ಮಡಿಕೇರಿ TOC : ಕೊಡಗು ಜಿಲ್ಲೆಯ ಔಷಧಿ ಅಂಗಡಿಗಳಲ್ಲಿ ಮಾಸ್ಕ್, ಹ್ಯಾಂಡ್ ಗ್ಲ್ವೌಸ್, ಸ್ಚಾನಿಟೈಸರ್ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಲು ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘ ನಿದ9ರಿಸಿದೆ. ಅದಿಕಾರಿಗಳು ಔಷಧಿ ಅಂಗಡಿಗಳ ಮೇಲೆ ಧಾಳಿ ನಡೆಸಿ ಸೂಕ್ತ ಕಾರಣವಿಲ್ಲದೇ ಅತ್ಯಧಿಕ ದಂಡಶುಲ್ಕ ವಿಧಿಸಿದ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಮಾಸ್ಕ್ ನಂಥ ಅತ್ಯಗತ್ಯ ಪರಿಕರಗಳ ಮಾರಾಟಕ್ಕೆ ಸಮಸ್ಯೆಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ತಾವಿನ್ನು ಇಂಥವುಗಳನ್ನು ಮಾರಾಟ ಮಾಡದೇ ಇರಲು ಔಷಧಿ ವ್ಯಾಪಾರಸ್ಥರು ನಿರ್ಧರಿಸಿದ್ದಾರೆ.
ಕೋರೋನಾ ವೈರಸ್ ಹಬ್ಬುತ್ತಿರುವ ಸಂದರ್ಭ ಮಾಸ್ಕ್, ಹ್ಯಾಂಡ್ ಗ್ಲ್ವೌಸ್, ಸ್ಚಾನಿಟೈಸರ್ ಗಳು ಅತ್ಯಗತ್ಯವಾಗಿದ್ದು ಇವುಗಳನ್ನು ಕೊಡಗು ಜಿಲ್ಲೆಯ ಔಷಧಿ ವ್ಯಾಪಾರಸ್ಥರಿಗೆ ಹೆಚ್ಚಿನ ಬೆಲೆಯಲ್ಲಿ ಸಗಟು ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ. ತಮಗೆ ಎಷ್ಟು ಬೆಲೆಗೆ ಸಿಗುತ್ತಿದೆಯೋ ಅದೇ ದರಕ್ಕೆ ಇವುಗಳನ್ನು ಜಿಲ್ಲೆಯ ಔಷಧಿ ಅಂಗಡಿಗಳ ಮಾಲೀಕರು ಮಾರಾಟ ಮಾಡುತ್ತಿದ್ದರು.
ಆದರೆ ಎರಡು ದಿನಗಳಿಂದ ವಿವಿಧ ಇಲಾಖಾಧಿಕಾರಿಗಳು ಕೊಡಗಿನ ಔಷಧಿ ಮಾರಾಟದ ಅಂಗಡಿಗಳ ಮೇಲೆ ಧಾಳಿ ನಡೆಸಿ ಅಧಿಕ ದಂಡ ಶುಲ್ಕವನ್ನು ವಿನಾ ಕಾರಣ ವಿಧಿಸುತ್ತಿದ್ದಾರೆ. ಇದು ಕೊಡಗು ಜಿಲ್ಲೆಯ ಔಷಧಿ ವ್ಯಾಪಾರಸ್ಥರ ನೋವಿಗೆ ಕಾರಣವಾಗಿದೆ.
ಮಾಸ್ಕ್, ಹ್ಯಾಂಡ್ ಗ್ಲ್ವೌಸ್, ಸ್ಚಾನಿಟೈಸರ್ ಗಳು ಈ ಮೊದಲು 100 ರ ಪ್ಯಾಕ್ ನಲ್ಲಿ ಲಭಿಸುತ್ತಿತ್ತು. ಆಗ ಅದರ ಮೇಲೆ ಎಂ. ಆರ್ .ಪಿ. ದರ ನಮೂದಾಗಿರುತ್ತಿತ್ತು. ಆದರೆ ಇತ್ತೀಚೆಗೆ ಹೆಚ್ಚಿರುವ ಬೇಡಿಕೆಯಿಂದಾಗಿ ವಿತರಕರು ಬಿಡಿಬಿಡಿಯಾಗಿ ಇವುಗಳನ್ನು ಮಾರಾಟ ಮಾಡುತ್ತಿದ್ದು ಹೀಗೆ ಬಿಡಿಯಾಗಿ ಮಾರಾಟ ಮಾಡಲಾಗುತ್ತಿರುವ ಮಾಸ್ಕ್, ಹ್ಯಾಂಡ್ ಗ್ಲ್ವೌಸ್, ಸ್ಚಾನಿಟೈಸರ್ ಗಳ ಮೇಲೆ ಎಂ.ಆರ್.ಪಿ. ಬೆಲೆ ನಮೂದಾಗಿರುವುದಿಲ್ಲ. ಇದೇ ಕಾರಣವನ್ನು ಅಧಿಕಾರಿಗಳು ಮುಂದೊಡ್ಡಿ ಮಾರಾಟಗಾರರ ಮೇಲೆ ಅಧಿಕ ದಂಡಶುಲ್ಕ ವಿಧಿಸುತ್ತಿದ್ದಾರೆ.
ಮಾರಾಟ ಮಾಡಿದ ವಸ್ತುವಿಗೆ ಅಧಿಕಾರಿಗಳು ವಿಧಿಸುತ್ತಿರುವ ದಂಡದ ಮೊತ್ತವೇ ಅತ್ಯಧಿಕವಾಗಿರುವ ಹಿನ್ನಲೆಯಲ್ಲಿ ವಿನಾ ಕಾರಣ ದಂಡ ಕಟ್ಟುವುದೇಕೇಂದು ಮಾಸ್ಕ್, ಹ್ಯಾಂಡ್ ಗ್ಲ್ವೌಸ್, ಸ್ಚಾನಿಟೈಸರ್ ಗಳನ್ನು ಮಾರಾಟ ಮಾಡದಿರಲು ಕೊಡಗು ಜಿಲ್ಲೆಯ ಔಷಧಿ ವ್ಯಾಪಾರಸ್ಥರು ನಿಧ9ರಿಸಿದ್ದು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ.
ಮುಂದೆ ಪ್ರತೀ ಬಿಡಿ ಮಾಸ್ಕ್, ಹ್ಯಾಂಡ್ ಗ್ಲ್ವಾಸ್, ಸ್ಯಾನಿಟೈಸರ್ ಗಳ ಮೇಲೆ ಎಂ.ಆರ್.ಪಿ. ಮುದ್ರಣವಾಗಿ ಬರುವವರೆಗೆ ಕೊಡಗು ಜಿಲ್ಲೆಯ ಔಷಧಿ ವ್ಯಾಪಾರಸ್ಥರು ತಮ್ಮ ಔಷಧಿ ಅಂಗಡಿಗಳಲ್ಲಿ ಇವುಗಳನ್ನು ಮಾರಾಟ ಮಾಡುವುದಿಲ್ಲ ಎಂದು ನಿರ್ಧರಿಸಿದ್ದಾರೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಎ.ಕೆ.ಜೀವನ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
0 Post a Comment: