ಕೊರೋನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟ ನಿಷೇಧ

ಮಡಿಕೇರಿ ಮಾ.21(TOC NEWS):-ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಬಕಾರಿ ಕಾಯ್ದೆ 1965ರ ಕಲಂ 21 ರಲ್ಲಿ ದತ್ತವಾದ ಅಧಿಕಾರದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಾದ್ಯಂತ ಸಿಎಲ್-2 ಹಾಗೂ ಸಿಲ್-11(ಸಿ) ಸನ್ನದುಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ರೀತಿಯ ಸಿಲ್-4, ಸಿಎಲ್-6(ಎ), ಸಿಎಲ್-7, ಸಿಎಲ್-7(ಸಿ), ಸಿಎಲ್-8, ಸಿಎಲ್-8(ಎ), ಸಿಎಲ್-8(ಬಿ), ಸಿಎಲ್-9, ಸಿಎಲ್-14, ಸಿಎಲ್-15, ಸಿಎಲ್-17, ಸಿಎಲ್-18, ವೈನ್ ಟಾವರಿನ್, ಪಬ್‍ಗಳು ಹಾಗೂ ಮೈಕ್ರೋಬ್ರೀವರಿ ಮದ್ಯ ಮಾರಾಟ ಸನ್ನದುಗಳನ್ನು ಮುಚ್ಚುವುದು.

ವಹಿವಾಟು ನಡೆಸುವ ಸಿಎಲ್-2 ಹಾಗೂ ಸಿಲ್-11(ಸಿ) ಸನ್ನದುಗಳ ವ್ಯವಹಾರ ಸಮಯವನ್ನು ಖಡ್ಡಾಯವಾಗಿ ಪಾಲಿಸಿ, ಸನ್ನದು ಸ್ಥಳದಲ್ಲಿ ಜನಜಂಗುಳಿಯಾಗದಂತೆ ಕ್ರಮವಹಿಸುವುದು. 

ಜಿಲ್ಲೆಯ ಗಡಿಭಾಗಗಳಲ್ಲಿರುವ ಬಿ.ಎಸ್.ವರದ, ಸಿಎಲ್-2 ಸನ್ನದುದಾರರು, ಗಣೇಶ್ ವೈನ್ಸ್, ಸಂ :1/293, ಸರ್ವೇ ನಂ :4/10, ಚೆಂಬೇರಿ, ಕರಿಕೆ ಗ್ರಾಮ, ಮಡಿಕೇರಿ ತಾ. ಕೊಡಗು ಜಿಲ್ಲೆ, ಎಂ.ಬಿ.ಅಕ್ಕಮ್ಮ, ಸಿಎಲ್-2 ಸನ್ನದುದಾರರು, ನಂ.10/7, ಸರ್ವೇ ನಂ :23/ 107 ಪಿ2, ಮುಖ್ಯ ರಸ್ತೆ, ಕುಟ್ಟ ಗ್ರಾಮ ಮತ್ತು ಅಂಚೆ, ವಿರಾಜಪೇಟೆ ತಾ, ಕೊಡಗು ಜಿಲ್ಲೆ, ಕೊಡಗು ರಿಟೇಲ್ಸ್ ಪ್ರೈ. ಲಿ., ಸಿಎಲ್-2 ಸನ್ನದುದಾರರು, ನಂ.24-ಡಿ, ಮುಖ್ಯ ರಸ್ತೆ, ಕುಟ್ಟ ಗ್ರಾಮ, ವಿರಾಜಫೇಟೆ ತಾ., ಕೊಡಗು ಜಿಲ್ಲೆ, ಸೆಕ್ರೇಟರಿ, ಕೆ.ಡಿ.ಸಿ.ಎಂ. ಫೆಡರೇಷನ್, ಸಿಎಲ್-2 ಸನ್ನದುದಾರರು, ಸರ್ವೇ ನಂ :73/125, ಕಾನೂರು-ಕುಟ್ಟ ರಸ್ತೆ, ಕುಟ್ಟ ಗ್ರಾಮ, ವಿರಾಜಪೇಟೆ ತಾ. ಕೊಡಗು ಜಿಲ್ಲೆ ಈ ಸನ್ನದುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಾರ್ಚ್, 31 ರ ಮಧ್ಯರಾತ್ರಿಯವರೆಗೆ ಮುಚ್ಚುವುದು. ಈ ಆದೇಶವು ಮಾರ್ಚ್, 21 ರ ಸಂಜೆ 4 ಗಂಟೆಯಿಂದ ಮಾರ್ಚ್, 31 ರ ಮಧ್ಯರಾತ್ರಿಯವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
Previous Post
Next Post

0 Post a Comment: