ಮಡಿಕೇರಿ ಆ.16(ಕರ್ನಾಟಕ ವಾರ್ತೆ):-ಮಡಿಕೇರಿ ಆಕಾಶವಾಣಿ ಕೇಂದ್ರದಿಂದ ಆಗಸ್ಟ್, 19 ರಿಂದ ಪ್ರತಿ ದಿನ ಬೆಳಗ್ಗೆ 8:35ಕ್ಕೆ ಕೊಡಗಿನ ಸಂತ್ರಸ್ತರಿಗೆ ಆರೋಗ್ಯ ಮಾಹಿತಿ, ಸಾಂತ್ವನ ಹಾಗೂ ಮಾನಸಿಕ ಸ್ಥೈರ್ಯ ತುಂಬುವ ಸರಣಿ ಕಾರ್ಯಕ್ರಮ ಪ್ರಸಾರವಾಗಲಿದೆ. ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರೊಂದಿಗೆ ದಿಗ್ವಿಜಯ್ ಬಿ. ಸಂದರ್ಶನ ನಡೆಸಲಿದ್ದಾರೆ. ಮರುಪ್ರಸಾರ ಪ್ರತಿ ದಿನ ಸಾಯಂಕಾಲ 5 ಗಂಟೆಗೆ ಇರುತ್ತದೆ ಎಂದು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ವಿಜಯ್ ಅಂಗಡಿ ಅವರು ತಿಳಿಸಿದ್ದಾರೆ.
Categories:
ಕೊಡಗು
Publish Date:
أغسطس 16, 2019
ಮಡಿಕೇರಿ ಆ.16(ಕರ್ನಾಟಕ ವಾರ್ತೆ):-ಮಡಿಕೇರಿ ಆಕಾಶವಾಣಿ ಕೇಂದ್ರದಿಂದ ಆಗಸ್ಟ್, 19 ರಿಂದ ಪ್ರತಿ ದಿನ ಬೆಳಗ್ಗೆ 8:35ಕ್ಕೆ ಕೊಡಗಿನ ಸಂತ್ರಸ್ತರಿಗೆ ಆರೋಗ್ಯ ಮಾಹಿತಿ, ಸಾಂತ್ವನ ಹಾಗೂ ಮಾನಸಿಕ ಸ್ಥೈರ್ಯ ತುಂಬುವ ಸರಣಿ ಕಾರ್ಯಕ್ರಮ ಪ್ರಸಾರವಾಗಲಿದೆ. ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರೊಂದಿಗೆ ದಿಗ್ವಿಜಯ್ ಬಿ. ಸಂದರ್ಶನ ನಡೆಸಲಿದ್ದಾರೆ. ಮರುಪ್ರಸಾರ ಪ್ರತಿ ದಿನ ಸಾಯಂಕಾಲ 5 ಗಂಟೆಗೆ ಇರುತ್ತದೆ ಎಂದು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ವಿಜಯ್ ಅಂಗಡಿ ಅವರು ತಿಳಿಸಿದ್ದಾರೆ.

0 Post a Comment: