ಜಿಲ್ಲಾಧಿಕಾರಿಯವರಿಂದ ಕೋಟೆ ವೀಕ್ಷಣೆ

          ಮಡಿಕೇರಿ 𝐓𝐎𝐂 :-ನಗರದ ಐತಿಹಾಸಿಕ ಕೋಟೆಯ ಮೇಲ್ಚಾವಣಿ ದುರಸ್ತಿ ಕಾರ್ಯವನ್ನು ಜಿಲ್ಲಾಧಿಕಾರಿ ಅನೀಸ್ ಕನ್ಮಣಿ ಜಾಯ್ ಅವರು ಬುಧವಾರ ವೀಕ್ಷಣೆ ಮಾಡಿದರು 
ದುರಸ್ತಿ ಕಾರ್ಯ ವೀಕ್ಷಿಸಿ ಎರಡು ತಿಂಗಳ ಒಳಗಾಗಿ ಕೋಟೆಯ ಮೇಲ್ಚಾವಣಿ ಸರಿಪಡಿಸುವ ಕಾರ್ಯವನ್ನು ಸಂಪೂರ್ಣವಾಗಿ ಪೂರ್ಣಗೊಳಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.   
ಸರ್ಕಾರವು ಕೋಟೆ ಮೇಲ್ಚಾವಣಿ ದುರಸ್ತಿ ಕಾರ್ಯಕ್ಕೆ ಒಟ್ಟು 54 ಲಕ್ಷ ರೂ ಬಿಡುಗಡೆ ಮಾಡಿದ್ದು, ಮೊದಲನೆ ಹಂತದಲ್ಲಿ 40 ಲಕ್ಷ ರೂ. ಬಿಡುಗಡೆ ಮಾಡಿದೆ ಎಂದು ಅವರು ತಿಳಿಸಿದರು.
ಪಾರಂಪರಿಕ ವಾಸ್ತುಶಿಲ್ಪ ಹೊಂದಿರುವ ಮಡಿಕೇರಿ ಐತಿಹಾಸಿಕ ಕೋಟೆಯನ್ನು ಸಂಪೂರ್ಣ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸರ್ಕಾರವು ಅಗತ್ಯ ಕ್ರಮಕೈಗೊಂಡಿದ್ದು, ಕಂದಾಯ ಇಲಾಖೆಯು ಈಗಾಗಲೇ 8 ಕೋಟಿ ರೂ. ಅನುದಾನಕ್ಕೆ ಮಂಜೂರಾತಿ ನೀಡಿದ್ದು, ಹೆಚ್ಚುವರಿಯಾಗಿ 2 ಕೋಟಿ ರೂ ಅನುಧಾನಕ್ಕೆ ಬೇಡಿಕೆ ಸಲ್ಲಿಸಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕನ್ಮಣಿ ಜಾಯ್ ಅವರು ತಿಳಿಸಿದ್ದಾರೆ.
Previous Post
Next Post

0 Post a Comment: