ಕೋವಿಡ್-19 : ಲಾಕ್‌ಡೌನ್‌ನಿಂದಾಗಿ ಆಹಾರ ಕೊರತೆ ಎದುರಿಸುವವರಿಗೆ ನೆರವಾಗಲು SYS ರಾಜ್ಯ ಸಮಿತಿ ಮನವಿ

          ಮಡಿಕೇರಿ TOC: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಸರಕಾರ ಹೊರಡಿಸಿದ ಬೀಗಮುದ್ರೆ (Lock Down) ಆದೇಶ ಪ್ರಕಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರ್ಚ್ 31ರ ತನಕ ಜನಸಾಮಾನ್ಯರು ತಮ್ಮ ಕೂಲಿಕೆಲಸಗಳಿಗೆ ಹೋಗಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ, ಇದರಿಂದಾಗಿ, ದಿನಗೂಲಿ ಕೆಲಸಕ್ಕೆ ಹೋಗಿ ಜೀವಿಸುವವರು, ಕಡುಬಡವರು, ಭಿಕ್ಷುಕರು ಮುಂತಾದವರಿಗೆ ಒಂದು ಹೊತ್ತಿಗೂ ಆಹಾರ ಸಿಗದೆ ಕಂಗಾಲಾಗುವ ಸ್ಥಿತಿ ಎದುರಾಗಲಿದೆ.

ಹಲವು ಕಡೆಗಳಲ್ಲಿ ಅಂಗಡಿ, ಹೋಟೆಲ್ ಗಳು ಸಹ ಮುಚ್ಚುವ ಸನ್ನಿವೇಶಗಳು ಬಂದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಆದ್ದರಿಂದ SYS ನ ಪ್ರತಿ ಸೆಂಟರ್ ಸಮಿತಿಗಳು, ಇದರ ಬಗ್ಗೆ ಗಮನ ಹರಿಸಿ ಅಂತಹ ಕುಟುಂಬಗಳನ್ನು ಕಂಡು ಹಿಡಿದು ಆಹಾರ ಸಾಮಾಗ್ರಿಗಳನ್ನು ತಲುಪಿಸಿ ನೆರವಾಗಬೇಕು ಎಂದು SYS ರಾಜ್ಯ ನಾಯಕರು ಮನವಿ ಮಾಡಿದ್ದಾರೆ.

ಅರ್ಹರನ್ನು ಹುಡುಕಿ‌ ಅವರ ತುರ್ತು ಅಗತ್ಯಾನಸಾರ ವಸ್ತುಗಳಾದ ಅಕ್ಕಿ, ಉಪ್ಪು, ಬೇಳೆ, ಉಪ್ಪಿನಕಾಯಿ, ಸಕ್ಕರೆ, ಚಾ ಹುಡಿ, ಸ್ನಾನ ಮತ್ತು ಬಟ್ಟೆ ಒಗೆಯುವ ಸಾಬೂನುಗಳನ್ನು ಅವರಿಗೆ ತಲುಪಿಸಬೇಕು.

ಸೆಂಟರ್ ಸಮಿತಿಗಳು, ಸಾಮಾಗ್ರಿಗಳನ್ನು ಸಂಗ್ರಹ ಮಾಡಿ “ಇಸಾಬಾ ಟೀಮ್” ಮೂಲಕ ವಿತರಣೆ ಮಾಡಬೇಕು. ಇದಕ್ಕಾಗಿ ‘ಸಾಂತ್ವನ’ ಮತ್ತು ‘ಇಸಾಬಾ’ ತಂಡಗಳು ವಿಶೇಷ ಮುತವರ್ಜಿ ವಹಿಸಬೇಕು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಮ್ ಝೈನಿ ಕಾಮಿಲಿ ಸಖಾಫಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Previous Post
Next Post

0 Post a Comment: