ಚೀನಾದ ವುಹಾನ್ ಎಂಬಲ್ಲಿ ಈ ಮಹಾಮಾರಿ ಮೊಟ್ಟಮೊದಲು ಸಾಭೀತಾದಾಗ ಉಳಿದ ಯಾವ ರಾಷ್ಟ್ರದವರು ಊಹಿಸಿಯೂ ಇರಲಿಲ್ಲ ಇದು ಭೂಮಂಡಲದುದ್ದಕ್ಕೂ ಹರಡುತ್ತದೆಂದು!
ಅದು ಚೀನಾದವರಿಗೆ ಮಾತ್ರ ಸೀಮಿತವೆಂದು ಭಾವಸಿದವರು ನಾವೆಲ್ಲರೂ.
ಆದರೆ ಸೃಷ್ಟಿಕತ೯ನ ವಿಧಿ ತಡೆಯಲು ಯಾರಿಗೆ ತಾನೆ ಸಾಧ್ಯ?
ಜಗತ್ತು ಪ್ರತಿಯೊಂದು ದಿನವನ್ನೂ ಜೀವಭಯದಿಂದ ಕಳೆಯುವಂತಹ ಧಾರುಣ ಪರಿಸ್ಥಿಗೆ ತಲುಪಿದೆ.
ಚೀನಾ, ಇರಾನ್, ಅಮೇರಿಕಾದಂತಹ ತಾಂತ್ರಿಕ, ವೈದ್ಯಕೀಯ, ಆಥಿ೯ಕವಾಗಿ ಮುಂದುವರಿದ ದೇಶಗಳಲ್ಲೇ ದಿನಕ್ಕೆ ನೂರಾರು ಜನರನ್ನು ಕರೋನ ಬಲಿತೆಗೆಯುತ್ತಲಿದೆ.
ಕಳೆದೆರಡು ವಾರಗಳಿಂದ ಜಗತ್ತಿನ ಹಾಗುಹೋಗುಗಳೆಲ್ಲವೂ ತಲೆಕೆಳಗಾಗಿದೆ.
ವ್ಯಾಪರ, ವಹಿವಾಟು, ಸಾರಿಗೆ, ಸಂಪಕ೯, ಶಾಲಾ ಕಾಲೇಜುಗಳು, ವಸತಿ ಕೇಂದ್ರಗಳು, ವಿಶ್ವವಿದ್ಯಾಲಯಗಳು ಹೀಗೆ ಎಲ್ಲವೂ ಸ್ಥಗಿತಗೊಂಡಿದೆ.
ಹಚ್ಚೇಕೆ? ಪ್ರತಿಯೊಂದು ಸಮಸ್ಯೆಗಳ ಮುಕ್ತಿಗಾಗಿ ಪ್ರತಿ ಧಮ೯ದವರೂ ಅಂತಿಮಾಶ್ರಯ ಪಡೆಯುವ ಧಾಮಿ೯ಕ ಪ್ರಾಥ೯ನಾ ಕೇಂದ್ರಗಳೂ ಹಲವೆಡೆ ಬಾಗಿಲು ಮುಚ್ಚಿದೆ. ಇನ್ನೂ ಮುಚ್ಚುತ್ತಲೇ ಇದೆ.
ವಿಶ್ವ ಮುಸಲ್ಮಾನರ ಅಭಯ ಕೇಂದ್ರವಾಗಿರುವ ಪರಿಶುದ್ಧ ಮಕ್ಕಾ, ಮದೀನಾ, ರೌಳಾ ಶರೀಫ್ ಗಳಿಗಿರುವ ಪ್ರವೇಶವೆಲ್ಲವೂ ತಾತ್ಕಾಲಿಕವಾಗಿ ತಡೆದಿದೆ.
ದೇಶ,ರಾಜ್ಯ,ಜಿಲ್ಲೆಗಳ ಗಡಿಗಳೆಲ್ಲೂ ಮುನ್ನಚ್ಚರಿಕೆಯ ಭಾಗವಾಗಿ ಬಂಧೋಬಸ್ತ್ ನಲ್ಲಿದೆ . ಸ್ವಂತ ಮಕ್ಕಳನ್ನ ಮಾತಾಪಿತರನ್ನ ಮನೆಯವರನ್ನ ಸ್ನೇಹಿತ ಬಂಧುಗಳನ್ನ ಕೊರೋಣ ಸೋಂಕಿರಬಹದೆಂಬ ಶಂಕೆಯಿಂದ ದೂರವಿರಿಸುವ ಧಾರುಣ ಸನ್ನಿವೇಶದಲ್ಲಿ ನಾವಿದ್ದೇವೆ.
ಕೊರೋನಾ ಮಾರಿಗೆ ತುತ್ತಾಗಿ ಜೀವ ಕಳೆದುಕೊಂಡ ಸಾವಿರಾರು ಜನರು, ಸೋಂಕು ಪೀಡಿತರಾಗಿ ನರಳುತ್ತಿರುವ ಅನೇಕರು, ಜೀವಬಯದಲ್ಲಿ ಜಾಗತಿಕ ಜನರು.
ಆದರೆ ಕೊರೋನಾಗಿಂತ ದೊಡ್ಡ ಮಹಾಮಾರಿ ಏನಂದರೆ ಇಷ್ಟಕ್ಕೂ ಪರೀಕ್ಷೆಗಳಿಗೆ ಜಗತ್ತು ತುತ್ತಾಗಿದ್ದರೂ ಅದರ ಪರಿವೇ ಇಲ್ಲವೆಂಬಂತೆ ಸವ೯ಶಕ್ತನು ವಿಧಿಸುವ ಸವ೯ವನ್ನು ಹಾಸ್ಯವಾಗಿ ಚಿತ್ರೀಕರಿಸಿ
Tic-tok ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡುವ ಹಲವು ದುಷ್ಟ ಮನಸ್ಸಿನ ದೈವಭಯವಿಲ್ಲದ ಹೊಸತಲೆಮಾರು.
ಕರೋನಾ ಜಗವನ್ನೇ ಭಯಪಡಿಸಿದರೂ ಜಗದೊಡೆಯನ ಭಯವಿಲ್ಲದೇ ನಡೆಯುವ ಆಧುನಿಕ ಯುವ ಪೀಳಿಗೆ.
ಓ ಯುವ ಸಮೂಹವೇ ಜಗತ್ತಿನಲ್ಲಿ ಏನೇ ಮಹಾಮಾರಿ ಬಂದೆಗೆದರೂ, ಸುನಾಮಿ ಅಪ್ಪಳಿಸಿದರೂ, ಪ್ರವಾಹ ಬಂದರೂ, ಭೂ ಕುಸಿತವಾದರೂ ತಾವುಗಳು ಅದನ್ನು ಹಾಸ್ಯವಾಗಿ ಚಿತ್ರೀಕರಿಸುವ ಬ್ಯುಸಿಯಲ್ಲಿದ್ದೀರಿ.
ತಮಗೇನೂ ಈ ಸವ೯ಶಕ್ತನ ಪರೀಕ್ಷೆಗಳೇನೂ ಅನ್ವಯವಾಗುವುದಿಲ್ಲ ಎಂಬಂತೆ. ಸಮೂಹ ಮಹಾ ಆಪತ್ತಿನ ಮುಕ್ತಿಗಾಗಿ ಪರಿತಪಿಸುವಾಗ ಒಂದು ಕಡೆ ಹಲವರು ಟ್ರೋಲ್ ಮಾಡುವುದರಲ್ಲಿ ನಿರತರಾಗಿದ್ದಾರೆ.
ಪ್ರೀತಿಯ ಯುವ ಸಮೂಹವೇ ಇನ್ನಾದರೂ ಇಂತಹ ಮಹಾಮಾರಿಯಿಂದಂಟಾಗುವ ಆಪತ್ತು, ಪ್ರಾಣ ಅಪಾಯ, ಕಷ್ಟ ನಷ್ಟಗಳನ್ನು ಮನವರಿಕೆ ಮಾಡಿಕೊಂಡು ಸ್ವಂತ ಶರೀರವನ್ನು, ಬಂದು-ಬಳಗ, ಇಡೀ ಸಮುದಾಯದ ರಕ್ಷಣೆಗೆ ಬೇಕಾಗಿ ಪ್ರಾಥ೯ನೆಯಲ್ಲಿ ತೊಡಗೋಣ.
ಸೋಂಕ
ಕೊರೋಣಕ್ಕೆ ಬಲಿಯಾದವರ ಕುಟುಂಬಕ್ಕೆ ನೆರವಾಗೋಣ,
ಸೋಂಕು ಬಾದಿತರಿಗೆ ಪರಿಹಾರ ಮಾಗ೯ವನ್ನು ನೀಡೋಣ, ಮಿಕ್ಕವರನ್ನು ಮಹಾಮಾರಿಯಿಂದ ರಕ್ಷಿಸಲಿರುವ ಸುರಕ್ಷತೆ, ಮುನ್ನೆಚ್ಚರಿಕೆಗಳನ್ನು ನೀಡೋಣ.
🖋 ಮುಹಮ್ಮದ್ ಶಾಫಿ ಅನ್ವಾರಿ ಅಸ್ಸಖಾಫಿ, ಕೊಡಗರಹಳ್ಳಿ
0 Post a Comment: