ಮಡಿಕೇರಿ ಆ.16(ಕರ್ನಾಟಕ ವಾರ್ತೆ):-ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ಮೋಟಾರು ವಾಹನ ನಿರೀಕ್ಷಕರು ತಪಾಸಣೆ ನಡೆಸಿದ ಸಂದರ್ಭ, ವಿವಿಧ ಪ್ರಕರಣಗಳಲ್ಲಿ ಪ್ರಕರಣ ದಾಖಲಿಸಿದ ಹಾಗೂ ತೆರಿಗೆ ಪಾವತಿಸದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಈ ವಾಹನಗಳ ಮುಂದೆ ಹೇಳಲಾದ ಪೊಲೀಸ್ ಠಾಣೆಗಳ ಸುಪರ್ಧಿಯಲ್ಲಿ ಇಡಲಾಗಿದೆ. ಈ ವಾಹನಗಳನ್ನು ಆಗಸ್ಟ್, 29 ರಂದು ಮಧ್ಯಾಹ್ನ 3 ಗಂಟೆಗೆ ವಾಹನ ಇರುವ ಸ್ಥಿತಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಹಿರಂಗ ಹರಾಜು ಮಾಡಲಾಗುವುದು. ವಾಹನವನ್ನು ಮುಂದೆ ಹೇಳಲಾದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇರಿಸಲಾಗಿದ್ದು, ಆಸಕ್ತರು ವಾಹನವನ್ನು ಆ ಸ್ಥಳದಲ್ಲಿಯೇ ಪರಿಶೀಲಿಸತಕ್ಕದ್ದು. ವಾಹನ ಸಂ: ಕೆಎ19/8163 (ಎಚ್.ಜಿ.ವಿ.)- ನಾಪೋಕ್ಲು ಪೊಲೀಸ್ ಠಾಣೆ, ನಾಪೋಕ್ಲು ಚಾಸಿಸ್ ಸಂ: ಎಂಬಿ8ಎನ್‍ಎಫ್4ಎಇಇ8121091 (ಮೋಟಾರ್ ಸೈಕಲ್) ಆರ್‍ಟಿಒ ಮಡಿಕೇರಿ, 37012 (ಎಲ್.ಎಂ.ವಿ)-ಶನಿವಾರಸಂತೆ ಪೊಲೀಸ್ ಠಾಣೆ, ಶನಿವಾರಸಂತೆ. ವಾಹನ ಸಂ:ಕೆ.ಎಲ್60/6110 (ಎಚ್‍ಜಿವಿ) ಕುಶಾಲನಗರ ಪೊಲೀಸ್ ಠಾಣೆ. ಹರಾಜಿನಲ್ಲಿ ಭಾಗಹಿಸುವವರು ಹೆಚ್ಚಿನ ಮಾಹಿತಿಗೆ ಮಡಿಕೇರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರು ತಿಳಿಸಿದ್ದಾರೆ.
ಬಹಿರಂಗ ಹರಾಜು
Categories:
ಕೊಡಗು
Publish Date:
أغسطس 16, 2019

0 Post a Comment: