ಮಡಿಕೇರಿ ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಕೊಡಗು ಜಿಲ್ಲಾ ನೆಹರು ಯುವ : ವತಿಯಿಂದ 2018-19ನೇ ಸಾಲಿನ ಜಿಲ್ಲಾ ಯುವ ಸಂಘ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಘ ಸಂಸ್ಥೆಗಳ ನೊಂದಣಿ ಅಧಿನಿಯಮ 1960ರ ಪ್ರಕಾರ ನೋಂದಾವಣೆಯಾಗಿ ನೆಹರು ಯುವ ಕೇಂದ್ರದಲ್ಲಿ ಮಾನ್ಯತೆ ಪಡೆದು ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕøತಿಕವಾಗಿ ಕ್ರಿಯಾತ್ಮಕವಾದ ಚಟುವಟಿಕೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಸಮುದಾಯಿಕ, ಗ್ರಾಮದ ಅಭಿವೃದ್ಧಿಗಾಗಿ ನಿಸ್ವಾರ್ಥತೆಯಿಂದ ಸೇವೆಯನ್ನು ಸಲ್ಲಿಸಿರುವ ಗ್ರಾಮೀಣ ಯುವಕ ಸಂಘ, ಯುವತಿ ಮಂಡಳಿಯನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ “ಯುವ ಸಂಘ ಪ್ರಶಸ್ತಿ” ನೀಡಲಾಗುವುದು. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಯುವಕ ಸಂಘ/ ಮಂಡಳಿ ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯುತ್ತದೆ. ಯುವ ಸಂಘಗಳು ಕಳೆದ ವರ್ಷ 2018ರ ಏಪ್ರಿಲ್, 01 ರಿಂದ 2019ರ ಮಾರ್ಚ್, 31 ರ ಅವಧಿಯಲ್ಲಿ ಸಮುದಾಯದ ಬೆಳವಣಿಗೆಗೆ ಸಲ್ಲಿsಸಿರುವ ಸ್ವಯಂ ಸೇವಾ ಕಾರ್ಯಗಳ ದೃಡೀಕರಣ ಪತ್ರಗಳು, ಭಾವಚಿತ್ರ ಇತ್ಯಾದಿ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು. ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಯುವಜನ ಸಮನ್ವಯಾಧಿಕಾರಿಗಳ ಕಾರ್ಯಾಲಯ ನೆಹರು ಯುವ ಕೇಂದ್ರ, ಯಶುನಿಲಯ, ಬ್ಲಾಕ್ ನಂ:8, ಕಾವೇರಿ ಲೇಔಟ್, ಮಡಿಕೇರಿ–571201 ಇವರಿಂದ ಕಾರ್ಯಾಲಯದ ಕೆಲಸದ ವೇಳೆಯಲ್ಲಿ ಪಡೆದು, ಭರ್ತಿ ಮಾಡಿದ ಆರ್ಜಿಯನ್ನು ಎಲ್ಲಾ ದಾಖಲೆಗಳೊಂದಿಗೆ ಆಗಸ್ಟ್, 31 ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಲು ಕೋರಿದೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ:08272-225470 ಅನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಸುವ ಯುವಕ ಸಂಘ/ ಯುವತಿ ಮಂಡಳಿ ಕಳೆದ ಎರಡು ವರ್ಷಗಳಲ್ಲಿ ಪ್ರಶಸ್ತಿ ಪಡೆದಿದ್ದರೆ ಆ ಯುವಕ ಸಂಘ/ ಯುವತಿ ಮಂಡಳಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಜಿ ಸಲ್ಲಿಸುವಂತ ಯುವಕ, ಯುವತಿ ಮಂಡಳಿ ಜಿಲ್ಲಾ ಸಹಕಾರಿ ಸಂಘ ನೋಂದಣಿ ಕಾಯ್ದೆಡಿಯಲ್ಲಿ ನೋಂದವಣೆಗೊಂಡಿರಬೇಕು ಮತ್ತು ನೆಹರು ಯುವ ಕೆಂದ್ರದಲ್ಲಿ ಸಂಯೋಜನೆಗೊಂಡಿರಬೇಕು. ಯುವಕ ಸಂಘ ಮತ್ತು ಯುವತಿ ಮಂಡಳಿಯ ಆಂತರಿಕ ಲೆಕ್ಕ ಪರಿಶೋಧನೆಯ ಪ್ರತಿ ಕಡ್ಡಾಯವಾಗಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಅವರು ತಿಳಿಸಿದ್ದಾರೆ.
ಯುವ ಸಂಘ ಪ್ರಶಸ್ತಿಗೆ ಅರ್ಜಿ ಆಹ್ವಾನ
Categories:
ಕೊಡಗು
Publish Date:
أغسطس 16, 2019

0 Post a Comment: