ಮಡಿಕೇರಿ ಆ.20(ಟೈಮ್ಸ್ ಆಫ್ ಕೂರ್ಗ್):-ಬಡವರು, ನಿರ್ಗತಿಕರು, ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಡಿ.ದೇವರಾಜ ಅರಸು ಭವನದಲ್ಲಿ ಮಂಗಳವಾರ ನಡೆದ ದಿ.ಡಿ. ದೇವರಾಜ ಅರಸು ಅವರ 104ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಡಿ.ದೇವರಾಜ ಅರಸು ಅವರ ಪ್ರಾಮುಖ್ಯತೆಯನ್ನು ಇಂದಿನ ಯುವಜನರು ತಿಳಿದುಕೊಳ್ಳಬೇಕು. ಇಂದು ನಾವು ಏನು ಮಾಡಿದ್ದೇವೆ ಎಂಬುದು ನಾಳಿನ ಜನರಿಗೆ ಗೊತ್ತಾಗಬೇಕು. ಆ ನಿಟ್ಟಿನಲ್ಲಿ ಕಾರ್ಯಗಳನ್ನು ಮಾಡಬೇಕು. ಅಂತಹ ಸಾಲಿಗೆ ಡಿ.ದೇವರಾಜ ಅರಸು ಅವರು ಸಲ್ಲುತ್ತಾರೆ ಎಂದು ಅವರು ತಿಳಿಸಿದರು. ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಅವರು ಮಾತನಾಡಿ ಡಿ.ದೇವರಾಜ ಅರಸು ಅವರು ಅಸಾಮಾನ್ಯ ಶಕ್ತಿ ಎಂದು ಅವರು ಬಣ್ಣಿಸಿದರು. ಹಲವು ಏರಿಳಿತಗಳನ್ನು ಕಂಡ ಅಪರೂಪದ ರಾಜಕಾರಣಿ. ಅಖಂಡ ಕರ್ನಾಟಕ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಡಿ.ದೇವರಾಜ ಅರಸು ಅವರ ಕರ್ತವ್ಯ ನಿಷ್ಠೆ ಅದ್ಭುತವಾದದ್ದು ಎಂದರು. ಸಾಮಾಜಿಕ ತಾರತಮ್ಯ ನಿವಾರಣೆಗೆ ಪ್ರಯತ್ನಿಸಿದರು. ಹಿಂದುಳಿದವರ ಪರವಾಗಿ ಮೊಟ್ಟ ಮೊದಲಾಗಿ ಧ್ವನಿ ಎತ್ತಿದವರು ಡಿ.ದೇವರಾಜ ಅರಸು ಅವರು ಎಂದರು. ಹಾವನೂರು ವರದಿ ಜಾರಿ, ಭೂಸುಧಾರಣೆ ಮತ್ತಿತರ ಕಾರ್ಯಕ್ರಮಗಳು ಹಾಗೂ ಜೀತಪದ್ಧತಿ ಮತ್ತು ಮಲಹೊರುವ ಪದ್ಧತಿ ನಿರ್ಮೂಲನೆ ಮಾಡಿದರು ಎಂದರು. ಡಿ.ದೇವರಾಜ ಅರಸು ಅವರು ಸ್ವತಃ ಜಮೀನುದಾರರು ಹಾಗೂ ಅರಸು ಕುಟುಂಬದಲ್ಲಿ ಹುಟ್ಟಿ ಉನ್ನತ ಮಟ್ಟದಲ್ಲಿ ಇದ್ದರೂ ಸಹ ಬಡವರ ಪರವಾಗಿ ಯೋಚಿಸಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದರು. ದೇಶದ ಇತಿಹಾಸದಲ್ಲಿಯೇ ಭೂ ಸುಧಾರಣೆಯನ್ನು ಜಾರಿಗೊಳಿಸಿದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದರು. ವ್ಯವಸ್ಥೆಯ ವಿರುದ್ಧ ಹೋರಾಡುವುದು ಅಷ್ಟು ಸುಲಭವಲ್ಲ. ಆದರೆ ದಡ ಸೇರುವುದು ಕಷ್ಟ. ಅಂತಹದರಲ್ಲಿ ಡಿ.ದೇವರಾಜ ಅರಸು ಅವರು ದಡ ಸೇರಿದರು ಎಂದು ಅವರು ಸ್ಮರಿಸಿದರು. ಡಿ.ದೇವರಾಜ ಅರಸು ಅವರು ಪಲಾಯನ ಮಾಡುವ ವ್ಯಕ್ತಿಯಾಗಿರಲಿಲ್ಲ. ಯಾವುದೇ ಸಮಸ್ಯೆಗಳು ಬಂದಾಗ ಅದನ್ನು ಸಮರ್ಥನೆ ಮಾಡುವ ಶಕ್ತಿ ಇತ್ತು, ತಾಳ್ಮೆ, ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು. ಡಿ.ದೇವರಾಜ ಅರಸು ಅವರು ಒಬ್ಬ ವ್ಯಕ್ತಿಯಾಗಿ, ಶಕ್ತಿ ರೂಪದಲ್ಲಿ ಬಂದು ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದರು. ಡಿ.ದೇವರಾಜ ಅರಸು ಅವರ ಚಿಂತನೆ, ಪರಿವರ್ತನೆ, ಪರಿಪೂರ್ಣತೆ, ತ್ಯಾಗಮಯ ಜೀವನ ಸ್ಮರಿಸಿದ ಗುಡೂರು ಭೀಮಸೇನಾ ಅವರು ಅರಸು ಅವರು ಸ್ವಾರ್ಥಕ್ಕಾಗಿ ಎಂದೂ ಸಹ ಕೆಲಸ ಮಾಡಲಿಲ್ಲ. ಕೇಂದ್ರದಲ್ಲಿ ಮಂಡಲ ವರದಿ ಜಾರಿಗೊಳಿಸಲು ಇವರ ಕಾರ್ಯಕ್ರಮಗಳೇ ಸಾಕ್ಷಿಯಾದವು ಎಂದರು. ಅಭಿವೃದ್ಧಿಯ ಹರಿಕಾರ ಡಿ.ದೇವರಾಜ ಅರಸು ಅವರನ್ನು ಸದಾ ಸ್ಮರಿಸಬೇಕಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಇತರರು ಇದ್ದರು. ಬಿಸಿಎಂ ಇಲಾಖಾ ಅಧಿಕಾರಿ ಶಿವಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಹರ್ಷಿತ ತಂಡ ನಾಡಗೀತೆ ಹಾಡಿದರು. ಭಾರತಿ ಅವರು ನಿರೂಪಿಸಿ ಸದ್ಭಾವನಾ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾ ಬೋಧಿಸಿದರು.
ದಿ.ಡಿ.ದೇವರಾಜ ಅರಸು ಅವರ 104 ನೇ ಜನ್ಮ ದಿನಾಚರಣೆ
Categories:
ಕೊಡಗು
Publish Date:
أغسطس 20, 2019

0 Post a Comment: