✍ ಶರೀಫ್ ಎ.ಪಿ. ಹೊಸತೋಟ
ಭೀಕರ ಪ್ರವಾಹಕ್ಕೆ ಸಿಲುಕಿ ಮನೆ ಮಠಗಳನ್ನು ಕಳೆದು ಬೀದಿಪಾಲಾಗಿರುವ ನೂರಾರು ಕುಟುಂಬಗಳು ತಂಗಲು ಒಂದು ಆಶ್ರಯವಿಲ್ಲದೆ ಕಂಗಾಲಾದಾಗ ಅವರಿಗೆ ವಸತಿ ನಿರ್ಮಿಸಲು ಎರೆಡು ಏಕರೆ ದಾನ ಮಾಡಿದ ಅಬ್ದುಲ್ಲ ಹಾಜಿ ನಿಜಕ್ಕೂ ಗ್ರೇಟ್.. ಎರಡು ಎಕರೆ ನೀಡಿದ ಆ ಮನಸ್ಸು ಸಾವಿರ ಎಕರೆಗಳಷ್ಟು ವಿಶಾಲವಾದದ್ದು... ಈ ಕಾಲದಲ್ಲೂ ಇಂತಹ ಮನೋಭಾವದ ಜನರಿದ್ದಾರಾ ಎಂದನಿಸಿತು..ಕಾರಣ ಇವರಿಗೆ ಆ ಜಾಗ ಕೊಟ್ಟು ಮುಂದಿನ ಚುನಾವಣೆಯಲ್ಲಿ ಮತ ಕೇಳಬೇಕಾಗಿಲ್ಲ... ಸೀಟು ಪಡೆಯುವ ಉದ್ದೇಶವೂ ಇಲ್ಲ.. ಹೊರತು ವಸತಿ ಕಳೆದುಕೊಂಡು ಬೀದಿಪಾಲಾದ ನಿರಾಶ್ರಿತರಿಗೆ ಸಿಗುವ ಸಂತೋಷವನ್ನು ಮಾತ್ರ ಮನಸ್ಸಿನಲ್ಲಿ ಕಂಡು ಇಂತಹ ಕೆಲಸವನ್ನು ಮಾಡುತ್ತಾರೆ.. ಇದರ ಮೂಲಕ ಪರಲೋಕ ವಿಜಯ ಪಡೆಯುವುದೇ ಅವರ ಮೂಲ ಧ್ಯೇಯ. ಅಲ್ಲಾಹು ತಆಲ ಅವರಿಗೆ ಸ್ವರ್ಗದಲ್ಲೊಂದು ಭವನ ನೀಡಿ ಅನುಗ್ರಹಿಸಲಿ -ಆಮೀನ್ *ಕೋಟಿಗಟ್ಟಲೆ ಖಾಸಗಿ ಸೊತ್ತು ಸಂಪಾದಿಸಿ ಸರ್ಕಾರದ ಖಜಾನೆಯಿಂದಲೂ ಅರ್ಹ ಪರಿಹಾರ ಒದಗಿಸಿಕೊಡಲು ಮುಜುಕರ ತೋರುವ,ಹಿಂದೇಟು ಹಾಕುವ ನಾಲಾಯಕ್ ರಾಜಕರಣಿಗಳಿಗೆ ಕೊಂಡಂಗೇರಿಯ ಅಬ್ದುಲ್ಲ ಹಾಜಿ.. ಮಾದರಿಯಾಗಿದ್ದಾರೆ.. ನಿಮ್ಮಂತವರನ್ನು ಇಂತಹ ಸೇವೆಗಳಿಗಾಗಿಯೇ ಜನರು ಆರಿಸಿ ಜನರ ಖಜಾನೆಯಿಂದಲೇ ಸಾವಿರಾರು ರುಪಾಯಿ ಸಂಬಳ, ಹವಾನಿಯಂತ್ರಿತ ಕಾರು ಬೇರೆ ನೀಡಿ ಐದು ವರ್ಷಕ್ಕೊಮ್ಮೆ ಕ್ಷೇತ್ರಕ್ಕೆ ಭೇಟಿ ಕೊಟ್ಟರೆ ಸಾಕೇ..? ನಿರಾಶ್ರಿತರನ್ನು ಒಮ್ಮೆ ಭೇಟಿನೀಡಿ ಏನಾದರೊಂದು ಭರವಸೆಯ ಮಾತುಗಳನ್ನಾಡಿ ಚಾನಲ್‌ಗಳ ಮುಂದೆ ಕೊಚ್‌ಕೊಳ್ಳುವುದು ದೊಡ್ಡ ವಿಷಯವಿಲ್ಲ..ನಿಮ್ಮನ್ನು ಆಯ್ಕೆ ಮಾಡಿರುವುದೇ ಜನಸೇವೆಗಾಗಿ...ಈ ಪದವನ್ನು ಪ್ರತಿ ಐದು ವರ್ಷಕೊಮ್ಮೆ ಚುನಾವಣೆಯ ಸಂದರ್ಭಗಳಲ್ಲಿ ಬಳಸುತ್ತಾರೆ ಹೊರತು ಪ್ರಾಯೋಗಿಕವಾಗಿ ಅಳವಡಿಸಿಕೊಂಡವರು ಬಹಳ ವಿರಳ .. ನಿಮಗೆ ಅಬ್ದುಲ್ಲ ಹಾಜಿಯಿಂದ ಇನ್ನಷ್ಟು ಕಲಿಯಲಿಕ್ಕಿದೆ..!

0 Post a Comment: