ಸಹ ಪ್ರಯಾಣಿಕರ ಗಮನಕ್ಕೆ

        ಮಡಿಕೇರಿ TOC :-ಮಾರ್ಚ್, 19 ರಂದು ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ವ್ಯಕ್ತಿಯು ದುಬೈನಿಂದ ಬೆಂಗಳೂರಿಗೆ ವಿಮಾನ ಮೂಲಕ ಆಗಮಿಸಿ, ಕೊಡಗಿಗೆ ರಾಜಹಂಸ ಬಸ್ಸಿನ ಮೂಲಕ ಪ್ರಯಾಣ ಬೆಳೆಸಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ. 
 ಸೋಂಕಿತ ವ್ಯಕ್ತಿಯು ಪ್ರಯಾಣ ಬೆಳೆಸಿದ ವಿಮಾನ ಮತ್ತು ಬಸ್ ವಿವರಗಳು ಇಂತಿವೆ. ಮಾರ್ಚ್, 15 ರಂದು ದುಬೈನಿಂದ ಬೆಂಗಳೂರಿಗೆ ಇಂಡಿಗೋ ವಿಮಾನ ಸಂಖ್ಯೆ 6ಇ96 ಮುಖಾಂತರ ಸಂಜೆ 4:15 ಕ್ಕೆ ಬಂದಿದ್ದು, ಅದೇ ದಿನ ರಾತ್ರಿ 11:33 ಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ರಾಜಹಂಸ ಬಸ್ ಸಂಖ್ಯೆ ಕೆ.ಎ19 ಎಫ್ 3170 ಮೂಲಕ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮಡಿಕೇರಿಗೆ (ವಿರಾಜಪೇಟೆ-ಮೂರ್ನಾಡು) ಮಾರ್ಗವಾಗಿ ಸಂಚರಿಸುವ ಬಸ್ಸಿನಲ್ಲಿ ಮತ್ತು ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ ಎಲ್ಲಾ ಪ್ರಯಾಣಿಕರು ತುರ್ತಾಗಿ ತಮ್ಮ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಲು (ವರದಿ ಮಾಡಿಕೊಳ್ಳಲು) ಕೊಡಗು ಜಿಲ್ಲಾಡಳಿತ ಈ ಮೂಲಕ ಪ್ರಯಾಣಿಸಿದ ಸಹ ಪ್ರಯಾಣಿಕರಿಗೆ ಕೊಡಗು ಜಿಲ್ಲಾಡಳಿತ ಸಲಹೆ ಮಾಡಿದೆ.
Previous Post
Next Post

0 Post a Comment: