ಮಡಿಕೇರಿ TOC:-ಕೊರೊನಾ ವೈರಸ್ ಹರಡದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಸಿಆರ್‍ಪಿಸಿ ಕಾಯ್ದೆ 1973ರ ಕಲಂ 144(3)ರಡಿ ದತ್ತವಾದ ಅಧಿಕಾರದಂತೆ ಹೊರಡಿಸಲಾಗಿದ್ದ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಾರ್ಚ್, 31 ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಬುಕ್ಕಿಂಗ್ ಮಾಡಿ, ಆಗಮಿಸಿದ ಪ್ರವಾಸಿಗರು, home quಚಿಡಿಚಿಟಿಣiಟಿe ನಲ್ಲಿದ್ದರೆ ಅವರನ್ನು ಹೊರತುಪಡಿಸಿ ಉಳಿದಂತೆ ಕೊಡಗು ಜಿಲ್ಲೆಯಲ್ಲಿ ವಾಸ್ತವ್ಯ ಸೌಲಭ್ಯ ಹೊಂದಿರುವ ಎಲ್ಲಾ ರೀತಿಯ ಜಿಲ್ಲೆಯ ಐಷರಾಮಿ ಹೋಟೆಲ್, ಹೋಟೆಲ್ ಕಂ ಲಾಡ್ಜ್, ರೆಸಾರ್ಟ್, ಹೋಂಸ್ಟೇ, ಯಾವುದೇ ರೀತಿ ಚೌಲ್ಟ್ರಿ, ಡಾರ್ಮೆಟರಿ ಹಾಲ್ ಮುಂತಾದವುಗಳಲ್ಲಿ ಪ್ರವಾಸಿಗರು ಮತ್ತು ಸಾರ್ವಜನಿಕರು ತಂಗುವುದನ್ನು ನಿಷೇಧಿಸಿದೆ.
ಮುಂಬರುವ ದಿನಗಳಲ್ಲಿ ವಾಸ್ತವ್ಯಕ್ಕಾಗಿ ಆಗಮಿಸುವ ಬಗ್ಗೆ ಯಾವುದೇ ರೀತಿಯಿಂದ ಬುಕ್ಕಿಂಗ್ ನಡೆಸಿದ್ದಲ್ಲಿ ಈ ಬಗ್ಗೆ ಮುಂಚಿತವಾಗಿ ಸೂಕ್ತ ಮಾಹಿತಿ ನೀಡಿ ಬುಕ್ಕಿಂಗ್ ರದ್ದುಪಡಿಸುವುದು ಹಾಗೂ ಹೊಸ ಬುಕ್ಕಿಂಗ್‍ಗಳನ್ನು ಸ್ವೀಕರಿಸದಿರುವುದು. ಈ ಆದೇಶವನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಶಾಸನಬದ್ದವಾಗಿ ಹೊರಡಿಸಲಾಗಿದ್ದು, ಉಲ್ಲಂಘನೆಯು ಭಾರತೀಯ ದಂಡ ಸಂಹಿತೆ 1860 ರ ಕಲಂ 188 ರಡಿ ದಂಡನಾರ್ಹವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
0 Post a Comment: