ಜನತಾ ಕರ್ಫ್ಯೂ ಪ್ರಧಾನಿ ಕರೆಗೆ ವ್ಯಾಪಕ ಸ್ಪಂದನೆ - ಅಮ್ಮತ್ತಿ ಸ್ತಬ್ಧ

     ಅಮ್ಮತ್ತಿ TOC:- ಜಗದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್ 22ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ಜನತಾ ಕರ್ಫ್ಯೂ ಆಚರಣೆಗೆ ಕರೆ ನೀಡಿದ್ದು ವ್ಯಾಪಕವಾಗಿ ಸ್ಪಂದಿಸಿ ಬಂದಿದೆ.
ಇನ್ನು ವಿರಾಜಪೇಟೆ ಸಮೀಪದ ಅಮ್ಮತ್ತಿ ಗ್ರಾಮದಲ್ಲಿ ವ್ಯಾಪಕವಾಗಿ ಸ್ಪಂದನೆ ದೊರಕಿದ್ದು ಬೆಳಿಗ್ಗೆ 7ಗಂಟೆಯಿಂದಲೇ ಅಮ್ಮತಿ ಸಂಪೂರ್ಣ ಸ್ಥಬ್ಧವಾಗಿದೆ. 7:00 ಗಂಟೆಯವರೆಗೆ ಹಾಲು ಹಾಗೂ ಪೇಪರ್ ಮಾರಾಟವಿದ್ದರೂ , 7:00  ಆಗುತ್ತಲ್ಲೇ ಮುಖ್ಯ ಬೀದಿಗಳಲ್ಲಿ ಜನರಿಲ್ಲದೆ ಬಿಕೋ ಅನಿಸತೊಡಗಿದೆ. ಪ್ರಸ್ತುತ ಸನ್ನಿವೇಶವನ್ನು ಅರ್ಥಮಾಡಿಕೊಂಡಿರುವ ಅಮ್ಮತಿ ಗ್ರಾಮದ ಜನಸಾಮಾನ್ಯರನ್ನು ವಿವಿಧ ಸಂಘ-ಸಂಸ್ಥೆಗಳು ಶ್ಲಾಘಿಸಿವೆ.
Previous Post
Next Post

0 Post a Comment: