರ್.ಕೆ.ಬಾಲಚಂದ್ರ ಇತರರು ಇದ್ದರು.
0 Post a Comment: