ಭತ್ತ ಬೆಳೆ ಹೆಚ್ಚು ಇಳುವರಿ ಪಡೆದ ಕೃಷಿಕರಿಗೆ ಆತ್ಮೀಯ ಸನ್ಮಾನ ಮತ್ತು ಪ್ರಶಸ್ತಿ ಪ್ರಧಾನ

           ಮಡಿಕೇರಿ TOC:-ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಿಸಾನ್ ಮೇಳದಲ್ಲಿ ಭತ್ತ ಬೆಳೆ ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆದ ಕೃಷಿಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. 
2019-20ನೇ ಸಾಲಿನಲ್ಲಿ ರಾಜ್ಯ ಮಟ್ಟ ಭತ್ತ ಬೆಳೆ ಸ್ಪರ್ದೆಯಲ್ಲಿ ಆಯ್ಕೆಯಾದವರ ವಿವರ:-ಬಸವಣ್ಣಯ್ಯ ಪಿ.ಎಸ್, ಬಿನ್ ಸೋಮಯ್ಯ ಜೆ, ದೊಡ್ರಳ್ಳಿ, ಸೋಮವಾರಪೇಟೆ ಇವರು 2018-19 ನೇ ಸಾಲಿನ ಮುಂಗಾರು ಹಂಗಾಮಿ ಭತ್ತದ ಬೆಳೆಯಲ್ಲಿ 46.4 ಕ್ವಿಂಟಾಲ್/ ಟನ್ ಇಳುವರಿ ಪಡೆದು ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. 
ಜಿಲ್ಲಾ ಮಟ್ಟ ಬೆಳೆ ಸ್ಪರ್ಧೆಯಲ್ಲಿ ಆಯ್ಕೆಯಾದವರ ವಿವರ:-ಡಿ.ಎಸ್. ಈರಣ್ಣಯ್ಯ, ಬಿನ್.ಜೆ.ಸೋಮಯ್ಯ, ದುಂಡಳ್ಳಿ ಗ್ರಾಮ ಇವರು 2018-19 ನೇ ಸಾಲಿನಲ್ಲಿ ಮುಂಗಾರು ಹಂಗಾಮಿ ಭತ್ತದ ಬೆಳೆಯಲ್ಲಿ ಹೆಕ್ಟೇರ್‍ಗೆ 98.37 ಕ್ವಿಂಟಾಲ್ /ಟನ್ ಇಳುವರಿ ಪಡೆದು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಜೆ.ಸಿ. ಸತೀಶ್, ಬಿನ್. ಚನ್ನಪ್ಪ, ಗಂಗವಾರ ಗ್ರಾಮ, ಸೋಮವಾರಪೇಟೆ, ಇವರು 2018-19ನೇ ಸಾಲಿನ ಮುಂಗಾರು ಹಂಗಾಮಿ ಭತ್ತದ ಬೆಳೆಯಲ್ಲಿ ಹೆಕ್ಟೇರ್‍ಗೆ 98.18 ಕ್ವಿಂಟಾಲ್/ಟನ್ ಇಳುವರಿ ಪಡೆದು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
ಅಪ್ಪಾಜಿ ಎಂ. ಬಿನ್ ಎಸ್.ಕುಶಾಲಪ್ಪ, ಭುವನಗಿರಿಗ್ರಾಮ, ಸೋಮವಾರಪೇಟೆ ಇವರು 2018-19ನೇ ಸಾಲಿನ ಮುಂಗಾರು ಹಂಗಾಮಿ ಭತ್ತದ ಬೆಳೆಯಲ್ಲಿ ಹೆಕ್ಟೇರ್‍ಗೆ 98.18 ಕ್ವಿಂಟಾಲ್/ಟನ್ ಇಳುವರಿ ಪಡೆದು ಜಿಲ್ಲಾ ಮಟ್ಟದಲ್ಲಿ ತೃತೀಯ 94.97 ಸ್ಥಾನ ಗಳಿಸಿರುತ್ತಾರೆ.
ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದವರ ವಿವರ:-ಮಡಿಕೇರಿ ತಾಲ್ಲೂಕು:- ಕಾಳೇರಮ್ಮನ ಪಿ.ಪೂವಯ್ಯ, ಬಿನ್ ಪೆಮ್ಮಯ್ಯ, ಆವಂದೂರು ಗ್ರಾಮ, ಮಡಿಕೇರಿ ತಾಲ್ಲೂಕು ಇವರು 2018-19 ನೇ ಸಾಲಿನ ಮುಂಗಾರು ಹಂಗಾಮಿ ಭತ್ತದ ಬೆಳೆಯಲ್ಲಿ ಹೆಕ್ಟೇರ್‍ಗೆ 69.01 ಕ್ವಿಂಟಾಲ್/ಟನ್ ಇಳುವರಿ ಪಡೆದು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.  
ಕುಟ್ಟೇಟಿರ ಕೆ. ಕುಂಞಪ್ಪ, ಬಿನ್ ಕರುಂಬಯ್ಯ, ಕಡಿಯತ್ತೂರು ಗ್ರಾಮ, ಮಡಿಕೇರಿ ಇವರು 2018-19 ನೇ ಸಾಲಿನ ಮುಂಗಾರು ಹಂಗಾಮಿ ಭತ್ತದ ಬೆಳೆಯಲ್ಲಿ ಹೆಕ್ಟರ್‍ಗೆ 65.40 ಕ್ವಿಂಟಾಲ್/ ಟನ್ ಇಳುವರಿ ಪಡೆದು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
ಆಂಚೆರ ಎಂ. ತಮ್ಮಯ್ಯ, ಬಿನ್ ಮಾದಪ್ಪ, ಆವಂದೂರು ಗ್ರಾಮ, ಮಡಿಕೇರಿ ಇವರು 2018-19 ನೇ ಸಾಲಿನ ಮುಂಗಾರು ಹಂಗಾಮಿ ಭತ್ತದ ಬೆಳೆಯಲ್ಲಿ ಹೆಕ್ಟರ್‍ಗೆ 64.08 ಕ್ವಿಂಟಾಲ್/ಟನ್ ಇಳುವರಿ ಪಡೆದು ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ.
ಸೋಮವಾರಪೇಟೆ ತಾಲ್ಲೂಕು:-ಸೋಮವಾರಪೇಟೆ ತಾಲ್ಲೂಕಿನ ಕೆ.ಎಸ್.ಶಾಂತಪ್ಪ, ಬಿನ್ ಮಾದಪ್ಪ, ಸೋಮಪ್ಪ ಕೆ.ಬಿ, ಬಡುಬನಹಳ್ಳಿ ಗ್ರಾಮ ಇವರು 2018-19 ನೇ ಸಾಲಿನ ಮುಂಗಾರು ಹಂಗಾಮಿ ಭತ್ತದ ಬೆಳೆಯಲ್ಲಿ ಹೆಕ್ಟರ್‍ಗೆ 93.33 ಕ್ವಿಂಟಾಲ್/ಟನ್ ಇಳುವರಿ ಪಡೆದು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಎಸ್.ಎಸ್.ಧನಂಜಯ, ಬಿನ್ ನಂಜಪ್ಪ  ನೀರುಗುಂದ ಗ್ರಾಮ ಸೋಮವಾರಪೇಟೆ ಇವರು 2018-19 ನೇ ಸಾಲಿನ ಮುಂಗಾರು ಹಂಗಾಮಿ ಭತ್ತದ ಬೆಳೆಯಲ್ಲಿ ಹೆಕ್ಟೆರ್ ಗೆ 89.06 ಕ್ವಿಂಟಾಲ್/ಟನ್ ಇಳುವರಿ ಪಡೆದು ತಾಲ್ಲೂಕು ಮಟ್ಟದಲ್ಲಿ ದ್ವೀತಿಯ ಸ್ಥಾನ ಗಳಿಸಿರುತ್ತಾರೆ.
ಎಸ್.ಬಿ.ಲೋಕೇಶ್, ಲೇಟ್ ದೇವಯ್ಯ ಜಂಬೂರುಗ್ರಾಮ, ಸೋಮವಾರಪೇಟೆಯವರು 2018-19ನೇ ಸಾಲಿನ ಮುಂಗಾರು ಹಂಗಾಮ ಭತ್ತದ ಬೆಳೆಯಲ್ಲಿ ಹೆಕ್ಟೇರ್‍ಗೆ 87.01 ಕ್ವಿಂಟಾನ್/ ಟನ್ ಇಳುವರಿ ಪಡೆದು ತಾಲ್ಲೂಕು ಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ.
ವಿರಾಜಪೇಟೆ ತಾಲ್ಲೂಕು:- ಎ.ಬಿ.ಚಂಗಪ್ಪ, ಬಿನ್ ಎ.ಬಿ.ತಿಮ್ಮಯ್ಯ, ಕುರ್ಚಿ ಗ್ರಾಮ ವಿರಾಜಪೇಟೆ ಇವರು 2018-19ನೇ ಸಾಲಿನ ಮುಂಗಾರು ಹಂಗಾಮಿ ಭತ್ತದ ಬೆಳೆಯಲ್ಲಿ ಹೆಕ್ಟೇರ್‍ಗೆ 74.60 ಕ್ವಿಂಟಾಲ್/ಟನ್ ಇಳುವರಿ ಪಡೆದು ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಎ.ಎಸ್. ಕುಶಾಲಪ್ಪ, ಬಿನ್. ಸೋಮಯ್ಯ ಬೀರುಗಗ್ರಾಮ, ವಿರಾಜಪೇಟೆ ಇವರು 2018-19ನೇ ಸಾಲಿನ ಮುಂಗಾರು ಹಂಗಾಮಿ ಭತ್ತದ ಬೆಳೆಯಲ್ಲಿ ಹೆಕ್ಟೇರ್‍ಗೆ 78.81 ಕ್ವಿಂಟಾಲ್/ಟನ್ ಇಳುವರಿ ಪಡೆದು ತಾಲ್ಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
ಎಸ್.ಎಸ್.ಶಿವನಂಜಪ್ಪ, ಬಿನ್ ಎಸ್.ಪಿ.ಸುಬ್ರಾಯಪ್ಪ ಬಾಳಲೆ ಗ್ರಾಮ ವಿರಾಜಪೇಟೆ ಇವರು 2018-19 ನೇ ಸಾಲಿನ ಮುಂಗಾರು ಹಂಗಾಮಿ ಭತ್ತದ ಬೆಳೆಯಲ್ಲಿ ಹೆಕ್ಟೇರ್‍ಗೆ 69.67 ಕ್ವಿಂಟಾಲ್/ಟನ್ ಇಳುವರಿ ಪಡೆದು ತಾಲ್ಲೂಕು ಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. 
ಎಸ್.ಎಂ.ವಿನಯ್, ಬಿನ್ ಎಸ್.ಎ.ಮಹದೇವಪ್ಪ ನಾಲ್ಕೇರಿ ಗ್ರಾಮ ವಿರಾಜಪೇಟೆ ಇವರು 2018-19 ನೇ ಸಾಲಿನ ಮುಂಗಾರು ಹಂಗಾಮಿ ಭತ್ತದ ಬೆಳೆಯಲ್ಲಿ ಹೆಕ್ಟೇರ್‍ಗೆ 69.67 ಕ್ವಿಂಟಾಲ್/ಟನ್ ಇಳುವರಿ ಪಡೆದು ತಾಲ್ಲೂಕು ಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ.
ಆತ್ಮಯೋಜನೆಯ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಳ ವಿವರ:-ಸೋಮವಾರಪೇಟೆ ತಾಲ್ಲೂಕು ನಿರಂಜನ್ ಕೆ.ಎಂ. ತಂದೆ ಕೆ.ಎಂ ಮುರುಗೆಂದ್ರ, ಕುಸುಬೂರು ಗ್ರಾಮ, ಸೋಮವಾರಪೇಟೆ ತಾಲ್ಲೂಕು ಇವರು ಸಮಗ್ರ ಕೃಷಿ ಬೆಳೆ ಪದ್ಧತಿಯಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಿರುತ್ತಾರೆ. ಇವರಿಗೆ 2018-19 ನೇ ಸಾಲಿನ ಸೋಮವಾರಪೇಟೆ ತಾಲ್ಲೂಕಿನ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಪ್ರಮೀಳ ಚಿನ್ನಪ್ಪ ಪತಿ ಲೇಟ್ ಚಿನ್ನಪ್ಪ ಹಿರಿಕೆ ಗ್ರಾಮ ಸೋಮವಾರಪೇಟೆ ತಾಲ್ಲೂಕು ಇವರು ಸಾವಯವ ಕೃಷಿಯನ್ನು ಅವಲಂಬಿತರಾಗಿದ್ದು ಸಾವಯವ ಕೃಷಿಯಿಂದ ಹೆಚ್ಚಿನ ಲಾಭಗಳಿಸಿದ್ದು ಇತರೇ ರೈತರುಗಳಿಗೆ ಮಾರ್ಗದರ್ಶಕರಾಗಿರುತ್ತಾರೆ. 
ಇವರ ಉತ್ತಮ ಸಾಧನೆಗೆ 2018-19 ನೇ ಸಾಲಿನಲ್ಲಿ ಮಡಿಕೇರಿ ತಾಲ್ಲೂಕಿನಿಂದ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ದಿವಾಕರ್ ಕೆ.ಬಿ ತಂದೆ ಬಸವೇಗೌಡ ಕೆಲ ಕೊಡ್ಲಿಗ್ರಾಮ ಸೋಮವಾರ ಪೇಟೆ ತಲ್ಲೂಕು ಇವರು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಇವರಿಗೆ 2018-19 ನೇ ಸಾಲಿನಲ್ಲಿ ವಿರಾಜಪೇಟೆ ತಾಲ್ಲೂಕಿನ ತಾಲ್ಲೂಕು ಮಟ್ಟದ ಶ್ರೇಷ್ಠ ಕ್ರಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಮಡಿಕೇರಿ ತಾಲ್ಲೂಕು: ದಿನೇಶ್,ಪಿ.ಬಿ. ತಂದೆ ಬಿ. ಭೀಮಯ್ಯ, ಕೋಪಟ್ಟಿ ಗ್ರಾಮ ಮಡಿಕೇರಿ ತಾಲ್ಲೂಕು ಇವರು ಸಮಗ್ರ ಕೃಷಿ ಬೆಳೆ ಪದ್ದತಿಯಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಿರುತ್ತಾರೆ ಇವರಿಗೆ 2018-19 ಸಾಲಿನಲ್ಲಿ ವಿರಾಜಪೇಟೆ ತಾಲ್ಲೂಕಿನ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಇಂದಿರಾ ಕೆ.ಆರ್.ರವರ ಪತಿ ರಾಮಚಂದ್ರ ಕೆ.ಎಂ. ಹೊಸ್ಕೇರೆ ಗ್ರಾಮ,ಮಡಿಕೇರಿ ತಾಲ್ಲೂಕು ಇವರು ಸಾವಯವ ಕೃಷಿ ಅವಲಂಬಿತರಾಗಿದ್ದು, ಸಾವಯವ ಕೃಷಿಯಿಂದ ಹೆಚ್ಚಿನ ಲಾಭಗಳಿಸಿದ್ದು ಇತರೆ ರೈತರುಗಳಿಗೆ ಮಾರ್ಗ ದರ್ಶಕರಾಗಿರುತ್ತಾರೆ. ಇವರ ಉತ್ತಮ ಸಾಧನೆಗೆ 2018-19ನೇ ಸಾಲಿನಲ್ಲಿ ಮಡಿಕೇರಿ ತಾಲ್ಲೂಕಿನಿಂದ, ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 
ಅಮ್ಮಟಂಡ ಬಿ ಬೆಳ್ಳಿಯಪ್ಪ ತಂದೆ ಎ.ಕೆ.ಬಿದ್ದಪ್ಪ, ಹಾಕತ್ತೂರು ಗ್ರಾಮ, ಮಡಿಕೇರಿ ತಾಲ್ಲೂಕು ಇವರು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಕೃಷಿ ಸಂಸ್ಕರಣೆ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿರುತ್ತಾರೆ ಇವರಿಗೆ 2018-19ನೇ ಸಾಲಿನಲ್ಲಿ ವಿರಾಜಪೇಟೆ ತಾಲ್ಲೂಕಿನ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವಿರಾಜಪೇಟೆ ತಾಲ್ಲೂಕು: ಬಿ.ಪಿ.ರವಿಶಂಕರ್ ತಂದೆ ಬಿ.ಆರ್.ಪದ್ಮನಾಭರಾವ್, ಹೊದ್ದೂರು ಗ್ರಾಮ ವಿರಾಜಪೇಟೆ ತಾಲ್ಲೂಕು ಇವರು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ವೈಜ್ಷಾನಿಕ ಯಂತ್ರೋಪಕರ ಬಳಕೆ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.  ಇವರಿಗೆ 2018-19ನೇ ಸಾಲಿನಲ್ಲಿ ವಿರಾಜಪೇಟೆ ತಾಲ್ಲೂಕಿನ ತಾಲ್ಲೂಕು ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಡೈಸಿ ತಿಮ್ಮಯ್ಯ ಪತಿ ತಿಮ್ಮಯ್ಯ, ನಾಲ್ಕೇರಿ ಗ್ರಾಮ, ವಿರಾಜಪೇಟೆ ತಾಲ್ಲೂಕು ಇವರು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಕೃಷಿ ಸಂಸ್ಕರಣೆ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿರುತ್ತಾರೆ. ಇವರಿಗೆ 2018-19ನೇ ಸಾಲಿನಲ್ಲಿ ವಿರಾಜಪೇಟೆ ತಾಲ್ಲೂಕಿನ ತಾಲ್ಲೂಕು ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಹಮ್ಮದ್ ಹನೀಫ್. ತಂದೆ, ಕೆ.ಬಿ ಹಸನ್. ಮೈತಾಡಿ ಗ್ರಾಮ, ವಿರಾಜಪೇಟೆ ತಾಲ್ಲೂಕಿನ ಇವರು ಸಮಗ್ರ ಕೃಷಿ ಬೆಳೆ ಪದ್ಧತಿಯಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಿರುತ್ತಾರೆ ಇವರಿಗೆ 2018-19ನೇ ಸಾಲಿನಲ್ಲಿ ವಿರಾಜಪೇಟೆ ತಾಲ್ಲೂಕಿನ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Previous Post
Next Post

0 Post a Comment: