ಸಂಜೀವಿನಿ ಒಕ್ಕೂಟ ಕಾರ್ಮಾಡು ಗ್ರಾಮ ಪಂಚಾಯಿತಿಯ ವತಿಯಿಂದ ಮಹಿಳಾ ದಿನಾಚರಣೆ

           TOC ಆಮ್ಮತ್ತಿ:- ಕಾರ್ಮಾಡು ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟ ಇವರ ವತಿಯಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ರಾಣಿ ಅವರು ವಹಿಸಿಕೊಂಡರು.  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾರ್ಮಾಡು ಗ್ರಾಮ ಪಂಚಾಯಿತಿ ಸದಸ್ಯರಾದ ಮುಕ್ಕಾಟಿರ ಸಂತೋಷ್ ಅವರು ಎಲ್ಲಾ ಕ್ಷೇತ್ರದಲ್ಲಿ ಮುಂದೆ ನುಗ್ಗುತ್ತಿರುವ ಮಹಿಳೆಯರು ಇಂದು ದೇಶ ಎದುರು ಕಾಣುತ್ತಿರುವ ಕೊರೋನ ಅಂತಹ ಮಾರಕ ರೋಗಗಳಿಂದ ದೂರವಿರಲು ಸೂಚಿಸಿದರು.
ಪ್ರಜಾಸತ್ಯ ದಿನಪತ್ರಿಕೆಯ ವರದಿಗಾರರಾದ ತೌಸೀಫ್ ಅಹ್ಮದ್ ಮಾತನಾಡಿ ಕಾಲಕ್ರಮೇಣ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮದೇಯಾದ ಸಾಧನೆಯನ್ನು ಮಾಡುತ್ತಿದ್ದಾರೆ ಇದು ಮುಂದುವರೆದು ಹೆಣ್ಣು ಸಂಸಾರದ ಕಣ್ಣು ಆಗುವುದರ ಜೊತೆಗೆ ಸಮಾಜದ ಕಣ್ಣಾಗ ಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಕುಮಾರ್ ರವರು ಮಾತನಾಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ 19ನೇ ದಶಕದಲ್ಲಿಯೇ ಪ್ರಾರಂಭಿಸಿದ್ದರೂ ಇಂದು ಅರ್ಥಪೂರ್ಣ ಗೊಳ್ಳುತ್ತಿದೆ , ಮಹಿಳೆಯರಿಗಾಗಿ ಸರಕಾರವು ನೀಡುತ್ತಿರುವ ಯೋಜನೆಗಳನ್ನು ಉಪಯೋಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ನೆಕ್ಸ್ಟ್ ಜನರೇಶನ್ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರಾದ ವಿಶಾಲಾಕ್ಷಿ ಅವರು ಪ್ರತಿಯೊಬ್ಬ ಸಾಧಕ ಪುರುಷನ ಹಿಂದೆ ಒಂದು ಸ್ತ್ರೀ ಇದ್ದೇ ಇರುತ್ತಾಳೆ ಎಂಬಂತೆ ಪ್ರತಿಯೊಬ್ಬ ಸಾಧಕ ಸ್ತ್ರೀಯ ಹಿಂದೆಯೂ ಒಂದು ಬರುತ್ತಾನೆ ಎಂದು ಅಭಿಪ್ರಾಯಪಟ್ಟರು.
 ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆ ಶೀಲ ಅವರು ತಮ್ಮ ಸಿಹಿ-ಕಹಿ ಅನುಭವಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು.
ನಂತರ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಸಂಘದ ಸದಸ್ಯರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.  ತದನಂತರ ವಿವಿಧ ಸಂಘಗಳ ಸದಸ್ಯರಿಂದ  ಮನರಂಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಯ ಸದಸ್ಯರು , ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
Previous Post
Next Post

0 Post a Comment: