ನೆಲ್ಯಹುದಿಕೇರಿ ( ಟೈಮ್ಸ್ ಆಫ್ ಕೂರ್ಗ್) : ಸುನ್ನಿ ಯುವಜನ ಸಂಘ ( SYS ) ಕೊಡಗು ವತಿಯಿಂದ ಐಟಿ ಸೆಲ್ ಪ್ರೋಗ್ರಾಮ್ ನೆಲ್ಯಹುದಿಕೇರಿ ದಾರುನ್ನಜಾತ್ ಎಜ್ಯುಕೇಶನಲ್ ಸೆಂಟರ್ ನಲ್ಲಿ ಆರಂಭಗೊಂಡಿದೆ. ಇಂದು ಮತ್ತು ನಾಳೆ ಕಾರ್ಯಕ್ರಮ ನೆಲ್ಯಹುದಿಕೇರಿಯಲ್ಲಿ ನಡೆಯಲಿದೆ. ಸಂತ್ರಸ್ತರು ನೆರೆಯಲ್ಲಿ ಕಳೆದುಕೊಂಡ ಅಗತ್ಯ ಡಾಕ್ಯುಮೆಂಟ್ ( ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆರ್ ಟಿಸಿ, ಪಾಸ್ಪೋರ್ಟ್ ಇತ್ಯಾದಿ) ಗಳನ್ನು ತೆಗೆದುಕೊಡುವ ಕಾರ್ಯಕ್ರಮವಾಗಿದ್ದು..ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಬೇಕೆಂದು ಎಸ್ ವೈ ಎಸ್ ಕೊಡಗು ಜಿಲ್ಲಾಧ್ಯಕ್ಷರಾದ ಹಫೀಳ್ ಸಅದಿ ಪ್ರಕಟಣೆಯಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಹಲವು ಕಡೆಗಳಿಂದ ಸಂತ್ರಸ್ತರಿಗೆ ಬಂದ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿದ್ದು, ಅದನ್ನು ಆದಷ್ಟೂ ಬೇಗ ತಲುಪಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.


0 Post a Comment: